HomeLatest NewsBIG NEWS : ಸರಿಯಾದ ಕಾರಣವಿಲ್ಲದೆ ಪತ್ನಿ ‘ಲೈಂಗಿಕ ಸಂಬಂಧ’ ನಿರಾಕರಿಸಿದರೆ ಅದು ಕ್ರೌರ್ಯ : ಸುಪ್ರೀಂಕೋರ್ಟ್...

BIG NEWS : ಸರಿಯಾದ ಕಾರಣವಿಲ್ಲದೆ ಪತ್ನಿ ‘ಲೈಂಗಿಕ ಸಂಬಂಧ’ ನಿರಾಕರಿಸಿದರೆ ಅದು ಕ್ರೌರ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಪತ್ನಿಯು ಯಾವುದೇ ಸಮಂಜಸ ಕಾರಣವಿಲ್ಲದೆ ನಿರಂತರವಾಗಿ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿರಾಕರಿಸುವುದು ವೈವಾಹಿಕ ಜೀವನದಲ್ಲಿ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದ್ದು, ಅದು ವಿಚ್ಛೇದನಕ್ಕೆ ಮಾನ್ಯ ಆಧಾರವಾಗಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೌದು.   ಪತ್ನಿಯು ಯಾವುದೇ ಸಮಂಜಸ ಅಥವಾ ನ್ಯಾಯಸಮ್ಮತ ಕಾರಣವಿಲ್ಲದೆ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿರಂತರವಾಗಿ ನಿರಾಕರಿಸಿದರೆ ಅದು ಪತಿಯ ಮೇಲಿನ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ನಡೆ ವಿಚ್ಛೇದನಕ್ಕೆ ಮಾನ್ಯ ಆಧಾರವಾಗಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ರಾಜಸ್ಥಾನ ಹೈಕೋರ್ಟ್ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದು, ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.

ಪ್ರಕರಣದ ವಿಚಾರಣೆ ವೇಳೆ, ದಂಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮರುಸಂಧಾನಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಜೊತೆಗೆ, ಪತ್ನಿಯು ನಿರಂತರವಾಗಿ ದಾಂಪತ್ಯ ಸಂಬಂಧದಿಂದ ದೂರ ಉಳಿದಿರುವುದು ಪತಿಗೆ ಮಾನಸಿಕ ನೋವು ಮತ್ತು ವೇದನೆ ಉಂಟುಮಾಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈವಾಹಿಕ ಸಂಬಂಧದಲ್ಲಿ ದೈಹಿಕ ಮತ್ತು ಭಾವನಾತ್ಮಕ ಸಾನ್ನಿಧ್ಯವು ಪ್ರಮುಖ ಅಂಶವಾಗಿದ್ದು, ಸೂಕ್ತ ಕಾರಣವಿಲ್ಲದೆ ಅದನ್ನು ನಿರಾಕರಿಸುವುದು ವಿವಾಹದ ಮೂಲ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ನಡೆ ಮಾನಸಿಕ ಕ್ರೌರ್ಯವೆಂದು ಪರಿಗಣಿಸಬಹುದಾಗಿದ್ದು, ವಿಚ್ಛೇದನ ನೀಡಲು ನ್ಯಾಯಸಮ್ಮತ ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವ, ನಂಬಿಕೆ ಹಾಗೂ ಭಾವನಾತ್ಮಕ-ದೈಹಿಕ ಸಾನ್ನಿಧ್ಯವು ಪ್ರಮುಖ ಅಂಶಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಮಂಜಸ ಕಾರಣವಿಲ್ಲದೆ ದಾಂಪತ್ಯ ಸಂಬಂಧದಿಂದ ದೂರ ಉಳಿಯುವುದು ವಿವಾಹದ ಮೂಲ ಉದ್ದೇಶವನ್ನೇ ಹಾಳುಮಾಡುವಂತದ್ದು ಎಂದು ನ್ಯಾಯಾಲಯ ಹೇಳಿದ್ದು, ಈ ತೀರ್ಪು ಕುಟುಂಬ ಕಾನೂನು ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular