HomeLatest Newsದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗ್ತಿದೆ, ಅವರನ್ನು ಮಟ್ಟಹಾಕಿ ನಮ್ಮ ಧರ್ಮದ ಜನರ ಬದುಕು ಮುಖ್ಯ: ಟ್ರಂಪ್...

ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗ್ತಿದೆ, ಅವರನ್ನು ಮಟ್ಟಹಾಕಿ ನಮ್ಮ ಧರ್ಮದ ಜನರ ಬದುಕು ಮುಖ್ಯ: ಟ್ರಂಪ್ ದೇಶದಲ್ಲಿ ಹಿಂದೂಗಳಿಗೆ ಅವಮಾನ; ವಿಡಿಯೊ

ವಿವಿಧ ದೇಶಗಳಲ್ಲಿ ವಲಸಿಗರ ವಿರುದ್ಧ ಅಲ್ಲಿನ ಸ್ಥಳೀಯರು ರೊಚ್ಚಿಗೆದ್ದು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದಲ್ಲೂ ಸಹ ಇಂತಹ ಘಟನೆಗಳು ಹಲವಾರು ಬಾರಿ ಕಂಡುಬಂದಿದ್ದು, ವಿದೇಶಗಳಲ್ಲಿ ಭಾರತೀಯರ ವಿರುದ್ಧ ಅದೇ ರೀತಿಯ ಪ್ರತಿಭಟನೆಗಳು ನಡೆದಿವೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗಳಲ್ಲಿ ಇಂತಹ ಪ್ರತಿಭಟನೆಗಳು ಹೆಚ್ಚಾಗಿ ವರದಿಯಾಗಿದ್ದು, ಇದೀಗ ಅಮೆರಿಕನ್ನರೂ ಸಹ ಭಾರತೀಯರ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ ( ಜೂನ್ 3 ) ದಕ್ಷಿಣ ಅಮೆರಿಕಾದ ಟೆಕ್ಸಾಸ್‌ನಲ್ಲಿ ಈ ರೀತಿಯ ಪ್ರತಿಭಟನೆ ನಡೆದಿದೆ.

ಅಲ್ಲಿನ ಸ್ಥಳೀಯರು ಭಾರತದಿಂದ ಅವರ ಜಾಗಕ್ಕೆ ವಲಸೆ ಹೊರಟವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಎಲಿಜಾ ಶಾಫರ್ ಎಂಬ ವ್ಯಕ್ತಿ ಭಾರತೀಯರನ್ನು ಕೆರಳಿಸುವಂತಹ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೊದಲ್ಲಿ ಕ್ಲೇಟಾನ್ ವಾಕರ್ ಎಂಬ ವ್ಯಕ್ತಿ ಕೈನಲ್ಲಿ ಸಿಗರೇಟ್ ಹಿಡಿದು ಫ್ರಿಸ್ಕೊ ಸಿಟಿ ಹಾಲ್ ಮುಂಭಾಗ ನಿಂತು ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿದ್ದನು. ಹೀಗೆ ಆತ ಭಾರತದ ಧ್ವಜವನ್ನು ಹರಿದುಹಾಕುತ್ತಿದ್ದರೆ, ನೆರೆದಿದ್ದ ಇತರೆ ಪ್ರತಿಭಟನಾಕಾರರು ಭಾರತದ ವಿರುದ್ಧ ಅತಿಕೆಟ್ಟ ಪದ ಬಳಕೆ ಮಾಡಿ ಘೋಷಣೆ ಕೂಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ ಪ್ರತಿಭಟನೆಗೆ ಬಳಸಿದ್ದ ವಾಹನದಲ್ಲಿದ್ದ ಡಿಸ್‌ಪ್ಲೇನಲ್ಲಿ ವಲಸೆ ಬರುವ ಹಿಂದೂಗಳನ್ನು ತಡೆಯಿರಿ, ಟೆಕ್ಸಾಸ್ ರಕ್ಷಿಸಿ ಎಂದು ಬರೆಯಲಾಗಿತ್ತು. ಅಲ್ಲದೇ ಸ್ಥಳೀಯ ‘ಬಿಳಿ ಜನರ ಬದುಕು ಮುಖ್ಯ’ ಎಂದೂ ಸಹ ಬರೆಯಲಾಗಿತ್ತು. ಇನ್ನು ವಲಸೆ ಬರುತ್ತಿರುವ ಹಿಂದೂ ಹಾಗೂ ಮುಸ್ಲಿಮರನ್ನು ತಡೆದು ಕ್ರಿಶ್ಚಿಯನ್ನರ ಬದುಕನ್ನು ಉಳಿಸಿ ಎಂದು ಘೋಷಣೆ ಹಾಗೂ ಬೋರ್ಡ್‌ಗಳೂ ಸಹ ಕಂಡುಬಂದವು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular