ಕೋಲಾರ: ಸಾಲದ ಹಣ ವಾಪಸ್ ಕೇಳಿದ್ದಕ್ಕೆ 70 ವರ್ಷದ ವೃದ್ಧೆಯನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಬಳಿ ನಡೆದಿದೆ.
ಲಕ್ಷ್ಮಿಪುರ ಗ್ರಾಮದ ರೆಡ್ಡಮ್ಮ(70) ಕೊಲೆಯಾದವರು. ಸಾಲದ ಹಣ ವಾಪಸ್ ನೀಡುವುದಾಗಿ ಅವರನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಚಿಂತಾಮಣಿ ಮೂಲದ ತಿಮ್ಮರಾಜು, ಮುನಿರಾಜು ಲಕ್ಷ್ಮಿಪುರದ ರೆಡ್ಡಮ್ಮರನ್ನು ಕೊಲೆಗೈದ ಆರೋಪಿಗಳಾಗಿದ್ದಾರೆ.
ಮೇ 17ರಂದು ರೆಡ್ಡಮ್ಮ ಅವರನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ನಂತರ ಅರಣ್ಯದಲ್ಲಿ ವೃದ್ಧೆಯ ಶವ ಬಿಸಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಕೆಂಚಾರ್ಲಹಳ್ಳಿ ಅರಣ್ಯದಲ್ಲಿ ಶವ ಎಸೆದಿದ್ದು, ಮೇ 26ರಂದು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ರಾಯಲ್ಪಾಡು ಪೊಲೀಸರು ತನಿಖೆ ನಡೆಸಿದ ಆರೋಪಿಗಳಾದ ತಿಮ್ಮರಾಜು, ಮುನಿರಾಜು ಅವರನ್ನು ಬಂಧಿಸಿದ್ದಾರೆ.

