HomeLatest NewsALERT : ಕೋತಿಗಳ ಕಾಟಕ್ಕೆ ಮಹಿಳೆ ಬಲಿ ; ಮನೆಯ ಮೇಲ್ಛಾವಣಿಯಲ್ಲಿ ಇಟ್ಟಿಗೆಗಳಿದ್ದರೆ ಕೂಡಲೇ ತೆಗೆದುಹಾಕಿ...

ALERT : ಕೋತಿಗಳ ಕಾಟಕ್ಕೆ ಮಹಿಳೆ ಬಲಿ ; ಮನೆಯ ಮೇಲ್ಛಾವಣಿಯಲ್ಲಿ ಇಟ್ಟಿಗೆಗಳಿದ್ದರೆ ಕೂಡಲೇ ತೆಗೆದುಹಾಕಿ !

ತೆಲಂಗಾಣ : ಜಗಿತ್ಯಾಳ ಜಿಲ್ಲೆಯ ಧರ್ಮಪುರಿಯಲ್ಲಿ ಕೋತಿಗಳ ಕಾಟ ಮತ್ತೊಂದು ಅಮಾಯಕ ಜೀವವನ್ನು ಬಲಿತೆಗೆದುಕೊಂಡಿದೆ. ಇಂದಿರಮ್ಮ ಕಾಲೋನಿಯ ನಿವಾಸಿ ಕೊನಪರ್ತಿ ಪದ್ಮ (50) ಅವರು ಮನೆಯ ಬಳಿಯಲ್ಲಿ ನಿಂತಿದ್ದಾಗ, ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದ ಕೋತಿಗಳು ತಳ್ಳಿದ ಸಿಮೆಂಟ್ ಇಟ್ಟಿಗೆ ಕೆಳಗೆ ಬಿದ್ದು ಅವರ ತಲೆಗೆ ಬಲವಾಗಿ ತಗುಲಿತು. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟರು.

ಧರ್ಮಪುರಿ ಪಟ್ಟಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಪದ್ಮ ಅವರು ಮನೆಯ ಕೆಳಭಾಗದಲ್ಲಿ ಇದ್ದ ವೇಳೆ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದ ಕೋತಿಗಳ ಗುಂಪು ಅಟ್ಟಹಾಸ ಮೆರೆದಿದೆ. ಈ ವೇಳೆ ಅವುಗಳು ಮೇಲ್ಛಾವಣಿಯಲ್ಲಿ ಇಟ್ಟಿದ್ದ ಭಾರವಾದ ಸಿಮೆಂಟ್ ಇಟ್ಟಿಗೆಗಳನ್ನು ಕದಡಿವೆ. ಪರಿಣಾಮವಾಗಿ ಇಟ್ಟಿಗೆಗಳು ಕೆಳಗೆ ಬಿದ್ದಿವೆ.

ಅವುಗಳಲ್ಲಿ ಒಂದು ಇಟ್ಟಿಗೆ ಪದ್ಮ ಅವರ ತಲೆಗೆ ಬಲವಾಗಿ ಬಡಿದಿದೆ. ತಲೆಗೆ ಗಂಭೀರ ಗಾಯವಾಗಿ ಭಾರೀ ರಕ್ತಸ್ರಾವ ಉಂಟಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕುಟುಂಬವನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಿಂದೆ ಕೂಡ ಸಂಭವಿಸಿತ್ತು ದುರಂತ

ಇತ್ತೀಚಿನ ದಿನಗಳಲ್ಲಿ ಧರ್ಮಪುರಿಯಲ್ಲಿ ಕೋತಿಗಳ ಕಾಟ ತೀವ್ರಗೊಂಡಿದೆ. ಜನರು ಮನೆಗಳಿಂದ ಹೊರಗೆ ಬರಲು ಸಹ ಭಯಪಡುವಂತಾಗಿದೆ. ಎಲ್ಲೆಡೆ ಕೋತಿಗಳ ಗುಂಪುಗಳು ಸಂಚರಿಸುತ್ತಿವೆ.

ಈ ಹಿಂದೆ ಕೂಡ ಕೋತಿಗಳ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಿಂದ ಬಿದ್ದು ಮೃತಪಟ್ಟ ಘಟನೆ ಇದೇ ಪ್ರದೇಶದಲ್ಲಿ ನಡೆದಿತ್ತು. ವಿಶೇಷವಾಗಿ ವಿದ್ಯಾರ್ಥಿಗಳು ಒಬ್ಬರೇ ಶಾಲೆಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋತಿಗಳು ಆಗಾಗ್ಗೆ ಜನರ ಮೇಲೆ ದಾಳಿ ನಡೆಸುತ್ತಿವೆ.

ಪದ್ಮ ಅವರ ಸಾವಿನ ನಂತರ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ದುರ್ಘಟನೆಯಿಂದ ಕುಟುಂಬ ಸದಸ್ಯರು ಹಾಗೂ ಬಂಧುಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ.

ಎಚ್ಚರಿಕೆ: ಅಧಿಕಾರಿಗಳು ಮನೆಗಳ ಮೇಲ್ಛಾವಣಿಗಳಲ್ಲಿ ಇಟ್ಟಿರುವ ಇಟ್ಟಿಗೆಗಳು, ನಿರ್ಮಾಣ ಸಾಮಗ್ರಿಗಳು ಹಾಗೂ ಇತರೆ ಭಾರವಾದ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular