HomeLatest NewsBREAKING : ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು...

BREAKING : ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್ |WATCH VIDEO

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ವಿಜಯದ ಸಂಕೇತವಾಗಿ ದೇವಿಗೆ ಬೆಳ್ಳಿ ಖಡ್ಗ (ಕತ್ತಿ) ಸಮರ್ಪಿಸಿ ಭಕ್ತಿ ಅರ್ಪಿಸಿದರು.

ಹೌದು.  ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಆಶೀರ್ವಾದಕ್ಕಾಗಿ ವಿಜಯ್ ಅವರು ದೇವಾಲಯದಲ್ಲಿ ಖಡ್ಗ ಸಮರ್ಪಣೆ ಮಾಡಿದ್ದು, ಭಕ್ತರಲ್ಲಿ ವಿಶೇಷ ಗಮನ ಸೆಳೆಯಿತು. ವಿಜಯ್ ಅವರು ಹಣ್ಣು-ಹಂಪಲು, ಸೀರೆ ಸೇರಿದಂತೆ ವಿವಿಧ ಕಾಣಿಕೆಗಳನ್ನು ದೇವಿಗೆ ಸಮರ್ಪಿಸಿದರು. ಅದರೊಂದಿಗೆ ಬೆಳ್ಳಿಯ ಅಲಂಕೃತ ಖಡ್ಗವನ್ನು ದೇವಿಗೆ ಅರ್ಪಿಸಿ, ಅದನ್ನು “ವಿಜಯದ ಸಂಕೇತ” ಎಂದು ಭಾವಿಸಿ ಸಮರ್ಪಿಸಲಾಗಿದೆ ಎಂದು ತಿಳಿದುಬಂದಿದೆ. ದೇವಾಲಯದ ಅರ್ಚಕರು ವಿಜಯ್ ಅವರಿಗೆ ರಕ್ಷದಾರ ಕಟ್ಟಿ ಆಶೀರ್ವಾದಿಸಿದರು. ಪೂಜೆಯ ಬಳಿಕ ಅವರು ಕೆಲ ಹೊತ್ತು ದೇವಾಲಯದಲ್ಲಿ ಧ್ಯಾನಮಗ್ನರಾಗಿದ್ದ ದೃಶ್ಯ ಭಕ್ತರ ಗಮನ ಸೆಳೆಯಿತು.

ದೇವಾಲಯದಲ್ಲಿ ವಿಶೇಷ ಪೂಜೆ

ಮಧ್ಯಾಹ್ನ 3 ಗಂಟೆ ಸುಮಾರಿಗೆ ದೇವಾಲಯಕ್ಕೆ ಆಗಮಿಸಿದ ವಿಜಯ್ ಅವರನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಪೂಜೆ ಬಳಿಕ ದೇವಿಯ ಸನ್ನಿಧಿಯಲ್ಲಿ ವಿಜಯ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಡ್ಗ ಸಮರ್ಪಣೆ

ಭಕ್ತಿಭಾವದಿಂದ ದೇವಿಗೆ ಹಣ್ಣು, ಹಂಪಲು ಹಾಗೂ ಸೀರೆಯನ್ನು ಸಮರ್ಪಿಸಿದ ವಿಜಯ್, ವಿಜಯ ಮತ್ತು ಧೈರ್ಯದ ಸಂಕೇತವಾದ ಖಡ್ಗವನ್ನೂ ಅರ್ಪಿಸಿದರು. ಈ ಸಮರ್ಪಣೆ ದೇವಿಯ ಕೃಪೆ ಹಾಗೂ ಯಶಸ್ಸಿನ ಸಂಕೇತವಾಗಿ ಕಾಣಲಾಗಿದೆ.ಸುಮಾರು  1 ಕೆಜಿ 600  ಗ್ರಾಂ ತೂಕವಿರುವ ಖಡ್ಗವನ್ನು ದೇವಿಗೆ ಸಮರ್ಪಿಸಿದರು.

ವಿಜಯ್ ಅವರ ಆಗಮನದ ಹಿನ್ನೆಲೆಯಲ್ಲಿ ಕೊಲ್ಲೂರು ಹಾಗೂ ಮಂಗಳೂರು ಭಾಗದಲ್ಲಿ ಭಾರೀ ಅಭಿಮಾನಿ ಸಮೂಹ ಜಮಾಯಿಸಿತ್ತು. ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಲ್ಲಿಂದ ನೇರವಾಗಿ ಕೊಲ್ಲೂರಿಗೆ ತೆರಳಿದ ವಿಜಯ್, ದೇವಿಯ ದರ್ಶನ ಪಡೆದ ಬಳಿಕ ಭಕ್ತರಿಗೆ ಕೈಬೀಸಿ ವಂದನೆ ಸಲ್ಲಿಸಿದರು.

ಅರ್ಚಕರಿಂದ ಆಶೀರ್ವಾದ

ಪೂಜೆ ನಂತರ ದೇವಾಲಯದ ಅರ್ಚಕರು ವಿಜಯ್ ಅವರ ಕೈಗೆ ರಕ್ಷದಾರ (ರಕ್ಷಾಸೂತ್ರ) ಕಟ್ಟಿ ಆಶೀರ್ವದಿಸಿದರು. ವಿಜಯ್ ಕೂಡ ಭಕ್ತರೊಂದಿಗೆ ಆತ್ಮೀಯವಾಗಿ ಬೆರೆತು ದೇವಾಲಯದ ಪರಂಪರೆಯನ್ನು ಗೌರವಿಸಿದರು.ವಿಜಯ್ ಅವರ ಆಗಮನದಿಂದ ದೇವಾಲಯದಲ್ಲಿ ಭಕ್ತರ ಸಂಭ್ರಮ ಮನೆಮಾಡಿತ್ತು. ಅನೇಕ ಅಭಿಮಾನಿಗಳು ಅವರನ್ನು ನೋಡುವುದಕ್ಕಾಗಿ ದೇವಾಲಯದ ಬಳಿ ಸೇರಿದ್ದರು. ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ವಿಜಯ್ ಅವರ ಈ ದೇವಾಲಯ ಭೇಟಿ ರಾಜಕೀಯ ಹಾಗೂ ಆಧ್ಯಾತ್ಮಿಕವಾಗಿ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ “ವಿಜಯ”ದ ಸಂಕೇತವಾಗಿ ಖಡ್ಗ ಸಮರ್ಪಣೆ ಮಾಡಿದ ವಿಚಾರ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular