HomeKarnatakaBIG NEWS: ಕ್ರೀಡಾ ಇಲಾಖೆ ಕೊಟ್ಟಿದ್ದರೆ ಕ್ರಾಂತಿ ಮಾಡ್ತಿದ್ದೆ ಎಂದ ಸಚಿವ ಸತೀಶ್ ಜಾರಕಿಹೊಳಿ

BIG NEWS: ಕ್ರೀಡಾ ಇಲಾಖೆ ಕೊಟ್ಟಿದ್ದರೆ ಕ್ರಾಂತಿ ಮಾಡ್ತಿದ್ದೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟ ರಚನೆಯಾಗಿದ್ದು, ಖಾತೆ ಹಂಚಿಕೆ ಕೂಡ ಮಾಡಲಾಗಿದೆ. ಎರಡನೇ ಸುತ್ತಿನ ಸಂಪುಟ ರಚನೆ ಕಸರತ್ತು ಆರಂಭವಾಗಿದ್ದು, ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಭಾರಿ ಲಾಅಭಿ ನಡೆಸಲಾರಂಭಿಸಿದ್ದಾರೆ.

ಈನಡುವೆ ಮೊದಲ ಹಂತದ ಸಂಪುಟದ ಸಚಿವರಿಗೆ ಹಂಚಿಕೆಯಾಗಿರುವ ಖಾತೆ ಬಗ್ಗೆ ಕೆಲವರು ಅಸಮಾಧಾನಗೊಂಡಿದ್ದಾರೆ. ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ರಾಜೀನಾಮೆ ನೀಡಿ, ಮನವೊಲಿಕೆ ಬಳಿಕ ರಾಜೀನಾಮೆ ವಾಪಾಸ್ ಪಡೆದುಕೊಂಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಕೃಷಿ ಹಾಗೂ ಸಹಕಾರಿ ಖಾತೆಗೆ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಕೃಷ್ಣ ಬೈರೇಗೌಡ ನಗರಾಭಿವೃದ್ಧಿಯಲ್ಲಿ ಬಿಡಿಎ ಇಲ್ಲದಿರುವುದನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ರಸ್ತುತ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ತಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆಯನ್ನು ಕೇಳಿದ್ದೆ ಎಂದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಜೊತೆಗೆ ಕ್ರೀಡಾ ಇಲಾಖೆ ಕೇಳಿದ್ದೆ. ಕ್ರೀಡಾ ಇಲಾಖೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆ. ಆದರೆ ಡಿಸಿಎಂ ಪರಮೇಶ್ವರ್ ಅವರು ಈ ಖಾತೆಯನ್ನು ಕೇಳಿರಬಹುದು. ಹಾಗಾಗಿ ಅವರಿಗೆ ಕೊಟ್ಟಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನಗೆ ಮೊದಲಿನಿಂದಲೂ ಸ್ಫೋರ್ಟ್ಸ್ ಬಗ್ಗೆ ಆಸಕ್ತಿ. ಈಗಲೂ ಆಸಕ್ತಿಯಿದೆ. ಕ್ರೀಡಾ ಇಲಾಖೆ ಕೊಟ್ಟಿದ್ದರೆ ರಾಜ್ಯಮಟ್ಟದಲ್ಲಿ ಕ್ರಾಂತಿ ಮಾಡಬಹುದಿತ್ತು. ಈ ಹಿಂದೆಯೂ ಕ್ರೀಡಾ ಇಲಕಹೆ ಕೇಳಿದ್ದೆ. ಧರ್ಮಸಿಂಗ ಸರ್ಕಾರದಲ್ಲಿ ಕೇಳಿದ್ದೆ. ಬಹುಶಃ ಪರಮೇಶ್ವರ್ ಅವರು ತುಮಕೂರಿನಲ್ಲಿ ಅವರ ಕಾಲೇಜಿನಲ್ಲಿ ಸ್ಫೋರ್ಟ್ಸ್ ಕಂಡಕ್ಟ್ ಮಾಡುತ್ತಿರಬಹುದು. ಹಾಗಾಗಿ ಅವರು ಕ್ರೀಡಾ ಇಲಾಖೆ ಕೇಳಿ ಪಡೆದಿರಬಹುದು ಎಂದಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಯಾವುದೇ ಅಸಮಾಧಾನ, ಗೊಂದಲಗಳಿಲ್ಲ. ಈ ಹಿಂದಿನಿಂದಲೂ ನಾನು ಹೇಳುತ್ತಿದ್ದೇನೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular