ಬೆಂಗಳೂರು: ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದ ರೌಡಿಶೀಟರ್ ಮೃತಪಟ್ಟಿದ್ದಾನೆ. ರಾಜು ಭಾಯ್ ಮೃತಪಟ್ಟ ರೌಡಿಶೀಟರ್ ಎಂದು ಹೇಳಲಾಗಿದೆ.
ಬೆಂಗಳೂರಿನ ಜೆಪಿ ನಗರದ ಐಜಿ ಸರ್ಕಲ್ ನಲ್ಲಿ ಇಂದು ಸಂಜೆ ಘಟನೆ ನಡೆದಿತ್ತು, ಸಂಜೆ 5.30ರ ವೇಳೆಗೆ ಟೀ ಕುಡಿದು ಬರುತ್ತಿದ್ದ ರಾಜು ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ರಾಜು ಅಲಿಯಾಸ್ ಅಲ್ ಮುರ್ಕ ಮೃತಪಟ್ಟಿದ್ದಾನೆ.
10 ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ರಾಜು ಭಾಯ್ ನಂತರ ತಟಸ್ಥವಾಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರಾಜು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

