HomeLatest NewsSHOCKING : ಸತ್ತ ಹಸುವಿನ ಶವವನ್ನು ವಾಹನಕ್ಕೆ ಕಟ್ಟಿ 1 ಕಿ.ಮೀ. ಎಳೆದೊಯ್ದ ನಗರಸಭೆ ಸಿಬ್ಬಂದಿ...

SHOCKING : ಸತ್ತ ಹಸುವಿನ ಶವವನ್ನು ವಾಹನಕ್ಕೆ ಕಟ್ಟಿ 1 ಕಿ.ಮೀ. ಎಳೆದೊಯ್ದ ನಗರಸಭೆ ಸಿಬ್ಬಂದಿ ; ವಿಡಿಯೋ ವೈರಲ್ |WATCH VIDEO

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಝಲ್ಲಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸತ್ತ ಹಸುವಿನ ಶವವನ್ನು ನಗರಸಭೆಯ ಕಸ ಸಂಗ್ರಹಿಸುವ ವಾಹನಕ್ಕೆ ಕಟ್ಟಿ ಸುಮಾರು 1 ಕಿಲೋಮೀಟರ್‌ವರೆಗೆ ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹಿಂದೂ ಸೇನೆ, ಗೋ ರಕ್ಷಣಾ ಸಂಘಟನೆಗಳು ಹಾಗೂ ಸ್ಥಳೀಯರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ನ್ಯಾಯಸಮ್ಮತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಸ್ಥಳೀಯ ಆಡಳಿತದ ಮಾಹಿತಿ ಪ್ರಕಾರ, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಸು ಮೃತಪಟ್ಟಿತ್ತು. ಅದು ಅನಾಥ ಹಸುವಾಗಿದ್ದರಿಂದ ಮಾಲೀಕರು ಯಾರೂ ಮುಂದೆ ಬಂದಿರಲಿಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ಸುಮಾರು ಎರಡು ದಿನಗಳ ಕಾಲ ಶವ ಬಿದ್ದಿದ್ದು, ಕೊಳೆತು ದುರ್ವಾಸನೆ ಹರಡತೊಡಗಿತ್ತು.

ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆ ದೃಷ್ಟಿಯಿಂದ ಶವವನ್ನು ತೆರವುಗೊಳಿಸುವ ಅಗತ್ಯ ಎದುರಾದರೂ, ಸ್ಥಳದಲ್ಲೇ ಟ್ರ್ಯಾಕ್ಟರ್ ಅಥವಾ ಟ್ರಾಲಿ ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಹಸುವಿನ ಶವಕ್ಕೆ ಹಗ್ಗ ಕಟ್ಟಿ ಗ್ರಾಮದ ಕಸ ಸಂಗ್ರಹಿಸುವ ವಾಹನದ ಮೂಲಕ ಶವವನ್ನು ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸೋಮವಾರದಿಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular