HomeKarnatakaSHOCKING : ಬಳ್ಳಾರಿಯಲ್ಲಿ ದಾರುಣ ಘಟನೆ ; ಪತ್ನಿಯ ಹುಟ್ಟುಹಬ್ಬದಂದೇ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ.!

SHOCKING : ಬಳ್ಳಾರಿಯಲ್ಲಿ ದಾರುಣ ಘಟನೆ ; ಪತ್ನಿಯ ಹುಟ್ಟುಹಬ್ಬದಂದೇ ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ.!

ಬಳ್ಳಾರಿ :   ಪತ್ನಿಯ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಪತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ  ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.ಮೃತರನ್ನು ಆಫ್ರೀನ್ ಬಾನು (ಬಳ್ಳಾರಿಯ ಕೌಲ್ ಬಜಾರ್ ನಿವಾಸಿ) ಎಂದು ಗುರುತಿಸಲಾಗಿದೆ.ಪತಿ ನೂರ್ ಅಹ್ಮದ್ ಕೃತ್ಯ ಎಸಗಿದ ಪಾಪಿ.

ಘಟನೆಯ ಹಿನ್ನೆಲೆ: ಇವರಿಬ್ಬರು ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು, ದಂಪತಿಗೆ ಎಂಟು ತಿಂಗಳ ಗಂಡು ಮಗುವಿದೆ. ಇತ್ತೀಚೆಗೆ ದಂಪತಿಯ ನಡುವೆ ಜಗಳವಾಗಿದ್ದರಿಂದ ಆಫ್ರೀನ್ ಬಾನು ತನ್ನ ತವರು ಮನೆಗೆ ತೆರಳಿದ್ದರು.

ಕೊಲೆ ನಡೆದದ್ದು ಹೇಗೆ?: ಮೇ 21ರಂದು ಆಫ್ರೀನ್ ಬಾನು ಅವರ ಹುಟ್ಟುಹಬ್ಬದ ಹಿನ್ನೆಲೆ, ಪತಿ ನೂರ್ ಅಹ್ಮದ್ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಪತಿಯ ಮಾತನ್ನು ನಂಬಿದ ಆಫ್ರೀನ್, ಅಡುಗೆ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅಂದೇ ಸಂಜೆ ಪಾರ್ಟಿ ಕೊಡಿಸುವ ನೆಪದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋದ ಪತಿ, ವಾಪಸ್ ಮನೆಗೆ ಕರೆತರಲಿಲ್ಲ.ಆಫ್ರೀನ್ ನಾಪತ್ತೆಯಾದಾಗ ಆಕೆಯ ಕುಟುಂಬಸ್ಥರು ಆತಂಕಗೊಂಡು ನೂರ್ ಅಹ್ಮದ್‌ಗೆ ಕರೆ ಮಾಡಿದಾಗ, “ನನಗೇನೂ ಗೊತ್ತಿಲ್ಲ, ನಾವೆಲ್ಲರೂ ಸೇರಿ ಹುಡುಕೋಣ” ಎಂದು ಆತ ನಾಟಕವಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನಿಖೆಯ ವೇಳೆ ಆರೋಪಿ ನೂರ್ ಅಹ್ಮದ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕುಡತಿನಿ ಸಮೀಪದ ನಿರ್ಜನ ಪ್ರದೇಶದಲ್ಲಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಮೃತದೇಹವನ್ನು ತನ್ನ ಬೈಕ್‌ನಲ್ಲಿ ಸಾಗಿಸಿ ಎಸೆದಿದ್ದಾಗಿ ತಿಳಿಸಿದ್ದಾನೆ. ಘಟನೆ ನಡೆದ 13 ದಿನಗಳ ನಂತರ ಮೃತದೇಹ ಪತ್ತೆಯಾಗಿದ್ದು, ಈಗಾಗಲೇ ಕೊಳೆತ ಸ್ಥಿತಿಯಲ್ಲಿದೆ.  ಈ ಸಂಬಂಧ  ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular