HomeKarnatakaSHOCKING : ಪ್ರೇಯಸಿಯನ್ನು ಕೊಂದು ಶವವನ್ನೇ ಅಪ್ಪಿಕೊಂಡು ಮಲಗಿದ್ದ ಪ್ರಿಯಕರ ; ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಭವಾನಿ...

SHOCKING : ಪ್ರೇಯಸಿಯನ್ನು ಕೊಂದು ಶವವನ್ನೇ ಅಪ್ಪಿಕೊಂಡು ಮಲಗಿದ್ದ ಪ್ರಿಯಕರ ; ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಭವಾನಿ ಕೊಲೆ ಕೇಸ್.!

ಬೆಂಗಳೂರು : ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಗರದಲ್ಲಿ ನಡೆದ ಭವಾನಿ ಕೊಲೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಪ್ರಿಯತಮೆ ಭವಾನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಚಂದ್ರು (ಚಂದ್ರಶೇಖರ್) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಕೊಲೆ ಬಳಿಕ ಭವಾನಿಯ ಮೃತದೇಹವನ್ನು ಅಪ್ಪಿಕೊಂಡೇ ಆರೋಪಿ ಮಲಗಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಭವಾನಿ ಮತ್ತು ಚಂದ್ರಶೇಖರ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಕುಟುಂಬದವರಿಗೆ ತಿಳಿಯದಂತೆ ಮದುವೆಯಾಗಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪಗಳು ಬಂದಿದ್ದವು. ಇದರಿಂದ  ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.

ತನಿಖೆ ವೇಳೆ, ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಂದ್ರು ಭವಾನಿಗೆ ಮನವರಿಕೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಭವಾನಿ ವಿಷವನ್ನು ವಾಂತಿ ಮಾಡಿದ್ದರಿಂದ ಆಕೆ ಬದುಕುವ ಸಾಧ್ಯತೆ ಇತ್ತು. ಇದರಿಂದ ಆತಂಕಗೊಂಡ ಚಂದ್ರು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಶಂಕೆ ಪೊಲೀಸರಿಗೆ ಇದೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತೆ ತೋರಿಸಲು ಪ್ರಯತ್ನಿಸಿದ್ದಾನೆ ಎಂದು ತನಿಖೆ ಹೇಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಪೊಲೀಸರು ಮತ್ತು ಕುಟುಂಬಸ್ಥರು ಬಂದು ನೋಡಿದಾಗ ಭವಾನಿಯ ಮೃತದೇಹವನ್ನು ತಬ್ಬಿಕೊಂಡ ಸ್ಥಿತಿಯಲ್ಲಿ ಚಂದ್ರು ಮಲಗಿದ್ದ ಎನ್ನಲಾಗಿದೆ. ಮೊದಲಿಗೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾವಿಸಿದ್ದರು. ಸುಮಾರು 1 ಗಂಟೆ ಆದರೂ ಯಾವುದೇ ಚಲನವಲನವಿಲ್ಲದೇ ಮೃತದೇಹದ ಪಕ್ಕದಲ್ಲೇ ಮಲಗಿದ್ದ ಕಾರಣ ಆತ ಮೃತಪಟ್ಟಿದ್ದಾನೆ ಎಂಬ ಅನುಮಾನ ಮತ್ತಷ್ಟು ಬಲವಾಗಿತ್ತು.

 ಆದರೆ ಮೃತದೇಹಗಳನ್ನು ಆಂಬುಲೆನ್ಸ್ ಗೆ ಸ್ಥಳಾಂತರಿಸುವ ವೇಳೆ ಚಂದ್ರು ಕೈ ಕಾಲುಗಳು ಅಲ್ಲಾಡಿದ್ದವು. ಕೂಡಲೇ ಪೊಲೀಸರು ಅನುಮಾನಗೊಂಡು ಆತನನ್ನು ಆಸ್ಪತ್ರೆಗೆ  ದಾಖಲಿಸಿದ್ದಾರೆ. ನಂತರ ಚಂದ್ರುವನ್ನು ವಿಚಾರಣೆ ನಡೆಸಿದ ಬಳಿಕ ನಿಜವಾದ ಸತ್ಯಾಂಶ ಬಯಲಿಗೆ ಬಂದಿದೆ.ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ಸತ್ಯ ಬಹಿರಂಗವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular