HomeLatest Newsಯಾತ್ರೆ ಆರಂಭವಾದ ಕೇವಲ 5 ದಿನಗಳಲ್ಲೇ ಕರಗಿದ ಹಿಮಲಿಂಗ: ಅಮರನಾಥ ಯಾತ್ರಿಕರಲ್ಲಿ ಭಾರಿ ನಿರಾಸೆ

ಯಾತ್ರೆ ಆರಂಭವಾದ ಕೇವಲ 5 ದಿನಗಳಲ್ಲೇ ಕರಗಿದ ಹಿಮಲಿಂಗ: ಅಮರನಾಥ ಯಾತ್ರಿಕರಲ್ಲಿ ಭಾರಿ ನಿರಾಸೆ

ಶ್ರೀನಗರ: ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾದ ಕೇವಲ ಐದು ದಿನಗಳಲ್ಲಿಯೇ ಅಮರನಾಥ ಗುಹೆಯಲ್ಲಿರುವ ಸ್ವಯಂಭೂ ಹಿಮರೂಒಇ ಶಿವಲಿಂಗ ಕರಗುತ್ತಿದ್ದು, ಈ ವರ್ಷ ಯಾತ್ರಿಕರಲ್ಲಿ ನಿರಾಸೆ ಮೂಡಿಸಿದೆ.

ಸಾಮಾನ್ಯವಾಗಿ ಶ್ರಾವಣ ಮಾಸದ ಬಹುಭಾಗದಲ್ಲಿ ಭಕ್ತರಿಗೆ ದರ್ಶನ ನೀಡುವ ಹಿಮಲಿಂಗವು, ಈ ಬಾರಿ ಯಾತ್ರೆ ಆರಂಭವಾದ ಐದು ದಿನಗಳಲ್ಲೇ ಬಹುತೇಕ ಕರಗಿದೆ ಎಂದು ತಿಳಿದುಬಂದಿದೆ. ಇದು ಭಕ್ತರಲ್ಲಿ ಕಸಿವಿಸಿವುಂಟುಮಾಡಿದೆ. ಹೆಚ್ಚುತ್ತಿರುವ ತಾಪಮಾನ, ಹವಾಮಾನ ವೈಪರೀತ್ಯ ಹಾಗೂ ಹವಾಮಾನ ಬದಲಾವಣೆಯ ಪರಿಣಾಮ ಅಮರನಾಅಥ ಶಿವಲಿಂಗ ಕರಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಂಡು ಹಿಮದಿಂದ ಸ್ವಾಭಾವಿಕವಾಗಿ ರೂಪುಗೊಳ್ಳುವ ಶಿವಲಿಂಗದ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಗುಹೆಗೆ ಆಗಮಿಸಿದ ಅನೇಕ ಭಕ್ತರಿಗೆ ಪೂರ್ಣಾಕಾರದ ಹಿಮಲಿಂಗದ ದರ್ಶನವಾಗದೇ ನಿರಾಸೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಶ್ಮೀರ ಕಣಿವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಇದರ ಜೊತೆಗೆ ಮಳೆಯ ಮಾದರಿಯಲ್ಲಿನ ಬದಲಾವಣೆ ಮತ್ತು ಗುಹೆಯೊಳಗಿನ ತಾಪಮಾನ ಏರಿಕೆಯಿಂದ ಹಿಮಲಿಂಗವು ವೇಗವಾಗಿ ಕರಗಿರಬಹುದು ಎಂದು ಅಂದಾಜಿಸಲಾಗಿದೆ.

ಅಮರನಾಥ ಗುಹೆಯ ಮೇಲ್ಭಾಗದಿಂದ ಹನಿಹನಿಯಾಗಿ ಬೀಳುವ ನೀರು ಅತಿ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟುತ್ತಾ ಸ್ವಾಭಾವಿಕವಾಗಿ ಹಿಮಲಿಂಗದ ರೂಪ ಪಡೆಯುತ್ತದೆ. ಚಂದ್ರನ ಬೆಳವಣಿಗೆ ಮತ್ತು ಕ್ಷಯಕ್ಕೆ ಅನುಗುಣವಾಗಿ ಹಿಮಲಿಂಗದ ಗಾತ್ರವೂ ಹೆಚ್ಚುವುದು ಮತ್ತು ಕಡಿಮೆಯಾಗುವುದು ಧಾರ್ಮಿಕ ನಂಬಿಕೆಯಾಗಿದೆ.

ಇನ್ನು ಹಿಮಲಿಂಗವು ಕರಗುತ್ತಿದ್ದರೂ ಅಮರನಾಥ ಯಾತ್ರೆ ಎಂದಿನಂತೆ ಮುಂದುವರಿಯುತ್ತಿದೆ. ಭಕ್ತರು ಗುಹೆಯ ದರ್ಶನ, ವಿಶೇಷ ಪೂಜೆ ಹಾಗೂ ಶಿವನ ಆರಾಧನೆಯಲ್ಲಿ ಭಾಗವಹಿಸುತ್ತಿದ್ದಾರೆ. ಯಾತ್ರಿಕರ ಸುರಕ್ಷತೆ ಹಾಗೂ ಸೌಲಭ್ಯಕ್ಕಾಗಿ ಆಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular