ಪುಣೆ: ಮಹಾರಾಷ್ಟ್ರದ ಇತಿಹಾಸ ಪ್ರಸಿದ್ಧ ಲೋಹಗಢ್ ಕೋಟೆಯಲ್ಲಿ (Lohagad Fort) ನಡೆದ ಯುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣ ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ ಆರಂಭದಲ್ಲಿ ಟ್ರೆಕ್ಕಿಂಗ್ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಈ ಘಟನೆ, ಈಗ ಪಕ್ಕಾ ಸ್ಕೆಚ್ ಹಾಕಿ ಮಾಡಿದ ಕೊಲೆ ಎಂಬ ಆಘಾತಕಾರಿ ಸತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ವಿಶ್ವದರ್ಜೆಯ ಉದ್ಯಮಿಯ ಈ ನಿಗೂಢ ಸಾವಿನ ತನಿಖೆಗೆ ಮನಿ ಕಂಟ್ರೋಲ್ (Moneycontrol) ವರದಿಗಳ ಪ್ರಕಾರ ಬಿಗ್ ಟ್ವಿಸ್ಟ್ ನೀಡಿದ್ದು ಕೇವಲ ಒಂದು ಹುಡಿ ಜಾಕೆಟ್ (Hoodie) ಕೊಲೆಗೆ ಸಾಥ್ ನೀಡಿದ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ (22) ಇಬ್ಬರನ್ನೂ ಪೊಲೀಸರು ಜೈಲಿಗಟ್ಟಿದ್ದಾರೆ.
33 ಡಿಗ್ರಿ ಸೆಲ್ಸಿಯಸ್ ಬಿಸಿಲಲ್ಲೇ ಸಿಕ್ಕ ದೊಡ್ಡ ಸುಳಿವು
ಜೂನ್ 18 ರಂದು ಘಟನೆ ನಡೆದಾಗ, ಕೇತನ್ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ತನ್ನ ಕುಟುಂಬಸ್ಥರನ್ನು ನಂಬಿಸಿ ನಾಟಕವಾಡಿದ್ದಳು. ಆದರೆ ಲೋನಾವಾಲಾ ಗ್ರಾಮಾಂತರ ಪೊಲೀಸರು ತನಿಖೆ ಚುರುಕುಗೊಳಿಸಿ ಕೋಟೆಯ ಟಿಕೆಟ್ ಕೌಂಟರ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳುವ ದೃಶ್ಯ ಪತ್ತೆಯಾಗಿದೆ.ಆ ದೃಶ್ಯದಲ್ಲಿ ಕೇತನ್ ಮತ್ತು ಸಿಯಾ ಜೊತೆಯಾಗಿ ಹೋಗುತ್ತಿದ್ದರೆ, ಅವರ ಹಿಂದೆನೇ ಒಬ್ಬ ಅಪರಿಚಿತ ವ್ಯಕ್ತಿ ಇವರನ್ನು ಹಿಂಬಾಲಿಸುತ್ತಿದ್ದ.
ಪೊಲೀಸರಿಗೆ ಬಂದ ಆ ಒಂದು ಸಂಶಯ: ಅಂದು ಪುಣೆಯಲ್ಲಿ ಬರೋಬ್ಬರಿ 33 ಡಿಗ್ರಿ ಸೆಲ್ಸಿಯಸ್ ಭೀಕರ ಬಿಸಿಲಿತ್ತು. ಅಂತಹ ಧಗಧಗಿಸುವ ಸೆಖೆಯಲ್ಲೂ ಆ ವ್ಯಕ್ತಿ ಇಡೀ ಮುಖ ಮುಚ್ಚಿಕೊಳ್ಳುವಂತೆ ತಲೆಗೆ ಹುಡಿ ಜಾಕೆಟ್ ಹಾಕಿ, ಅದರ ಮೇಲೊಂದು ಹೆಡ್ಸೆಟ್ ಧರಿಸಿದ್ದ “ಇಂತಹ ಬಿಸಿಲಿನಲ್ಲಿ ಯಾರು ಜಾಕೆಟ್ ಹಾಕ್ತಾರೆ?” ಎಂಬ ಪೊಲೀಸರ ಒಂದೇ ಒಂದು ಲಾಜಿಕಲ್ ಪ್ರಶ್ನೆ ಇಡೀ ಮರ್ಡರ್ ಮಿಸ್ಟರಿಯನ್ನು ಬಿಚ್ಚಿಟ್ಟಿತು.ಸಿಯಾ ದಿಢೀರನೆ ಹಿಂದೆ ತಿರುಗಿ ನೋಡುವುದು ಮತ್ತು ಆ ಹುಡಿ ಧರಿಸಿದ ವ್ಯಕ್ತಿ ತಕ್ಷಣವೇ ಕೆಳಗೆ ಕುಳಿತುಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿತ್ತು.
ಬಾಲಿಗೆ ಹೋಗಬೇಕಿದ್ದ ಜೋಡಿ ಕೋಟೆಯ ಕಂದಕಕ್ಕೆ ಬಿದ್ದಿದ್ದು ಹೇಗೆ?
ತಾಂತ್ರಿಕ ತನಿಖೆ (Technical Investigation) ಮತ್ತು ಕಾಲ್ ಡಿಟೇಲ್ಸ್ (CDR) ಪರಿಶೀಲಿಸಿದಾಗ ಸಿಯಾ ಹಾಗೂ ಚೇತನ್ ನಡುವೆ ಸಾವಿರಾರು ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆದಿರುವುದು ಪತ್ತೆಯಾಯಿತು. ಚೇತನ ಸೋಶಿಯಲ್ ಮೀಡಿಯಾ ಪ್ರೊಫೈಲ್ ಫೋಟೋಗಳನ್ನು ಸಿಸಿಟಿವಿ ದೃಶ್ಯಕ್ಕೆ ಹೋಲಿಸಿದಾಗ ಆ ಹುಡಿ ಧರಿಸಿದ ಕಿರಾತಕ ಚೇತನ್ ಎಂದು ಕನ್ಫರ್ಮ್ ಆಯಿತು.
ಮಾಯವಾದ ಪಾಸ್ಪೋರ್ಟ್: ಕೇತನ್ ಮತ್ತು ಸಿಯಾ ಪ್ರೀ-ವೆಡ್ಡಿಂಗ್ ಶೂಟ್ಗಾಗಿ ಇಂಡೋನೇಷ್ಯಾದ ಬಾಲಿ (Bali) ದ್ವೀಪಕ್ಕೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋದರೆ ಮರ್ಡರ್ ಪ್ಲಾನ್ ವರ್ಕೌಟ್ ಆಗಲ್ಲ ಎಂದು ಸಿಯಾ ಮೊದಲೇ ಕೇತನ್ ಪಾಸ್ಪೋರ್ಟ್ ಅನ್ನು ರಹಸ್ಯವಾಗಿ ಕದ್ದಿದ್ದಳು!
ಜೂನ್ 14ರ ಹಾವಿನ ನಾಟಕ: ಜೂನ್ 14 ರಂದೂ ಸಹ ಸಿಯಾ ಲೋಹಗಢ್ ಕೋಟೆಗೆ ಕೇತನ್ನನ್ನು ಕರೆದೊಯ್ದು ತಳ್ಳಲು ಯತ್ನಿಸಿದ್ದಳು. ಆದರೆ ಕೇತನ್ ಅದೃಷ್ಟವಶಾತ್ ಅಲ್ಲಿದ್ದ ಪೊದೆಯನ್ನು ಹಿಡಿದು ಬದುಕುಳಿದಿದ್ದ. ಆಗ ಸಿಯಾ, “ಅಲ್ಲಿ ಹಾವು ಇತ್ತು, ನಿನ್ನನ್ನು ರಕ್ಷಿಸಲು ಹೋದೆ” ಎಂದು ಸುಳ್ಳು ಕಥೆ ಕಟ್ಟಿ ಪಾರಾಗಿದ್ದಳು
ಜೂನ್ 18ರ ಭೀಕರ ಅಂತ್ಯ: ಕೊನೆಗೂ ಜೂನ್ 18ರಂದು ಚೇತನ್ ಸಹಾಯದಿಂದ ಕೇತನ್ನನ್ನು ಕೋಟೆಯ ಮೇಲಿಂದ ದೂಡಿ ಕೊಲೆ ಮಾಡಲಾಗಿತ್ತು.
ಮರ್ಯಾದೆಗೆ ಹೆದರಿ ಕೋಟ್ಯಾಧಿಪತಿ ಉದ್ಯಮಿಯನ್ನೇ ಮುಗಿಸಿದರು
ಬಂಧಿತ ಚೇತನ್ನನ್ನು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಸಿಯಾಗೆ ಕೇತನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ನಿಶ್ಚಿತಾರ್ಥ ಮುರಿದು ಪ್ರೇಮಿಯೊಂದಿಗೆ ಓಡಿಹೋದರೆ (Elope) ತನ್ನ ಕುಟುಂಬದ ಗೌರವ ಹರಾಜಾಗುತ್ತದೆ ಎಂಬ ಕಾರಣಕ್ಕೆ, ಮದುವೆಗೆ ಮುಂಚೆಯೇ ಕೇತನ್ನನ್ನು ಕೊಲ್ಲಲು ಈ ಕ್ರಿಮಿನಲ್ ಸ್ಕೆಚ್ ಹಾಕಿದ್ದರು! ನವೆಂಬರ್ನಲ್ಲಿ ಉದಯಪುರದ ಜಗತ್ಪ್ರಸಿದ್ಧ ಅರಮನೆಯಲ್ಲಿ ಇವರ ಭವ್ಯ ಮದುವೆ ನಿಶ್ಚಯವಾಗಿತ್ತು.
ಮೃತ ಕೇತನ್ ಅಗರ್ವಾಲ್ ಪುಣೆಯ ಹೆಸರಾಂತ ‘ಸಕ್ಸಸ್ ಗ್ರೂಪ್’ ರಿಯಲ್ ಎಸ್ಟೇಟ್ ಸಂಸ್ಥೆಯ ಡೈರೆಕ್ಟರ್ ಹಾಗೂ ಚೀಫ್ ಮಾರ್ಕೆಟಿಂಗ್ ಆಫೀಸರ್ (CMO) ಆಗಿ ಕಾರ್ಯನಿರ್ವಹಿಸುತ್ತಿದ್ದರು.

