ಬೆಂಗಳೂರು: ಬಿಡದಿ ಟೌನ್ ಶಿಪ್ ಭೂಸ್ವಾದೀನ ವಿವಾದ ತಾರಕ್ಕೇರಿದ್ದು, ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸಚಿವ ಹೆಚ್.ಡಿ,ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ ಎಂಬುದರಲ್ಲಿ ಡೌಟೇ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ರಾಅಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಡದಿ ಟೌನ್ ಶಿಪ್ ಡಿ,ಕೆ.ಶಿವಕುಮಾರ್ ಅವರ ಕನಸಿನ ಕೂಸಲ್ಲ. ಅದು ನನ್ನ ಕನಸಿನ ಕೂಸು. ನನ್ನ ಉದ್ದೇಶ ಬೇರೆ ಇದ್ದದ್ದು. ಆದರೆ ಇವತ್ತಿನ ಅವರ ಉದ್ದೇಶವೇ ಬೇರೆ ಇದೆ ಎಂದು ಗುಡುಗಿದರು.
ಅವರು ಟೌನ್ ಶಿಪ್ ಮಾಡುತ್ತಿರುವುದು ಲ್ಯಾಂಡ್ ದಂಧೆ ನಡೆಸಲು ಮಾತ್ರ. ಸಣ್ಣ ಪುಟ್ಟ ಭೂಮಿ ಇರುವವರಿಗೆ ಯಾವ ರೀತಿ ಪರಿಹಾರ ಕೊಟ್ಟಿದ್ದಾರೆ? ಡಿ.ಕೆ.ಶಿವಕುಮಾರ್ ಅವರೇ ನಿಮಗೆ ನಿಜಕ್ಕೂ ರೈತರ ಬಗ್ಗೆ ಕಳಕಳಿ ಇದೆಯಾ? ಎಂದು ಕೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ನೀವು ದಿನವೂ ಅಜ್ಜಯ್ಯನ ಬಳಿ ಹೋಗುತ್ತೀರಿ. ನಿಮಗೆ ಯಾವರೀತಿ ಬದುಕಬೇಕು ಎಂದು ಅಜ್ಜಯ್ಯ ಕರುಣೆ ತೀರಿಲ್ಲ. ನಿಮಗೆ ಅಜ್ಜಯ್ಯನ ರಕ್ಷಣೆ ಇದೆ. ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗುತ್ತೀರಿ. ಅಜ್ಜಯ್ಯ ಹೇಳಿದ್ದಾರಾ? ರೈತರನ್ನು ಒಕ್ಕಲೆಬ್ಬಿಸಿ ಟೌನ್ ಶಿಪ್ ನಿರ್ಮಾಣ ಮಾಡಿ ಎಂದು? ಎಂದು ಪ್ರಶ್ನಿಸಿದರು.
ಜೆಡಿಎಸ್ ನಿಂದ ಪ್ರತಿಭಟನೆ ನಡೆಸಲು, ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ. ಆದರೆ ಇಲ್ಲಿ ರೈತ ಮುಖಂಡರನ್ನು ಬಂಧಿಸುವ ಕೆಲದ್ಸವಾಗುತ್ತಿದೆ. ಅಗತ್ಯವಿದ್ದರೆ ನಾನೇ ಹೋರಾಟಕ್ಕೆ ಹೋಗುತ್ತೇನೆ ಎಂದು ಹೇಳಿದರು. ಇದು ರಾಜಕೀಯ ಹೊರಾಟವಲ್ಲ. ಭೂಸ್ವಾಧೀನಕ್ಕೆ ಹೊರಟಿರುವ ಭೂಮಿ ಫಲವತ್ತಾದ ನೀರಾವರಿ ಜಮೀನು ಎಂಬುದು ನೋಡಿದಾಕ್ಷಣ ಎಲ್ಲರೀಗು ಗೊತ್ತಾಗುತ್ತದೆ. ಇಂತಹ ನಿರ್ಧಾರ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

