HomeLatest NewsBIG NEWS : 'HDFC' ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಸಾಲದ ಬಡ್ಡಿ ದರ...

BIG NEWS : ‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಸಾಲದ ಬಡ್ಡಿ ದರ ಏರಿಕೆ, ಇಂದಿನಿಂದಲೇ ಜಾರಿ

ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮಹತ್ವದ ಘೋಷಣೆ ಮಾಡಿದೆ. ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ ದರವನ್ನು (MCLR) ಹೆಚ್ಚಿಸಿದೆ.ಆಯ್ದ ಅವಧಿಗಳಿಗೆ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಲಾಗಿದ್ದು, ಈ ನಿರ್ಧಾರವು ಜೂನ್ 8, 2026 ರಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಈ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ MCLR ದರಗಳು 8.05% ರಿಂದ 8.60% ರಷ್ಟಿದ್ದವು, ಈಗ ಅವು 8.10% ರಿಂದ 8.65% ಕ್ಕೆ ಏರಿಕೆಯಾಗಿವೆ.

ಅವಧಿವಾರು ಬಡ್ಡಿ ದರಗಳ ವಿವರ:

  • ಓವರ್‌ನೈಟ್ (Overnight): 8.05% ರಿಂದ 8.10% ಕ್ಕೆ (5 ಬೇಸಿಸ್ ಪಾಯಿಂಟ್ ಏರಿಕೆ)
  • 3 ತಿಂಗಳು: 8.15% ರಿಂದ 8.20% ಕ್ಕೆ
  • 6 ತಿಂಗಳು: 8.30% ರಿಂದ 8.35% ಕ್ಕೆ
  • 1 ವರ್ಷ: 8.35% ರಿಂದ 8.40% ಕ್ಕೆ (ಗ್ರಾಹಕರ ಸಾಲಗಳಿಗೆ ಇದು ಪ್ರಮುಖವಾಗಿದೆ)
  • 2 ವರ್ಷ: 8.45% ರಿಂದ 8.55% ಕ್ಕೆ (10 ಬೇಸಿಸ್ ಪಾಯಿಂಟ್ ಏರಿಕೆ)
  • 3 ವರ್ಷ: 8.60% ರಿಂದ 8.65% ಕ್ಕೆ
  • 1 ತಿಂಗಳು: ಈ ಅವಧಿಯ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಇದು 8.05% ನಲ್ಲಿ ಸ್ಥಿರವಾಗಿದೆ.

RBI ರೆಪೊ ದರ ಯಥಾಸ್ಥಿತಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸುವುದಾಗಿ ಘೋಷಿಸಿತ್ತು. ಸಾಮಾನ್ಯವಾಗಿ ಆರ್‌ಬಿಐ ಬಡ್ಡಿ ದರ ಬದಲಿಸಿದಾಗ ಬ್ಯಾಂಕ್‌ಗಳು ದರ ಬದಲಿಸುತ್ತವೆ. ಆದರೆ, ಆರ್‌ಬಿಐ ರೆಪೊ ದರವನ್ನು ಬದಲಿಸದಿದ್ದರೂ, ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಿರುವುದು ಗಮನಾರ್ಹವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

MCLR ಅಂದ್ರೆ ಏನು ? MCLR ಎಂದರೆ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿ ದರ. ಅಂದರೆ, ಇದಕ್ಕಿಂತ ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್‌ಗಳು ಸಾಲ ನೀಡಲು ಸಾಧ್ಯವಿಲ್ಲ. 2016ರಲ್ಲಿ ಆರ್‌ಬಿಐ ಈ ಪದ್ಧತಿಯನ್ನು ಜಾರಿಗೆ ತಂದಿತ್ತು. MCLR ಹೆಚ್ಚಾದರೆ, ಅದಕ್ಕೆ ಲಿಂಕ್ ಆಗಿರುವ ಬ್ಯಾಂಕ್ ಸಾಲಗಳ ಬಡ್ಡಿ ದರವೂ ಹೆಚ್ಚಾಗುತ್ತದೆ. ಇದರಿಂದ ಫ್ಲೋಟಿಂಗ್ ದರದಲ್ಲಿ ಸಾಲ ಪಡೆದವರಿಗೆ ಇಎಂಐ (EMI) ಹೊರೆಯನ್ನು ಹೆಚ್ಚಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ (FD) ದರಗಳು: ಮತ್ತೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ (Fixed Deposits) ಮೇಲೆ ಸಾಮಾನ್ಯ ಜನರಿಗೆ 2.75% ರಿಂದ 6.50% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.25% ರಿಂದ 7% ವರೆಗೆ ಬಡ್ಡಿ ನೀಡುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular