HomeEntertainmentಪತಿ ಮತ್ತು ತಂದೆಯೊಂದಿಗೆ ಡಿನ್ನರ್‌ಗೆ ಬಂದ ಸೋನಾಕ್ಷಿ ಸಿನ್ಹಾ: ಫೋಟೋಗ್ರಾಫರ್‌ಗಳ ಅತಿರೇಕದ ವರ್ತನೆಗೆ ಬೇಸತ್ತ ನಟಿ

ಪತಿ ಮತ್ತು ತಂದೆಯೊಂದಿಗೆ ಡಿನ್ನರ್‌ಗೆ ಬಂದ ಸೋನಾಕ್ಷಿ ಸಿನ್ಹಾ: ಫೋಟೋಗ್ರಾಫರ್‌ಗಳ ಅತಿರೇಕದ ವರ್ತನೆಗೆ ಬೇಸತ್ತ ನಟಿ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಪತಿ ಜಹೀರ್ ಇಕ್ಬಾಲ್ ಮತ್ತು ತಂದೆ, ಹಿರಿಯ ನಟ ಶತ್ರುಘ್ನ ಸಿನ್ಹಾ ಅವರೊಂದಿಗೆ ಡಿನ್ನರ್ ಮುಗಿಸಿ ಹೊರಬರುವಾಗ ಪಾಪರಾಜಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಜೆ ಮುಂಬೈನ ಪ್ರಸಿದ್ಧ ರೆಸ್ಟೋರೆಂಟ್‌ ಒಂದಕ್ಕೆ ಈ ಮೂವರೂ ಭೇಟಿ ನೀಡಿದ್ದರು. ಊಟ ಮುಗಿಸಿ ಹೊರಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಫೋಟೋಗ್ರಾಫರ್‌ಗಳು ಇವರನ್ನು ಸತತವಾಗಿ ಕ್ಯಾಮರಾದಲ್ಲಿ ಸೆರೆಹಿಡಿಯಲು ಆರಂಭಿಸಿದರು.

ಮೊದಲಿಗೆ ಸೋನಾಕ್ಷಿ ಸಿನ್ಹಾ ಮತ್ತು ಅವರ ಕುಟುಂಬ ಫೋಟೋಗಳಿಗೆ ಪೋಸ್ ನೀಡಿದರಾದರೂ, ಕಾರಿನತ್ತ ಹೊರಟಾಗಲೂ ಫೋಟೋಗ್ರಾಫರ್‌ಗಳು ಬೆನ್ನಟ್ಟುವುದನ್ನು ನಿಲ್ಲಿಸಲಿಲ್ಲ. ಇದರಿಂದ ಕೊಂಚ ಕಿರಿಕಿರಿಗೊಂಡ ಸೋನಾಕ್ಷಿ ಸಿನ್ಹಾ, ಸಾಕು ಬಿಡಿ ಗಾಯ್ಸ್, ಧನ್ಯವಾದಗಳು, ಶುಭ ರಾತ್ರಿ ಎಂದು ಸೌಮ್ಯವಾಗಿಯೇ ವಿನಂತಿಸಿದರು. ಆದಾಗ್ಯೂ ಕ್ಯಾಮರಾಗಳು ರೋಲ್ ಆಗುತ್ತಲೇ ಇದ್ದಾಗ, ಪತಿ ಜಹೀರ್ ಇಕ್ಬಾಲ್ ಕೂಡ ಶೂಟಿಂಗ್ ನಿಲ್ಲಿಸುವಂತೆ ಮನವಿ ಮಾಡಿದರು. ಕೊನೆಗೆ ಸೋನಾಕ್ಷಿ ಸಿನ್ಹಾ ಅವರು, ಗಾಯ್ಸ್ ಆಯಿತು, ಸಾಕು ಬಿಡಿ, ಧನ್ಯವಾದಗಳು ಎಂದು ಕೊಂಚ ಗರಂ ಆಗಿಯೇ ಹೇಳಿ ಅಲ್ಲಿಂದ ಕಾರು ಹತ್ತಿ ನಿರ್ಗಮಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ 2024ರ ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಏಳು ವರ್ಷಗಳ ಸುದೀರ್ಘ ಪ್ರೀತಿಯ ನಂತರ ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದರು. ನಂತರ ನಡೆದ ಇವರ ಭವ್ಯ ರಿಸೆಪ್ಷನ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್, ರೇಖಾ, ಟಬು ಮತ್ತು ಅನಿಲ್ ಕಪೂರ್ ಸೇರಿದಂತೆ ಬಾಲಿವುಡ್‌ನ ಘಟಾನುಘಟಿ ತಾರೆಯರು ಭಾಗವಹಿಸಿದ್ದರು. ಈ ಜೋಡಿಯು 2022 ರಲ್ಲಿ ತೆರೆಕಂಡ ಡಬಲ್ ಎಕ್ಸ್ ಎಲ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular