HomeKarnatakaBREAKING : ಬೆಂಗಳೂರಿನ ಶೆಡ್'ನಲ್ಲಿ ದಾಖಲೆ ಇಲ್ಲದ 3 ಕೋಟಿ ರೂ.ನಗದು ಪತ್ತೆ, ಇಬ್ಬರು ಆರೋಪಿಗಳು...

BREAKING : ಬೆಂಗಳೂರಿನ ಶೆಡ್’ನಲ್ಲಿ ದಾಖಲೆ ಇಲ್ಲದ 3 ಕೋಟಿ ರೂ.ನಗದು ಪತ್ತೆ, ಇಬ್ಬರು ಆರೋಪಿಗಳು ಅರೆಸ್ಟ್.!

ಬೆಂಗಳೂರು: ಬೆಂಗಳೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು ₹3 ಕೋಟಿ ನಗದು ಪತ್ತೆಯಾಗಿದ್ದು, ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ತೀರಿಸಲು ಹಣ ತಂದಿರುವುದಾಗಿ ಮಾಲೀಕರು ಹೇಳಿದ್ದರೂ, ಯಾವುದೇ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಯಾವುದೇ ದಾಖಲೆಗಳಿಲ್ಲದ ಸುಮಾರು ₹3 ಕೋಟಿ ನಗದು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುರುಬರಹಳ್ಳಿಯಲ್ಲಿರುವ ಶೆಡ್‌ವೊಂದರಲ್ಲಿ ಈ ಹಣ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಈ ಹಣ ತಾವರೆಕೆರೆ ನಿವಾಸಿ ನಾಗರಾಜ್ ಅವರಿಗೆ ಸೇರಿದೆ ಎನ್ನಲಾಗಿದೆ. ನಾಗರಾಜ್ ಅವರ ಸ್ನೇಹಿತ ವೆಂಕಟೇಶ್ ಅವರಿಗೆ ಸೇರಿದ ಕುರುಬರಹಳ್ಳಿಯ ಶೆಡ್‌ನಲ್ಲಿ ನಗದು ಸಂಗ್ರಹಿಸಲಾಗಿತ್ತು.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಹಣದ ಬಗ್ಗೆ ವಿಚಾರಿಸಿದ ನಾಗರಾಜ್, “ಬ್ಯಾಂಕ್‌ಗೆ ಸಾಲ ತೀರಿಸಲು ತಂದಿದ್ದ ಹಣ” ಎಂದು ತಿಳಿಸಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಅಥವಾ ಸಮರ್ಪಕ ದಾಖಲೆಗಳನ್ನು ಹಾಜರುಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ₹3 ಕೋಟಿ ನಗದನ್ನು ವಶಕ್ಕೆ ಪಡೆದು, ಹಣದ ಮೂಲ, ಉದ್ದೇಶ ಹಾಗೂ ಕಾನೂನುಬದ್ಧ ದಾಖಲೆಗಳ ಕುರಿತು ತನಿಖೆ ಆರಂಭಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುರುಬರಹಳ್ಳಿಯ 11ನೇ ಕ್ರಾಸ್‌ನಲ್ಲಿರುವ ಶೆಡ್‌ನಲ್ಲಿ ನಾಲ್ಕು ಬ್ಯಾಗ್‌ಗಳಲ್ಲಿ ₹2.98 ಕೋಟಿ ನಗದು ಪತ್ತೆಯಾಗಿದೆ.ಹಣಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಆದಾಯ ತೆರಿಗೆ (IT) ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular