HomeEntertainmentನೈಜ ಕ್ರೈಂ ಸ್ಟೋರಿ ಆಧಾರಿತ "ಚಾರ್ಜ್​ಶೀಟ್​ 03-08'' ಟೀಸರ್ ರಿಲೀಸ್:ಸಿನಿರಸಿಕರಲ್ಲಿ ಹೆಚ್ಚಿದ ನಿರೀಕ್ಷೆ

ನೈಜ ಕ್ರೈಂ ಸ್ಟೋರಿ ಆಧಾರಿತ “ಚಾರ್ಜ್​ಶೀಟ್​ 03-08” ಟೀಸರ್ ರಿಲೀಸ್:ಸಿನಿರಸಿಕರಲ್ಲಿ ಹೆಚ್ಚಿದ ನಿರೀಕ್ಷೆ

ಬೆಂಗಳೂರು ಮಹಾನಗರದಲ್ಲಿ ನಡೆದ ಅತ್ಯಂತ ಆಘಾತಕಾರಿ ನೈಜ ಅಪರಾಧ ಘಟನೆಯೊಂದನ್ನು ಆಧರಿಸಿ ಸಿದ್ಧವಾಗಿರುವ ‘ಚಾರ್ಜ್ ಶೀಟ್’ ಚಲನಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಚಿತ್ರದ ರೋಮಾಂಚಕ ಟೀಸರ್ ಅನ್ನು ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನೈಜ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಸದ್ಯ ಸಿನಿರಸಿಕರಲ್ಲಿ ಭಾರಿ ಕುತೂಹಲವನ್ನು ಮೂಡಿಸಿದೆ.

ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ದಿನೇಶ್ ಮತ್ತು ಲಕ್ಷ್ಮಣ್ ಬಂಡವಾಳ ಹೂಡಿದ್ದಾರೆ. ಎಸ್ ಕೆ ಉಮೇಶ್ ಅವರು ಒದಗಿಸಿರುವ ನೈಜ ಕಥೆಯನ್ನು ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಬೆಳ್ಳಿಪರದೆಗೆ ತಕ್ಕಂತೆ ಆಕರ್ಷಕವಾಗಿ ಹೆಣೆದಿದ್ದಾರೆ. ಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ವೆಂಕಟ್ ಭಾರದ್ವಾಜ್ ಅವರೇ ನಿಭಾಯಿಸಿದ್ದು ಪ್ರೊಡಕ್ಷನ್ ಡಿಸೈನ್ ಕೂಡ ಅವರದ್ದೇ ಆಗಿದೆ.

ಚಿತ್ರದಲ್ಲಿ ಹರ್ಷ್ ಅರ್ಜುನ್, ಸತ್ಯಶ್ರೀ, ಹಿರಿಯ ನಟ ಸುಂದರ್ ರಾಜ್, ವೆಂಕಟ್ ಭಾರದ್ವಾಜ್, ಡಾ ಪ್ರಮೋದ್, ಸಂತೋಷ್, ರೂಪೇಶ್, ಚೇತನಾ ಖೋಟ್ ಹಾಗೂ ಡಾ ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಹಾಗೂ ಶಮೀಕ್ ವಿ ಭಾರದ್ವಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಮೀರ್ ಕುಲಕರ್ಣಿ ಅವರು ಸಂಗೀತ ನಿರ್ದೇಶನದ ಜೊತೆಗೆ ಧ್ವನಿ ವಿನ್ಯಾಸ ಮತ್ತು ಮಿಕ್ಸಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಲಕ್ಷ್ಮಣ್ ಶಿವಶಂಕರ್, ವಿನಯ್ ಶಾಸ್ತ್ರಿ ಹಾಗೂ ಬೃಂದಾ ಬರೆದಿರುವ ಗೀತೆಗಳಿಗೆ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅವಿನಾಶ್ ಚೆಬ್ಬಿ, ವೈಶಾಖ್ ಮತ್ತು ಐಶ್ವರ್ಯ ಸುಧೀಂದ್ರ ಧ್ವನಿಯಾಗಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರದ ಪಬ್ಲಿಸಿಟಿ ಡಿಸೈನ್ ಅನ್ನು ಆದಿತ್ಯ ಅವಿನಾಶ್ ಸಿದ್ಧಪಡಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular