HomeLatest Newsವಿಧಾನ ಪರಿಷತ್ ಚುನಾವಣೆ ಇಂದು:ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆದ್ದರೆ ರಾಜಕೀಯ ಲೆಕ್ಕಾಚಾರವೇ ಬದಲಾವಣೆ

ವಿಧಾನ ಪರಿಷತ್ ಚುನಾವಣೆ ಇಂದು:ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆದ್ದರೆ ರಾಜಕೀಯ ಲೆಕ್ಕಾಚಾರವೇ ಬದಲಾವಣೆ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಇಂದು ಮತ್ತೊಂದು ಹೈ-ವೋಲ್ಟೇಜ್‌ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ವಿಧಾನಪರಿಷತ್‌ನ (MLC Election) ಒಟ್ಟು 7 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಕಣದಲ್ಲಿ 8 ಅಭ್ಯರ್ಥಿಗಳು ಇರುವುದರಿಂದ ಆಟ ರೋಚಕ ಘಟ್ಟ ತಲುಪಿದೆ. ಆಡಳಿತಾರೂಢ ಕಾಂಗ್ರೆಸ್‌ನ 4 ಹಾಗೂ ಪ್ರತಿಪಕ್ಷ ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಆಯ್ಕೆ ಹಾದಿ ಅತ್ಯಂತ ಸಲೀಸಾಗಿದೆ. ಆದರೆ, ಉಭಯ ಪಕ್ಷಗಳ ನಿದ್ದೆಗೆಡಿಸಿರುವುದು ಮಾತ್ರ 5ನೇ ಅಭ್ಯರ್ಥಿಯ ಮ್ಯಾಜಿಕ್ ನಂಬರ್ ಲೆಕ್ಕಾಚಾರ

ಕಾಂಗ್ರೆಸ್ ತನಗಿರುವ ಸಂಖ್ಯಾಬಲಕ್ಕಿಂತ ಹೆಚ್ಚುವರಿಯಾಗಿ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಇತ್ತ ಜೆಡಿಎಸ್ ತನ್ನ ಮೈತ್ರಿ ಬಲ ನಂಬಿ ಗೋವಿಂದರಾಜು ಅವರನ್ನು ರಂಗಕ್ಕೆ ಇಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್ ಹಸ್ತ ಮತ್ತು ಕ್ರಾಸ್ ವೋಟಿಂಗ್ (Cross Voting) ಭೀತಿಯಿಂದಾಗಿ ಕಾಂಗ್ರೆಸ್ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದರೆ, ಜೆಡಿಎಸ್ ಪಡೆ ದೇವನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದೆ.

ವಿಧಾನಸಭೆಯ ಸದ್ಯದ ಸಂಖ್ಯಾಬಲದ ಜಾತಕ (The Assembly Numbers)

ವಿಧಾನಸಭೆಯಲ್ಲಿ ಸದ್ಯ ಒಟ್ಟು 222 ಶಾಸಕರು ಇದ್ದು, ಪಕ್ಷವಾರು ಬಲ ಈ ಕೆಳಗಿನಂತಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್: 135

ಬಿಜೆಪಿ: 62

ಜೆಡಿಎಸ್: 18

ಪಕ್ಷೇತರರು: 02

ಸರ್ವೋದಯ ಪಕ್ಷ: 01

ಬಿಜೆಪಿ ಉಚ್ಚಾಟಿತರು (ರೆಬೆಲ್ಸ್): 03

ಒಬ್ಬ ಅಭ್ಯರ್ಥಿಯ ಗೆಲುವಿಗೆ ಬೇಕು 28 ಮತಗಳು

ಪರಿಷತ್ ಕಣದಲ್ಲಿ ಜಯಭೇರಿ ಬಾರಿಸಲು ಪ್ರತಿ ಅಭ್ಯರ್ಥಿಗೆ ಕನಿಷ್ಠ 28 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.

ಕಾಂಗ್ರೆಸ್ ಪ್ಲಾನ್: ಯಾವುದೇ ರಿಸ್ಕ್ ಬೇಡ ಎಂದು ಕಾಂಗ್ರೆಸ್ ತನ್ನ ಮೊದಲ 4 ಅಭ್ಯರ್ಥಿಗಳಿಗೆ ತಲಾ 29 ಮತಗಳನ್ನು ಹಾಕಿಸಲು ನಿರ್ಧರಿಸಿದೆ (4 × 29 = 116 ಮತಗಳು ಖಾಲಿ). ಹೀಗಾಗಿ, 5ನೇ ಅಭ್ಯರ್ಥಿಯ ಕೈ ಸೇರುವುದು ಕೇವಲ ಕಾಂಗ್ರೆಸ್‌ನ ಉಳಿಕೆ 19 ಮತಗಳು ಮಾತ್ರ. ಇವರಿಗೆ ಗೆಲ್ಲಲು ಇನ್ನೂ 9 ಮತಗಳ ಕೊರತೆ ಇದೆ

ಬಿಜೆಪಿ ಪ್ಲಾನ್: ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತಗಳಂತೆ ಒಟ್ಟು 58 ಮತಗಳು ಚಲಾವಣೆಯಾಗಲಿವೆ. ಇನ್ನುಳಿದ ಹೆಚ್ಚುವರಿ 4 ಮತಗಳನ್ನು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ವರ್ಗಾಯಿಸಲು ಬಿಗ್ ಪ್ಲಾನ್ ಮಾಡಲಾಗಿದೆ.

ಕಾಂಗ್ರೆಸ್ ಬಳಿ ತನ್ನದೇ ಆದ 19 ಮತಗಳಿವೆ. ಬಾಕಿ ಉಳಿದಿರುವ 9 ಮತಗಳಿಗಾಗಿ ಸಿಎಂ ಮತ್ತು ಡಿಸಿಎಂ ಜೋಡಿ ಭರ್ಜರಿ ತಂತ್ರ ಹೆಣೆದಿದೆ. ಪಕ್ಷೇತರರು, ಸರ್ವೋದಯ ಪಕ್ಷ ಹಾಗೂ ಶಾಸಕರಾದ ಯತ್ನಾಳ್ ಮತ್ತು ರೆಡ್ಡಿ ಅವರ ನಡೆ ಮೇಲೆ ಕಣ್ಣಿಟ್ಟಿರುವ ಕೈ ನಾಯಕರು, 2ನೇ ಪ್ರಾಶಸ್ತ್ಯದ ಮತಗಳ (Second Preference Votes) ಮೂಲಕ ತಮ್ಮ 5ನೇ ಅಭ್ಯರ್ಥಿಯನ್ನು ದಂಡೆ ತಲುಪಿಸುವ ಪಕ್ಕಾ ವಿಶ್ವಾಸದಲ್ಲಿದ್ದಾರೆ.

ಎಚ್‌ಡಿಕೆ ಹೆಣೆದಿರುವ ಜೆಡಿಎಸ್ ಚದುರಂಗದಾಟ

ಜೆಡಿಎಸ್‌ನ ಸ್ವಂತ ಬಲ 18 ಮತಗಳು. ಇದರ ಜೊತೆಗೆ ಬಿಜೆಪಿಯ ಹೆಚ್ಚುವರಿ 4 ಮತಗಳು ಸೇರಿದರೆ ಒಟ್ಟು 22 ಮತಗಳು ಫಿಕ್ಸ್ ಆಗುತ್ತವೆ. ಒಂದು ವೇಳೆ ಬಿಜೆಪಿಯ ರೆಬೆಲ್ ಶಾಸಕರು ಕೈ ಹಿಡಿದರೆ ಈ ಸಂಖ್ಯೆ 24ಕ್ಕೆ ಏರಲಿದೆ. ಇನ್ನುಳಿದ ಕನಿಷ್ಠ 4 ಮತಗಳನ್ನು ಕಾಂಗ್ರೆಸ್ ಪಾಳೆಯದಿಂದಲೇ ರಹಸ್ಯವಾಗಿ ಸೆಳೆಯಲು (Cross Voting) ಎಚ್.ಡಿ. ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಯಾವುದೇ ಕಾರಣಕ್ಕೂ ಅಡ್ಡ ಮತದಾನ ಆಗಬಾರದು ಎಂದು ಶಾಸಕರಿಗೆ ಖಡಕ್ ವಿಪ್ ಜಾರಿ ಮಾಡಲಾಗಿದೆ.

ತಂದೆಗೆ ಮಗನೇ ವಿಪ್ ಜಾರಿ ಜಿ.ಟಿ. ದೇವೇಗೌಡ ನಡೆ ನಿಗೂಢ?

ಈ ಇಡೀ ಚುನಾವಣೆಯಲ್ಲಿ ಅತ್ಯಂತ ಹೈಲೈಟ್ ಆಗಿರುವುದು ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡರ ನಡೆ ಅನಾರೋಗ್ಯದ ನೆಪ ಹೇಳಿ ದೇವನಹಳ್ಳಿ ರೆಸಾರ್ಟ್‌ನಿಂದ ಜಿಟಿಡಿ ದೂರ ಉಳಿದಿದ್ದಾರೆ. “ನಾನು ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಹಾಕುತ್ತೇನೆ” ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಟ್ವಿಸ್ಟ್ ಏನೆಂದರೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಅವರ ಸ್ವಂತ ಪುತ್ರನೇ ತಂದೆಗೆ ವಿಪ್ ಜಾರಿ ಮಾಡಿದ್ದು, ಜಿಟಿಡಿ ಯಾರಿಗೆ ವೋಟ್ ಹಾಕಲಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಕುತೂಹಲ ಮೂಡಿಸಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular