HomeKarnatakaJOB ALERT : ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 3000 ಕ್ಕೂ ಹೆಚ್ಚು ಶಿಕ್ಷಕ, ಅತಿಥಿ...

JOB ALERT : ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 3000 ಕ್ಕೂ ಹೆಚ್ಚು ಶಿಕ್ಷಕ, ಅತಿಥಿ ಉಪನ್ಯಾಸಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್.!

ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ, ಮೌಲಾನಾ ಆಜಾದ್ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳು, ಕಾಲೇಜುಗಳು ಮತ್ತು ವಸತಿ ನಿಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮಹತ್ವದ ಅನುಮೋದನೆ ನೀಡಿದೆ. ಒಟ್ಟು 3,409 ಹುದ್ದೆಗಳ ಪೈಕಿ 1,469 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ 1,940 ಹುದ್ದೆಗಳನ್ನು ಹೊರಗುತ್ತಿಗೆ/ಔಟ್‌ಸೋರ್ಸಿಂಗ್ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಈ ಕುರಿತು ಸರ್ಕಾರದ ಆದೇಶ ಸಂಖ್ಯೆ MWD-MDS/472/2026 ದಿನಾಂಕ 20-06-2026 ರಂದು ಹೊರಡಿಸಲಾಗಿದೆ.

ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ನೇಮಕಾತಿ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕೈಗೊಳ್ಳಲು ಅನುಮೋದನೆ ನೀಡಲಾಗಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಮತ್ತು ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.

ಸರ್ಕಾರದ ಆದೇಶದಂತೆ ಒಟ್ಟು 3,409 ಹುದ್ದೆಗಳ ಪೈಕಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • 1,469 ಹುದ್ದೆಗಳು – ನೇರ ನೇಮಕಾತಿ
  • 1,940 ಹುದ್ದೆಗಳು – ಹೊರಗುತ್ತಿಗೆ/ಔಟ್‌ಸೋರ್ಸಿಂಗ್

ಮೂಲಕ ಭರ್ತಿ ಮಾಡಲಾಗುತ್ತದೆ.

ನೇರ ನೇಮಕಾತಿ ಹುದ್ದೆಗಳ ವಿವರ

1. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು

  • ಒಟ್ಟು ಹುದ್ದೆಗಳು – 800
  • ನೇರ ನೇಮಕಾತಿ – 600
  • ಹೊರಗುತ್ತಿಗೆ – 200

2. ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳು

  • ಒಟ್ಟು ಹುದ್ದೆಗಳು – 94
  • ನೇರ ನೇಮಕಾತಿ – 94

3. ಮೌಲಾನಾ ಆಜಾದ್ ಮಾದರಿ ಶಾಲೆ ಹಾಗೂ ಕಾಲೇಜುಗಳು

  • ಒಟ್ಟು ಹುದ್ದೆಗಳು – 2,050
  • ನೇರ ನೇಮಕಾತಿ – 775
  • ಹೊರಗುತ್ತಿಗೆ – 1,275

4. ಪಡವಿ ಪೂರ್ವ ಕಾಲೇಜುಗಳು (ಪ್ರತ್ಯೇಕ)

  • ಒಟ್ಟು ಹುದ್ದೆಗಳು – 465
  • ಸಂಪೂರ್ಣ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ.

ನೇರ ನೇಮಕಾತಿಯಲ್ಲಿ ಭರ್ತಿಯಾಗುವ ಪ್ರಮುಖ ಹುದ್ದೆಗಳು

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ:

  • ಕನ್ನಡ, ಇಂಗ್ಲಿಷ್, ಉರ್ದು ಭಾಷಾ ಉಪನ್ಯಾಸಕರು
  • ಸಮಾಜ ವಿಜ್ಞಾನ, ವಿಜ್ಞಾನ ಶಿಕ್ಷಕರು
  • ಗಣಿತ ಶಿಕ್ಷಕರು
  • ದೈಹಿಕ ಶಿಕ್ಷಣ ಶಿಕ್ಷಕರು
  • ಗ್ರಂಥಪಾಲಕರು
  • ಪ್ರಯೋಗಾಲಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳು.

ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ:

  • ಕನ್ನಡ, ಇಂಗ್ಲಿಷ್, ಉರ್ದು ಭಾಷಾ ಶಿಕ್ಷಕರು
  • ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಶಿಕ್ಷಕರು ಸೇರಿದಂತೆ ಬೋಧಕ ಹುದ್ದೆಗಳು.

ಹೊರಗುತ್ತಿಗೆ ಮೂಲಕ ಭರ್ತಿಯಾಗುವ ಹುದ್ದೆಗಳು

ಒಟ್ಟು 1,940 ಹುದ್ದೆಗಳನ್ನು ಔಟ್‌ಸೋರ್ಸಿಂಗ್ ಮೂಲಕ ಭರ್ತಿ ಮಾಡಲಾಗುತ್ತದೆ. ಇದರಲ್ಲಿ:

  • ಭದ್ರತಾ ಸಿಬ್ಬಂದಿ
  • ಅಡುಗೆ ಸಿಬ್ಬಂದಿ
  • ಸ್ವಚ್ಛತಾ ಸಿಬ್ಬಂದಿ
  • ಡ್ರೈವರ್
  • ಕ್ಲರ್ಕ್
  • ಲ್ಯಾಬ್ ಸಹಾಯಕರು
  • ವಸತಿ ನಿಲಯ ಸಹಾಯಕ ಸಿಬ್ಬಂದಿ
  • ಇತರೆ ಬೋಧಕೇತರ ಸಿಬ್ಬಂದಿ ಸೇರಿದ್ದಾರೆ.

ಸರ್ಕಾರದ ಆದೇಶದಲ್ಲಿ ಏನಿದೆ?

ಸರ್ಕಾರದ ಆದೇಶದ ಪ್ರಕಾರ, ಖಾಲಿ ಹುದ್ದೆಗಳ ಭರ್ತಿಯಿಂದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಚಟುವಟಿಕೆ ಸುಧಾರಣೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ನೆರವಾಗಲಿದೆ. ಅಗತ್ಯವಿರುವ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೇರಿದಂತೆ ಸಂಬಂಧಿತ ನೇಮಕಾತಿ ಪ್ರಾಧಿಕಾರಗಳ ಮೂಲಕ ನೇರ ನೇಮಕಾತಿಯಿಂದ ಹಾಗೂ ಉಳಿದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸೂಚಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular