HomeKarnataka'ಮೊಹರಂ' ಹಬ್ಬದ ಪ್ರಯುಕ್ತ ಜೂನ್ 25 ರಿಂದ 27 ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ

‘ಮೊಹರಂ’ ಹಬ್ಬದ ಪ್ರಯುಕ್ತ ಜೂನ್ 25 ರಿಂದ 27 ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ

ಬಳ್ಳಾರಿ : 2026 ನೇ ಸಾಲಿನ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

ಜೂನ್ 25 ರಂದು ಮೊಹರಂ ಹಬ್ಬದ ‘ಕತ್ತಲ ರಾತ್ರಿ’ ಹಾಗೂ ಜೂನ್ 26 ರಂದು ಹಬ್ಬದ ಕೊನೆಯ ದಿನವಾಗಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಜೂ.25 ರ ಬೆಳಿಗ್ಗೆ 06 ಗಂಟೆಯಿAದ ಜೂ.27 ರ ಬೆಳಿಗ್ಗೆ 06 ಗಂಟೆಯವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಹೊರಡಿಸಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಸೂಚಿಸಲಾಗಿದೆ. ಆದರೆ, ಈ ಆದೇಶವು ಡಿಸ್ಟಿಲರಿಗಳಿಂದ ರಾಜ್ಯದ ವಿವಿಧ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಿಗೆ ದಾಸ್ತಾನು ವಿಲೇವಾರಿ ಮಾಡುವ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ

ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ’ಯಡಿ ಕೃಷಿ ಬೆಳೆಗಳ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.ಸಂಡೂರು ತಾಲೂಕಿನ ರೈತರು ನೈಸರ್ಗಿಕ ವಿಕೋಪಗಳಿಂದ ಎದುರಾಗಬಹುದಾದ ನಷ್ಟವನ್ನು ತಪ್ಪಿಸಲು ನಿಗದಿತ ಅವಧಿಯೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಂಡೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ರಫಿಯುಲ್ಲರಝ್ವಿ ಅವರು ಕೋರಿದ್ದಾರೆ.

ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಯಂತಹ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಈ ವಿಮಾ ಯೋಜನೆ ರೈತರಿಗೆ ಆಸರೆಯಾಗಲಿದೆ. ಒಂದು ವೇಳೆ ಇಂತಹ ಘಟನೆಗಳು ಸಂಭವಿಸಿದರೆ, 72 ಗಂಟೆಗಳೊಳಗಾಗಿ ಕೃಷಿ ಇಲಾಖೆಗೆ ಅಥವಾ ವಿಮಾ ಕಂಪನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಇದು ಪರಿಹಾರ ಪಡೆಯಲು ಅತ್ಯಗತ್ಯವಾದ ಹಂತವಾಗಿದೆ ಎಂದು ಅವರು ತಿಳಿಸಿದ್ದಾರೆ.

*ವಿವಿಧ ಬೆಳೆಗಳು ಮತ್ತು ನೋಂದಣಿಗೆ ಕೊನೆಯ ದಿನಾಂಕಗಳ ವಿವರ:*

ಜುಲೈ 15 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ಎಳ್ಳು (ಮಳೆಯಾಶ್ರಿತ)- ರೂ.268.

ಜುಲೈ 31 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ಮಳೆಯಾಶ್ರಿತ ಸೂರ್ಯಕಾಂತಿ – ರೂ.390, ನೀರಾವರಿ ಸೂರ್ಯಕಾಂತಿ – ರೂ.469, ಮಳೆಯಾಶ್ರಿತ ಜೋಳ – ರೂ.359, ನೀರಾವರಿ ಜೋಳ – ರೂ.426.

ಮಳೆಯಾಶ್ರಿತ ಮೆಕ್ಕೆಜೋಳ – ರೂ.546, ನೀರಾವರಿ ಮೆಕ್ಕೆಜೋಳ – ರೂ.617, ಹತ್ತಿ (ನೀರಾವರಿ) – ರೂ.1,748, ಕೆಂಪು ಮೆಣಸಿನಕಾಯಿ (ನೀರಾವರಿ) – ರೂ.2,519, ಈರುಳ್ಳಿ (ನೀರಾವರಿ) – ರೂ.1,900

ಆಗಸ್ಟ್ 14 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ರಾಗಿ (ಮಳೆಯಾಶ್ರಿತ) – ರೂ.404, ಮಳೆಯಾಶ್ರಿತ ಸಜ್ಜೆ – ರೂ.282, ನೀರಾವರಿ ಸಜ್ಜೆ – ರೂ.350, ನವಣೆ (ಮಳೆಯಾಶ್ರಿತ) – ರೂ.261, ಮಳೆಯಾಶ್ರಿತ ತೊಗರಿ – ರೂ.466, ನೀರಾವರಿ ತೊಗರಿ – ರೂ.488, ಮಳೆಯಾಶ್ರಿತ ನೆಲಗಡಲೆ (ಶೇಂಗಾ) – ರೂ.529, ನೀರಾವರಿ ನೆಲಗಡಲೆ (ಶೇಂಗಾ) – ರೂ.485, ಹುರುಳಿ (ಮಳೆಯಾಶ್ರಿತ) – ರೂ.380 ಆಗಿರುತ್ತದೆ.

*ನೋಂದಣಿ ಎಲ್ಲಿ ಮಾಡಿಸಬೇಕು?

ಬೆಳೆ ವಿಮೆ ನೋಂದಣಿಗಾಗಿ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಥವಾ ತಾವು ವ್ಯವಹಾರ ನಡೆಸುವ ಬ್ಯಾಂಕುಗಳಿಗೆ ಸಂಪರ್ಕಿಸಬಹುದು.ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಂಡೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular