HomeKarnataka2400 ಕೋಟಿ ರೂ. ಸಂಗ್ರಹಿಸಿದ್ದ ಶಿವಾನಂದ ನೀಲಣ್ಣನವರ್ ಬಂಧನದ ಬಳಿಕವೂ ಶಿವಂ ಅಸೋಸಿಯೇಟ್ಸ್ ನಲ್ಲಿ ಜನರಿಂದ...

2400 ಕೋಟಿ ರೂ. ಸಂಗ್ರಹಿಸಿದ್ದ ಶಿವಾನಂದ ನೀಲಣ್ಣನವರ್ ಬಂಧನದ ಬಳಿಕವೂ ಶಿವಂ ಅಸೋಸಿಯೇಟ್ಸ್ ನಲ್ಲಿ ಜನರಿಂದ ಹೂಡಿಕೆ

ಬೆಳಗಾವಿ: ಬೆಳಗಾವಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣನವರ ವಂಚನೆ ಮಾಡಿರುವುದು ಸಾಬೀತಾಗಿದೆ ಎಂದು ಬೆಳಗಾವಿಯಲ್ಲಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಶಿವಂ ಅಸೋಸಿಯೇಟ್ ನ ಮಾಲೀಕ ಶಿವಾನಂದ ನೀಲಣ್ಣನವರ ಇದುವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ಹಣವನ್ನು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದ. ಸಂಗ್ರಹವಾದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು.

540 ಕೋಟಿ ರೂಪಾಯಿಯನ್ನು ಸ್ಟಾರ್ಕ್ ಮಾರ್ಕೆಟ್ ನಲ್ಲಿ ಹಾಕಿದ್ದಾನೆ. ಸ್ಟಾಕ್ ಮಾರ್ಕೆಟ್ನಲ್ಲಿ 170 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ಇದುವರೆಗೂ 660 ಕೋಟಿ ರೂಪಾಯಿ ಶಾರ್ಟೇಜ್ ಕಂಡುಬಂದಿದೆ. 330 ಕೋಟಿ ರಿಕವರಿ ಆಗುತ್ತದೆ ಎಂದು ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

40,700 ಜನರಿಂದ ಹೂಡಿಕೆ ಮಾಡಿಕೊಂಡಿದ್ದ ಶಿವಾನಂದ ನೀಲಣ್ಣನವರ ಜತೆಗೆ ಇನ್ನೊಬ್ಬ ಪಾಲುದಾರ ಕೂಡ ಇದ್ದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣನವರ 55 ಕೋಟಿ ರೂಪಾಯಿ ಹಾಕಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ. ಇನ್ನು 11 ವೋಲ್ವೋ ಎಕ್ಸ್ ಸಿ 90 ಕಾರು ಖರೀದಿ ಮಾಡಿದ್ದು ಅವುಗಳನ್ನು ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಇದುವರೆಗೂ 400 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನು ವಾಪಸ್ ಪಡೆದು ಹಿನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ನಡೆದು ಪ್ರಕರಣವನ್ನು ಹಸ್ತಾಂತರಿಸಲಾಗಿತ್ತು. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ದಿಗೋಷ್ಠಿ ನಡೆಸುವುದಿಲ್ಲ. ಆದರೆ ಶಿವಂ ಅಸೋಸಿಯೇಟ್ ಕಂಪನಿಗೆ ಜನರು ಇಂದಿಗೂ ಹಣ ಹಾಕುತ್ತಿದ್ದಾರೆ. ಎಫ್ಐಆರ್ ಆದ ನಂತರ ಇದುವರೆಗೆ 5 ಕೋಟಿ ರೂ. ನಷ್ಟು ಮತ್ತೆ ಹೂಡಿಕೆಯಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸುದ್ದಿಗೋಷ್ಠಿ ನಡೆಸಿರುವುದಾಗಿ ಸಿಐಡಿ ಡಿಐಜಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular