HomeLatest NewsSHOCKING : ಯಮ ಧರ್ಮರಾಜನನ್ನೇ ಮುಟ್ಟಿ ಬಂದು ಬದುಕಿದ ಮಹಿಳೆ ! ಬೆಚ್ಚಿಬೀಳಿಸುವ ದೃಶ್ಯ ವೈರಲ್...

SHOCKING : ಯಮ ಧರ್ಮರಾಜನನ್ನೇ ಮುಟ್ಟಿ ಬಂದು ಬದುಕಿದ ಮಹಿಳೆ ! ಬೆಚ್ಚಿಬೀಳಿಸುವ ದೃಶ್ಯ ವೈರಲ್ |WATCH VIDEO

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಕಣ್ಣಾರೆ ನೋಡಿದರೂ ನಂಬಲಾಗದಂತಹ ಘಟನೆಗಳ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ಬೆಚ್ಚಿಬೀಳಿಸುವ ವಿಡಿಯೋ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಉತ್ತರ ಪ್ರದೇಶದ ಇಟಾವಾದಲ್ಲಿ ಭಾರೀ ಗಾಳಿಗೆ ಮನೆಯ ಮೇಲ್ಛಾವಣಿಯ ಕಬ್ಬಿಣದ ಶೀಟ್ ಕಳಚಿ ಮಹಿಳೆಯತ್ತ ದೌಡಾಯಿಸಿದರೂ, ಆಕೆಯ ಸಮಯಪ್ರಜ್ಞೆಯಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಇಟಾವಾ ಪ್ರದೇಶದಲ್ಲಿ ಭಾರೀ ಗಾಳಿ-ಮಳೆಯ ಸಂದರ್ಭ ಒಬ್ಬ ಮಹಿಳೆ ರಸ್ತೆ ಮೇಲೆ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಇದೇ ವೇಳೆ ಸಮೀಪದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ದೊಡ್ಡ ಕಬ್ಬಿಣದ ಶೀಟ್ (ಟಿನ್ ರೇಕು) ಬಿರುಗಾಳಿಯ ಹೊಡೆತಕ್ಕೆ ಕಳಚಿಕೊಂಡು ಗಾಳಿಯಲ್ಲಿ ತೇಲುತ್ತಾ ವೇಗವಾಗಿ ಮಹಿಳೆಯ ಕಡೆಗೆ ದೌಡಾಯಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ಶೀಟ್ ಮಹಿಳೆಯ ಕುತ್ತಿಗೆ ಭಾಗಕ್ಕೆ ತಾಗುವಷ್ಟರ ಮಟ್ಟಿಗೆ ಸಮೀಪಕ್ಕೆ ಬಂದಿದ್ದು, ಕ್ಷಣಮಾತ್ರ ತಡವಾದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಮಹಿಳೆ ಅಸಾಧಾರಣ ಸಮಯಪ್ರಜ್ಞೆ ತೋರಿಸಿ, ತನ್ನತ್ತ ಬರುತ್ತಿದ್ದ ಶೀಟ್‌ನ್ನು ಕೈಗಳಿಂದ ತಳ್ಳಿಹಾಕಿ ಅಪಾಯದಿಂದ ಪಾರಾಗಿದ್ದಾಳೆ. ಬಳಿಕ ಅಲ್ಲಿಂದ ಓಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ.

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, @gharkekalesh ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.ಕೆಲವರು, “ಇದು ಹಾಲಿವುಡ್‌ನ ‘ಫೈನಲ್ ಡೆಸ್ಟಿನೇಷನ್’ ಚಿತ್ರದ ದೃಶ್ಯದಂತೆಯೇ ಇದೆ” ಎಂದು ಕಾಮೆಂಟ್ ಮಾಡಿದ್ದರೆ, ಮತ್ತೂ ಕೆಲವರು “ಅವಳ ಆಯುಷ್ಯ ಇನ್ನೂ ಉಳಿದಿದ್ದರಿಂದಲೇ ಬದುಕುಳಿದಳು” ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಘಟನೆ ಮಳೆಗಾಲ ಹಾಗೂ ಬಿರುಗಾಳಿ ಸಂದರ್ಭಗಳಲ್ಲಿ ರಸ್ತೆಯಲ್ಲಿ ಸಂಚರಿಸುವವರು ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular