HomeKarnatakaಇನ್ನು ಕರೆ ಬಂದ 15 ನಿಮಿಷಕ್ಕೆ ಸ್ಥಳಕ್ಕೆ ಬಾರದ ಆಂಬುಲೆನ್ಸ್ ಚಾಲಕರಿಗೆ 5 ಸಾವಿರ ರೂ....

ಇನ್ನು ಕರೆ ಬಂದ 15 ನಿಮಿಷಕ್ಕೆ ಸ್ಥಳಕ್ಕೆ ಬಾರದ ಆಂಬುಲೆನ್ಸ್ ಚಾಲಕರಿಗೆ 5 ಸಾವಿರ ರೂ. ದಂಡ

ಉಡುಪಿ: ರಾಜ್ಯದಲ್ಲಿ ಇನ್ನು ಮುಂದೆ 108 ಆಂಬುಲೆನ್ಸ್ ಗಳ ಚಾಲಕರು ಕರೆ ಬಂದ ಬಳಿಕ 15 ನಿಮಿಷದಲ್ಲಿ ಸ್ಥಳಕ್ಕೆ ತಲುಪಬೇಕು. ಇಲ್ಲದಿದ್ದರೆ ಚಾಲಕರಿಗೆ 5000 ರೂ. ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳ ಮಾರ್ಗಸೂಚಿ ಪ್ರಕಾರ ತುರ್ತು ಕರೆ ಬಂದಾಗ 20 ನಿಮಿಷಗಳ ಒಳಗೆ ಆಂಬುಲೆನ್ಸ್ ಸ್ಥಳವನ್ನು ತಲುಪಬೇಕು. ಇದು ತುರ್ತು ವೈದ್ಯಕೀಯ ಚಿಕಿತ್ಸೆಯ ಪ್ರಮುಖ ಸಮಯವಾಗಿರುವ ಗೋಲ್ಡನ್ ಅವರ್ ಆಧರಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ 15 ನಿಮಿಷದಲ್ಲಿ ತಲುಪುವ ನಿಯಮ ಎಂಬ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

15 ನಿಮಿಷದಲ್ಲಿ ಚಾಲಕರು ಘಟನಾ ಸ್ಥಳಕ್ಕೆ ತಲುಪಿದರೆ ಸಮಸ್ಯೆ ಶೇ. 90ರಷ್ಟು ಪರಿಹಾರವಾಗುತ್ತದೆ. ರಾಜ್ಯದಲ್ಲಿ 700ರಿಂದ 800 ಆಂಬುಲೆನ್ಸ್ ಗಳಿದ್ದು, ಈ ಸೇವೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಇದು ಕಾರ್ಯಗತವಾಗಲು ಮೂರು ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular