HomeKarnatakaರೈತರಿಗೆ ಬಂಪರ್ ಗುಡ್‌ನ್ಯೂಸ್: ಜೂನ್ 20ರಂದು PM ಕಿಸಾನ್ 23ನೇ ಕಂತು ಬಿಡುಗಡೆ, ಖಾತೆಗೆ ₹2,000...

ರೈತರಿಗೆ ಬಂಪರ್ ಗುಡ್‌ನ್ಯೂಸ್: ಜೂನ್ 20ರಂದು PM ಕಿಸಾನ್ 23ನೇ ಕಂತು ಬಿಡುಗಡೆ, ಖಾತೆಗೆ ₹2,000 ಜಮೆ

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ದೇಶದ ಅನ್ನದಾತರಿಗೆ ಮೋದಿ ಸರ್ಕಾರ ಮತ್ತೊಂದು ಬಂಪರ್ ಸಿಹಿ ಸುದ್ದಿ ನೀಡಿದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 20ರ ನಾಳೆ ದೇಶಾದ್ಯಂತ ಇರುವ ಬರೋಬ್ಬರಿ 9.44 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3:45ಕ್ಕೆ ಸರಿಯಾಗಿ ಪ್ರಧಾನಿಯವರು ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿ ಒಂದೇ ಒಂದು ಸಿಂಗಲ್ ಬಟನ್ ಒತ್ತುವ ಮೂಲಕ ಕೋಟ್ಯಂತರ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ.

ರೈತರ ಖಾತೆಗೆ ಬರಲಿದೆ ತಲಾ 2,000 ರೂಪಾಯಿ

ಪಿಎಂ ಕಿಸಾನ್ ಯೋಜನೆಯ ಗೇಮ್ ಪ್ಲಾನ್ ಪ್ರಕಾರ, ಅರ್ಹ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಪ್ರತಿ ವರ್ಷ ಒಟ್ಟು 6,000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಈ ಮೊತ್ತವನ್ನು ತಲಾ 2,000 ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ ರೈತರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ಜಮಾ ಮಾಡಲಾಗುತ್ತದೆ. ನಾಳೆ ಬಿಡುಗಡೆಯಾಗುತ್ತಿರುವುದು ಯೋಜನೆಯ 23ನೇ ಕಂತಾಗಿದ್ದು, ನಿಮ್ಮ ಖಾತೆಗೂ ಸರಿಯಾಗಿ 2,000 ರೂಪಾಯಿ ಬಂದು ಬೀಳಲಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ ತಿಂಗಳ ಈ ಬಿತ್ತನೆ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಈ ಹಣವು ರೈತರ ಮುಂಗಾರು ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲ ಮಾಡಿಕೊಡಲಿದೆ. ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಲು ಹಣವಿಲ್ಲದೆ ಒದ್ದಾಡುತ್ತಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಆರ್ಥಿಕ ನೆರವು ಸಖತ್ ಹೆಲ್ಪ್ ಆಗಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular