HomeKarnatakaರಾಜ್ಯದಲ್ಲಿ ರೌಡಿಶೀಟರ್ ಗಳ ಅಟ್ಟಹಾಸ: ಸರ್ಕಾರಿ ನಿವಾಸದಲ್ಲೇ ತಹಶೀಲ್ದಾರ್ ಬೆತ್ತಲೆಗೊಳಿಸಿ ಹಲ್ಲೆ

ರಾಜ್ಯದಲ್ಲಿ ರೌಡಿಶೀಟರ್ ಗಳ ಅಟ್ಟಹಾಸ: ಸರ್ಕಾರಿ ನಿವಾಸದಲ್ಲೇ ತಹಶೀಲ್ದಾರ್ ಬೆತ್ತಲೆಗೊಳಿಸಿ ಹಲ್ಲೆ

ರಾಮನಗರ: ಚನ್ನಪಟ್ಟಣ ತಹಶೀಲ್ದಾರ್ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್. ಗಿರೀಶ್ ಮೇಲೆ ಹಲ್ಲೆ ನಡೆಸಿ ರೌಡಿಶೀಟರ್ ಗಳು ಅಟ್ಟಹಾಸ ಮೆರೆದಿದ್ದು, ತಹಶೀಲ್ದಾರ್ ಸರ್ಕಾರಿ ವಸತಿ ಗೃಹದಲ್ಲೇ ಘಟನೆ ನಡೆದಿದೆ.

ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಮೇಲೆ ಚನ್ನಪಟ್ಟಣದ ಕುವೆಂಪು ನಗರದಲ್ಲಿರುವ ತಹಶೀಲ್ದಾರ್ ವಸತಿ ಗೃಹದಲ್ಲಿ ಜೂನ್ 29ರ ಮಧ್ಯರಾತ್ರಿ ಎರಡು ಗಂಟೆಗೆ ಹಲ್ಲೆ ಮಾಡಲಾಗಿದೆ. ಆರೋಪಿಗಳು ಹಲ್ಲೆ ಮಾಡಿ ಬಟ್ಟೆ ಬಿಚ್ಚಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿವಸ್ತ್ರಗೊಳಿಸಿದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ.

ಎರಡು ವರ್ಷಗಳಿಂದ ತಹಶೀಲ್ದಾರ್ ಬಿ.ಎನ್. ಗಣೇಶ್ ಮತ್ತು ಅನುಶ್ ಪರಿಚಯದವರಾಗಿದ್ದು, ತಹಶೀಲ್ದಾರ್ ಗೆ ಫೇಸ್ ಬುಕ್ ಮೂಲಕ ಅನುಶ್ ಪರಿಚಿತನಾಗಿದ್ದ. ಮೈಸೂರಿನಲ್ಲಿ ಗಿರೀಶ್ ತಹಶೀಲ್ದಾರ್ ಆಗಿದ್ದಾಗ ರೌಡಿಶೀಟರ್ ಅನುಶ್ ಪರಿಚಯವಾಗಿತ್ತು. ಇದೇ ಸ್ನೇಹದಿಂದ ತಹಶೀಲ್ದಾರ್ ಮನೆಗೆ ಬಂದಿದ್ದ. ಅನುಶ್ ಮತ್ತು ಶೋಭರಾಜ್, ನವೀನ್ ಜೂನ್ 29ರ ಮಧ್ಯರಾತ್ರಿ ಎರಡು ಗಂಟೆ ವೇಳೆಗೆ ತಹಶೀಲ್ದಾರ್ ಮನೆಗೆ ಬಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರಿನಲ್ಲಿ ಬಂದಿದ್ದ ಮೂವರು ಪಾರ್ಟಿ ಮಾಡಿದ್ದಾರೆ. ಈ ವೇಳೆ ತಹಶೀಲ್ದಾರ್ ಗೆ ಆರೋಪಿ ಜ್ಯೂಸ್ ನೀಡಿದ್ದ. ಜ್ಯೂಸ್ ಕುಡಿದ ನಂತರ ಸ್ವಲ್ಪ ಹೊತ್ತಿನಲ್ಲಿಯೇ ಗಿರೀಶ್ ಪ್ರಜ್ಞೆ ತಪ್ಪಿದ್ದು, ಬಳಿಕ ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ. ಮೊಬೈಲ್ ನಲ್ಲಿ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅವರ ಬಳಿ ಇದ್ದ 8 ಗ್ರಾಂ ಚಿನ್ನದ ಉಂಗುರ, 11 ಗ್ರಾಂ ಚಿನ್ನದ ಸರ, ಬೆಳ್ಳಿಯ ಉಡುದಾರ ಕಿತ್ತುಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡು 10 ಲಕ್ಷ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ತಹಶೀಲ್ದಾರ್ ಗಿರೀಶ್ ಚನ್ನಪಟ್ಟಣ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೈಸೂರಿನ ರೌಡಿಶೀಟರ್ ಅನುಶ್ ನನ್ನು ಬಂಧಿಸಲಾಗಿದೆ.

ದೂರು ನೀಡಿದ ತಹಶೀಲ್ದಾರ್

ಬರುವಾಗ ತಮ್ಮೊಂದಿಗೆ ಮದ್ಯದ ಬಾಟಲಿ ತಂದಿದ್ದ ಮೂವರು ಮನೆಯಲ್ಲೇ ಮದ್ಯ ಕುಡಿದಿದ್ದಾರೆ. ನನಗೆ ಕಿತ್ತಳೆ ಹಣ್ಣಿನ ಜ್ಯೂಸ್ ಕೊಟ್ಟಿದ್ದಾರೆ. ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲಿ ತಲೆ ಸುತ್ತಿದಂತಾಯಿತು. ಎಚ್ಚರವಾದಾಗ ಮೈಮೇಲೆ ಬಟ್ಟೆಗಳಿರಲಿಲ್ಲ. ನನ್ನನ್ನು ವಿವಸ್ತ್ರಗೊಳಿಸಿದ್ದರು. ನಿದ್ದೆ ಮಂಪರಿನಲ್ಲಿದ್ದ ನನ್ನ ಕೆನ್ನೆಗೆ ಅನುಶ್ ಹೊಡೆಯುತ್ತಿದ್ದ ಎಂದು ಗಿರೀಶ್ ದೂರು ನೀಡಿದ್ದಾರೆ.

ನನ್ನ ಮೈ ಮೇಲಿದ್ದ ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಉಡುದಾರ ಕಸಿದುಕೊಂಡಿದ್ದಾರೆ. ಅನುಶ್ ನನಗೆ ಚೀಟಿ ವ್ಯವಹಾರದಲ್ಲಿ ನಷ್ಟವಾಗಿದ್ದು 10 ಲಕ್ಷ ರೂಪಾಯಿ ಬೇಕಿದೆ. ಬೀರುವಿನ ಕೀ ಕೊಡು ಎಂದು ಬೆದರಿಸಿದ. ಈ ಮನೆಯವರು ಬೀಗ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಕ್ಕೆ ಮತ್ತೆ ಮೂವರು ಸೇರಿ ಹಲ್ಲೆ ಮಾಡಿದ್ದಾರೆ. ಶೋಭರಾಜ್ ಮತ್ತು ನವೀನ ನನ್ನನ್ನು ಹಾಸಿಗೆ ಮೇಲೆ ಮಲಗಿಸಿಕೊಂಡು ಕೀ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ದಿಂಬಿನಿಂದ ಮುಖ ಮುಚ್ಚಿ ಉಸಿರು ಕಟ್ಟಿಸಲು ಯತ್ನಿಸಿದರು. ನಗ್ನ ವಿಡಿಯೋ ಚಿತ್ರೀಕರಿಸಿಕೊಂಡು ಬೆಳಗ್ಗೆ 6 ಗಂಟೆಯವರೆಗೆ ಗೃಹಬಂಧನದಲ್ಲಿಟ್ಟು ದೈಹಿಕ ಹಿಂಸೆ ನೀಡಿದರು. ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರವೊಂದರಲ್ಲಿ ಬರೆಯಿಸಿಕೊಂಡರು. 10 ಲಕ್ಷ ರೂಪಾಯಿ ಹಣ ಕೊಡದಿದ್ದರೆ ನಗ್ನ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದರು. ಬೆಳಿಗ್ಗೆ 7 ಗಂಟೆಗೆ ತಾವು ತಂದಿದ್ದ ಮದ್ಯದ ಬಾಟಲಿಯೊಂದಿಗೆ ಮನೆಯಿಂದ ಹೊರಟು ಹೋಗಿದ್ದರು. ತನ್ನಿಂದ ಬರೆಸಿಕೊಂಡಿದ್ದ ಪತ್ರವನ್ನು ಮನೆಯ ಹೊರಗೆ ಹರಿದು ಹಾಕಿದ್ದರು. ಬಳಿಕ ಕರೆ ಮಾಡಿ ಬೆದರಿಕೆ ಹಾಕಿದ್ದರು. ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಬಂದು ಮೂವರ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ ಎಂದು ಗಿರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular