HomeEntertainmentಪೆದ್ದಿ ಹವಾ: ಎರಡನೇ ಭಾನುವಾರವೂ ಭರ್ಜರಿ ಟಿಕೆಟ್ ಸೇಲ್ಸ್, ರಾಮ್ ಚರಣ್ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ

ಪೆದ್ದಿ ಹವಾ: ಎರಡನೇ ಭಾನುವಾರವೂ ಭರ್ಜರಿ ಟಿಕೆಟ್ ಸೇಲ್ಸ್, ರಾಮ್ ಚರಣ್ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ

ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಗ್ರಾಮೀಣ ಕ್ರೀಡಾ ಆಧಾರಿತ ಚಿತ್ರ ಪೆದ್ದಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಬಿಡುಗಡೆಯಾಗಿ 11 ದಿನಗಳು ಕಳೆದರೂ ತನ್ನ ಕ್ರೇಜ್ ಕಳೆದುಕೊಂಡಿಲ್ಲ. ಭಾನುವಾರ ಚಿತ್ರದ ಟಿಕೆಟ್ ಮಾರಾಟದಲ್ಲಿ ಭಾರಿ ಜಿಗಿತ ಕಂಡಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರಕ್ಕೆ ಎರಡನೇ ಶನಿವಾರಕ್ಕಿಂತಲೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಹರಿದು ಬಂದಿದ್ದಾರೆ. ಪ್ರಮುಖ ಟಿಕೆಟ್ ಬುಕಿಂಗ್ ಆಪ್ ಆಗಿರುವ ಬುಕ್ ಮೈ ಶೋನಲ್ಲಿ ಶನಿವಾರ 1.55 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದರೆ, ಭಾನುವಾರ ಈ ಸಂಖ್ಯೆ 1.60 ಲಕ್ಷ ದಾಟಿದೆ. ಇದು ಸಿನಿಮಾ ಮೇಲಿರುವ ಪ್ರೇಕ್ಷಕರ ಒಲವು ಮತ್ತು ಸಕಾರಾತ್ಮಕ ವಿಮರ್ಶೆಗಳಿಗೆ ಸಾಕ್ಷಿಯಾಗಿದೆ. ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿರುವ ಈ ಚಿತ್ರಕ್ಕೆ ಇಂದಿನ ಸೋಮವಾರದ ಕಲೆಕ್ಷನ್ ಪರೀಕ್ಷೆ ಎದುರಾಗಲಿದ್ದು, ವಾರದ ದಿನಗಳಲ್ಲಿ ಸಿನಿಮಾ ಎಷ್ಟು ಮಟ್ಟಿಗೆ ಹಿಡಿತ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ವೃದ್ಧಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಪೆದ್ದಿ ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಇನ್ನುಳಿದಂತೆ ಕನ್ನಡದ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹಾಗೂ ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular