ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯು 2026-27ನೇ ಸಾಲಿನ ಎಸ್.ಎಫ್.ಸಿ ನಿಧಿಯ ಯೋಜನೆಯಡಿ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡ ವಿಶೇಷಚೇತನ ಮತ್ತು ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ.
ಬಿ.ಇ /ಎಂ.ಬಿ. ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ.5 ಲಕ್ಷ ಮಿತಿಯಲ್ಲಿರಬೇಕು. ಬಿ.ಇ /ಎಂ.ಬಿ. ಬಿ.ಎಸ್. ವ್ಯಾಸಾಂಗ ಮಾಡುತ್ತಿರುವ ಇತರೆ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗಾಗಿ ರೂ.50000/- ಸಹಾಯಧನ ನೀಡಲಾಗುತ್ತಿದ್ದು, ಆದಾಯ ರೂ. 2.50 ಲಕ್ಷ ಮಿತಿಯಲ್ಲಿರಬೇಕು. ವಿಶೇಷ ಚೇತನರಿಗೆ ಸಣ್ಣ ಉದ್ದಿಮೆಗೆ ಸಹಾಯಧನ ನೀಡಲಾಗುತ್ತಿದ್ದು, ಅವರ ಆದಾಯ ರೂ. 3.00 ಲಕ್ಷ ಮಿತಿಯಲ್ಲಿರಬೇಕು.
ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಪತ್ರ, ಪಡಿತರಚೀಟಿ ಆಧಾರ ಕಾರ್ಡ್, ವ್ಯಾಸಾಂಗ ದೃಢೀಕರಣ ಪತ್ರ, ವಿಶೇಷ ಚೇತನರ UDID ಕಾರ್ಡ್, ಸಣ್ಣ ಉದ್ದಿಮೆ ಫಲಾಭವಿಗಳು ಯೋಜನಾ ವರದಿ ಲಗತ್ತಿಸುವುದು. ಈ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ನೀಡುವುದು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.shivamoggacity.mrc.gov.in, ದೂ. ಸಂ.: 08182-277677/226606 ಗಳನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಿಯಾಯಿತಿ
ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಶೇಕಡಾ 50 ರಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರವು ಸಾರ್ವಜನಿಕರಿಗೆ ಸುವರ್ಣಾವಕಾಶ ಕಲ್ಪಿಸಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ತಿಳಿಸಿದ್ದಾರೆ.
ಈ ರಿಯಾಯಿತಿಯು ನಿರ್ದಿಷ್ಟ ಅವಧಿಯ ಪ್ರಕರಣಗಳಿಗೆ ಮಾತ್ರ ಅನ್ವಯಿಸಲಿದೆ.1991 ರಿಂದ 2022 ರ ಒಳಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ಮಾತ್ರ ಈ 50% ದಂಡ ಪಾವತಿ ರಿಯಾಯಿತಿ ಅನ್ವಯವಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ಬಾಕಿ ಪ್ರಕರಣಗಳು: ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸದ್ಯ ಈ ಅವಧಿಗೆ ಸಂಬಂಧಿಸಿದ ಒಟ್ಟು 790 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.ದಂಡ ಪಾವತಿಯ ಅವಧಿ: ಅರ್ಹ ವಾಹನ ಮಾಲೀಕರು ದಿನಾಂಕ: 21-06-2026 ರಿಂದ 10-07-2026 ರೊಳಗೆ ಈ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಿ, ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬಹುದಾಗಿದೆ. ವಾಹನ ಮಾಲೀಕರು ಈ ನಿಗದಿತ ಅವಧಿಯೊಳಗೆ ರಿಯಾಯಿತಿಯ ಲಾಭವನ್ನು ಪಡೆದುಕೊಂಡು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

