HomeLatest NewsBIG NEWS : ನಿಮ್ಮ ತಾಲ್ಲೂಕಿಗೆ ಯಾರೆಲ್ಲಾ ಶಿರಸ್ತೇದಾರ್ , ಉಪ ತಹಸೀಲ್ದಾರ್ ಬಂದಿದ್ದಾರೆ.? ಇಲ್ಲಿದೆ...

BIG NEWS : ನಿಮ್ಮ ತಾಲ್ಲೂಕಿಗೆ ಯಾರೆಲ್ಲಾ ಶಿರಸ್ತೇದಾರ್ , ಉಪ ತಹಸೀಲ್ದಾರ್ ಬಂದಿದ್ದಾರೆ.? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.!

ರಾಜ್ಯದ ಕಂದಾಯ ಇಲಾಖೆಯ ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆಯಲ್ಲಿರುವ ಸಿಬ್ಬಂದಿಗೆ ಕರ್ನಾಟಕ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಕಂದಾಯ ಇಲಾಖೆಯ ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆಯಲ್ಲಿರುವ ಗ್ರೂಪ್-2 ಹುದ್ದೆಗಳ ವೇತನ ಶ್ರೇಣಿ ₹69,250 ರಿಂದ ₹1,34,200ಕ್ಕೆ ಸಂಬಂಧಿಸಿದಂತೆ ಒಟ್ಟು 1,958 ಹುದ್ದೆಗಳನ್ನು ತಹಶೀಲ್ದಾರ್ ಗ್ರೇಡ್-2 ಹುದ್ದೆಗಳಾಗಿ ಮುಂಬಡ್ತಿ ನೀತಿ ಅಡಿಯಲ್ಲಿ ಭರ್ತಿ ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕರ್ನಾಟಕ ನಾಗರಿಕ ಸೇವೆ (ನೇಮಕಾತಿ) ನಿಯಮಗಳು, 1958 ಹಾಗೂ ಸಂಬಂಧಿತ ನಿಯಮಗಳ ಅನ್ವಯ ಈ ಹುದ್ದೆಗಳನ್ನು ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುತ್ತದೆ.ಆದೇಶದಲ್ಲಿ ನೀಡಿರುವ ಮಾಹಿತಿಯಂತೆ, ಮೊದಲ ಹಂತದಲ್ಲಿ ರಾಜ್ಯ ಮಟ್ಟದ ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆಯ ಸಂವರ್ಗ ಸಂಖ್ಯೆ 3914ಕ್ಕೆ ಸೇರಿದ ಸಿಬ್ಬಂದಿಯಿಂದ ಆರ್ಕ್ ಎಂಡಿಎಸ್ ವಲಯದ ಉಪ ತಹಶೀಲ್ದಾರ್, ನಾಡಕಚೇರಿ, ತಾಲೂಕು ಅಧೀನ ತಾಲೂಕು, ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಹುದ್ದೆಗಳಿಗೆ ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅರ್ಹ ಶಿರಸ್ತೇದಾರ್/ಉಪ ತಹಶೀಲ್ದಾರ್ ಸಿಬ್ಬಂದಿಗೆ ಈ ಆದೇಶದಿಂದ ಬಡ್ತಿಯ ಅವಕಾಶ ಲಭ್ಯವಾಗಲಿದ್ದು, ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ತಾಲ್ಲೂಕಿಗೆ ಯಾರೆಲ್ಲಾ ಶಿರಸ್ತೇದಾರ್ , ಉಪ ತಹಸೀಲ್ದಾರ್ ಬಂದಿದ್ದಾರೆ.? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular