HomeBusinessಕೋಟ್ಯಂತರ EPF ಸದಸ್ಯರಿಗೆ ಬಂಪರ್ ಗುಡ್ ನ್ಯೂಸ್ ಜುಲೈ 15ಕ್ಕೆ ₹1.44 ಲಕ್ಷ ಕೋಟಿ PF...

ಕೋಟ್ಯಂತರ EPF ಸದಸ್ಯರಿಗೆ ಬಂಪರ್ ಗುಡ್ ನ್ಯೂಸ್ ಜುಲೈ 15ಕ್ಕೆ ₹1.44 ಲಕ್ಷ ಕೋಟಿ PF ಬಡ್ಡಿ ಖಾತೆಗೆ ಜಮೆ

ಬೆಂಗಳೂರು: ದೇಶಾದ್ಯಂತ ಇರುವ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ನಿಗದಿಪಡಿಸಲಾಗಿರುವ ಶೇಕಡಾ 8.25ರಷ್ಟು ಬಡ್ಡಿ ಹಣ ನಿಮ್ಮ ಖಾತೆಗೆ ಯಾವಾಗ ಜಮೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಕೊನೆಗೂ ಅಧಿಕೃತ ಡೇಟ್ ಸಿಕ್ಕಿದೆ. ಜುಲೈ 15ರೊಳಗೆ ದೇಶದ ಸುಮಾರು 34 ಕೋಟಿ ಪಿಎಫ್ ಖಾತೆದಾರರ ಅಕೌಂಟ್‌ಗೆ ಬಡ್ಡಿ ಹಣ ನೇರವಾಗಿ ವರ್ಗಾವಣೆಯಾಗಲಿದೆ

ಈ ಬಾರಿ ಒಟ್ಟು 1.44 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಇಪಿಎಫ್‌ಒ ಬಿಡುಗಡೆ ಮಾಡುತ್ತಿದ್ದು, ಉದ್ಯೋಗಿಗಳಿಗೆ ನೇರ ಲಾಭ ಸಿಗಲಿದೆ. ಇದರೊಂದಿಗೆ ಗ್ರಾಹಕರಿಗೆ ಇನ್ಮುಂದೆ ವೇಗದ ಸೇವೆ ಒದಗಿಸಲು ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (Centralized IT System) ಜಾರಿಗೆ ತರಲಾಗುತ್ತಿದೆ.

ಪಿಎಫ್ ಬಡ್ಡಿ ಜಮೆಯಾಗಿರುವುದನ್ನು ತಿಳಿಯುವುದು ಹೇಗೆ?

ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ಪರಿಶೀಲಿಸಲು ಇಪಿಎಫ್‌ಒ ಅತ್ಯಂತ ಸುಲಭವಾದ 4 ವಿಧಾನಗಳನ್ನು ಪರಿಚಯಿಸಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಮಂಗ್ ಆ್ಯಪ್ (UMANG App): ಉಮಂಗ್ ಆ್ಯಪ್ ಓಪನ್ ಮಾಡಿ, ಅಲ್ಲಿ EPFO ವಿಭಾಗಕ್ಕೆ ಹೋಗಿ ನಿಮ್ಮ ಪಿಎಫ್ ಖಾತೆಯ ಸ್ಟೇಟ್‌ಮೆಂಟ್ (Passbook) ಪರಿಶೀಲಿಸಬಹುದು.

ಇಪಿಎಫ್‌ಒ ಪೋರ್ಟಲ್ (EPFO Portal): ಅಧಿಕೃತ ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಯುಎಎನ್ (UAN) ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ಮೂಲಕ ಪಾಸ್‌ಬುಕ್ ಸ್ಥಿತಿಯನ್ನು ಚೆಕ್ ಮಾಡಬಹುದು.

ಎಸ್ಎಂಎಸ್ ಸೌಲಭ್ಯ (SMS Service): ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ EPFOHO UAN KAN ಎಂದು ಟೈಪ್ ಮಾಡಿ (ಕೊನೆಯ ಮೂರು ಅಕ್ಷರಗಳು ಕನ್ನಡ ಭಾಷೆಗಾಗಿ) 7738299899 ಸಂಖ್ಯೆಗೆ ಸಂದೇಶ ಕಳುಹಿಸಿದರೆ ಸಾಕು, ನಿಮ್ಮ ಬ್ಯಾಲೆನ್ಸ್ ವಿವರ ಮೊಬೈಲ್‌ಗೆ ಬರುತ್ತದೆ.

ಮಿಸ್ಡ್ ಕಾಲ್ ಸೇವೆ (Missed Call Service): ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ತಕ್ಷಣವೇ ನಿಮ್ಮ ಖಾತೆಯ ವಿವರಗಳ ಎಸ್‌ಎಂಎಸ್ ಲಭ್ಯವಾಗುತ್ತದೆ.

ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆ

ಇಪಿಎಫ್‌ಒ ಜಾರಿಗೆ ತರುತ್ತಿರುವ ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ, ದೇಶಾದ್ಯಂತ ಇರುವ ಎಲ್ಲಾ ಪಿಎಫ್ ಖಾತೆಗಳ ಮಾಹಿತಿಯು ಒಂದೇ ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಸಂಗ್ರಹವಾಗಲಿದೆ. ಇದರ ದೊಡ್ಡ ಅನುಕೂಲವೆಂದರೆ, ಪಿಎಫ್ ಸದಸ್ಯರು ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ಇಪಿಎಫ್‌ಒ ಕಚೇರಿಯಿಂದಲಾದರೂ ತಕ್ಷಣವೇ ವೇಗದ ಸೇವೆಗಳನ್ನು ಪಡೆದುಕೊಳ್ಳಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular