HomeLatest Newsಮಹಿಳಾ ಟಿ20 ವಿಶ್ವಕಪ್ 2026: ಸೆಮಿಫೈನಲ್‌ನಲ್ಲಿ ಕಾಂಗರೂಗಳ ಆರ್ಭಟಕ್ಕೆ ವಿಂಡೀಸ್ ಕಂಗಾಲು; ಫೈನಲ್‌ಗೇರಿದ ಆಸ್ಟ್ರೇಲಿಯಾ

ಮಹಿಳಾ ಟಿ20 ವಿಶ್ವಕಪ್ 2026: ಸೆಮಿಫೈನಲ್‌ನಲ್ಲಿ ಕಾಂಗರೂಗಳ ಆರ್ಭಟಕ್ಕೆ ವಿಂಡೀಸ್ ಕಂಗಾಲು; ಫೈನಲ್‌ಗೇರಿದ ಆಸ್ಟ್ರೇಲಿಯಾ

ನಿನ್ನೆ ( ಜೂನ್ 30 ) ಲಂಡನ್‌ನ ಕೆನ್ನಿಂಗ್‌ಟನ್ ಓವಲ್ ಕ್ರೀಡಾಂಗಣದಲ್ಲಿ ಮಹಿಳೆಯರ ಟಿ ಟ್ವೆಂಟಿ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಜರುಗಿತು. ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಫೈನಲ್ ಪ್ರವೇಶಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ವಿಂಡೀಸ್ ಒಳ್ಳೆಯ ಆರಂಭವನ್ನು ಪಡೆದುಕೊಂಡು ಬಳಿಕ ಸಾಲು ಸಾಲಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 126 ರನ್‌ಗಳ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ 13 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿತು.

ವೆಸ್ಟ್ ಇಂಡೀಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಹೀಲಿ ಮ್ಯಾಥ್ಯೂಸ್ 30 ರನ್ ಗಳಿಸಿದರೆ, ಖಿಯಾನಾ ಜೋಸೆಫ್ 16, ಶಿಮೇನ್ ಕ್ಯಾಂಪ್‌ಬೆಲ್ 22, ಸ್ಟಫೇನಿ ಟೇಲರ್ ಡಕ್‌ಔಟ್, ಜಹ್‌ಜಾರಾ ಕ್ಲಾಕ್ಸ್ಟನ್ ಡಕ್‌ಔಟ್, ಚಿನೆಲಿ ಹೆನ್ರಿ 10, ಜೆನಿಲಿಯಾ ಗ್ಲಾಸ್‌ಗೊ 15, ಡಿಯಾಂಡ್ರಾ ಡಾಟ್ಟಿನ್ ಅಜೇಯ 26 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೆಸ್ಟ್ ಇಂಡೀಸ್ ತಂಡವನ್ನು ಕಾಡಿದ ಆಸ್ಟ್ರೇಲಿಯಾ ಪರ ಆಶ್ಲಿ ಗಾರ್ಡ್ನರ್, ಶೋಫಿ ಮಾಲಿನ್ಯೂಕ್ಸ್ ಹಾಗೂ ಜಾರ್ಜಿಯಾ ವಾರೆಹಮ್ ತಲಾ ಎರಡು ವಿಕೆಟ್ ಪಡೆದರೆ, ಆನ್ನಾಬೆಲ್ ಸುದರ್‌ಲ್ಯಾಂಡ್ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಜಾರ್ಜಿಯಾ ವಾಲ್ 16, ಫೋಬ್ ಲಿಚ್‌ಫೀಲ್ಡ್ 4, ಎಲಿಸ್ ಪೆರಿ 2 ( ರಿಟೈರ್ಡ್ ಹರ್ಟ್ ), ಬೆತ್ ಮೂನಿ 36 ಎಸೆತಗಳಲ್ಲಿ ಅಜೇಯ 61 ಹಾಗೂ ಆಶ್ಲಿ ಗಾರ್ಡ್ನರ್ 20 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ಪರ ಚಿನೆಲ್ಲಿ ಹೆನ್ರಿ ಹಾಗೂ ಹೀಲಿ ಮ್ಯಾಥ್ಯೂಸ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular