HomeKarnatakaನೀಟ್ ಮರು ಪರೀಕ್ಷೆ: ಜೀನ್ಸ್ ಧರಿಸಿ ಬಂದವರಿಗೆ ಪರೀಕ್ಷೆಗಿಲ್ಲ ಅವಕಾಶ

ನೀಟ್ ಮರು ಪರೀಕ್ಷೆ: ಜೀನ್ಸ್ ಧರಿಸಿ ಬಂದವರಿಗೆ ಪರೀಕ್ಷೆಗಿಲ್ಲ ಅವಕಾಶ

ಬೆಂಗಳೂರು: ದೇಶಾದ್ಯಂತ ನೀಟ್ ಮರು ಪರೀಕ್ಷೆ ಆರಂಭವಾಗಿದೆ. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಭಾರಿ ಬಂದೋಬಸ್ತ್ ಮೂಲಕ ನಡೆಸಲಾಗುತ್ತಿದೆ.

ಇಂದು ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಿದ್ದು, ಸಂಜೆ 5:15ರವರೆಗೂ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಎನ್ ಟಿಎ 15 ನಿಮಿಗಳ ಕಾಲ ಹೆಚ್ಚುವರಿ ಸಮಯಾವಕಾಶ ನೀಡಿದೆ. ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಿಯಮಗಳನ್ನು ಕಠಿಣಗೊಳಿಸಿದೆ.

ಇತ್ತ ಬೆಂಗಳೂರಿನಲ್ಲೂ ಸಹ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಬಿಡುವ ಮೊದಲು ಮೂರು ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಜೀನ್ಸ್ ಪ್ಯಾಂಟ್ ಧರಿಸಿ ಬಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಜೀನ್ಸ್ ಧರಿಸಿ ಬಂದಿದ್ದ 5-6 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಭದ್ರತಾ ಸಿಬ್ಬಂದಿಗಳು ಬೇರೆ ಬಟ್ಟೆ ಧರಿಸಿ ಬರುವಂತೆ ಹೇಳಿ ಕಳುಹಿಸಿದ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕೈಗೆ ಕಟ್ಟಲಾಗಿದ್ದ ಧಾರ್ಮಿಕ ಸಂಕೇತದ ದಾರವನ್ನು ಸಹ ಬಿಚ್ಚಿಸಲಾಗಿದೆ. ಶಿವದಾರ, ಜನಿವಾರ ಧರಿಸಿಕೊಂಡು ಬಂದವರಿಗೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿಲ್ಲ. ಅವುಗಳನ್ನು ತೆಗೆಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular