HomeLatest Newsಸಾವಿನಲ್ಲೂ ಒಂದಾದ ಒಡಹುಟ್ಟಿದವರು: ತಮ್ಮ ಮೃತಪಟ್ಟ ಸುದ್ದಿ ಕೇಳಿ ಅಕ್ಕನಿಗೆ ಹೃದಯಾಘಾತ

ಸಾವಿನಲ್ಲೂ ಒಂದಾದ ಒಡಹುಟ್ಟಿದವರು: ತಮ್ಮ ಮೃತಪಟ್ಟ ಸುದ್ದಿ ಕೇಳಿ ಅಕ್ಕನಿಗೆ ಹೃದಯಾಘಾತ

ಹೊಸಪೇಟೆ: ಸಾವಿನಲ್ಲಿಯೂ ಅಕ್ಕ, ತಮ್ಮ ಒಂದಾಗಿದ್ದಾರೆ. ತನ್ನ ಸಹೋದರ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಅವರ ಅಕ್ಕ ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಮುಂಡರಗಿ ಬೂದಿಹಾಳದಲ್ಲಿ ನಡೆದಿದೆ.

ಒಡಹುಟ್ಟಿದವರಿಬ್ಬರ ಅಂತ್ಯಕ್ರಿಯೆ ಭಾನುವಾರ ಒಂದೇ ಸ್ಮಶಾನದಲ್ಲಿ ನಡೆದಿದೆ. ಹಿರೇಮಲ್ಲನಕೆರೆ ಲೈನ್ ಮೆನ್ ಎಸ್. ನಿಂಗಪ್ಪ(35) ಶನಿವಾರ ಕರ್ತವ್ಯ ಮುಗಿಸಿ ಬೈಕ್ ನಲ್ಲಿ ವಾಪಸ್ ತೆರಳುವಾಗ ಕಾಗನೂರು ಸಮೀಪ ನಾಯಿ ಅಡ್ಡ ಬಂದಿದೆ. ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಿಂಗಪ್ಪ ಅವರ ಅಕ್ಕ ಮಲ್ಲಮ್ಮ(48) ಹೂವಿನಹಡಗಲಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದು, ಅನಾರೋಗ್ಯದ ಕಾರಣ ರಜೆಯಲ್ಲಿದ್ದರು. ಸಹೋದರ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದ ಮಲ್ಲಮ್ಮ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನಾರೋಗ್ಯದ ಕಾರಣ ಅಕ್ಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ನಿಂಗಪ್ಪ ನಂತರ ಬೂದಿಹಾಳದ ನಿವಾಸಕ್ಕೆ ಕರೆ ತಂದಿದ್ದರು. ಕೆಲಸಕ್ಕೆ ತೆರಳಿದ್ದ ಅವರು ಅಕ್ಕನ ಆರೋಗ್ಯ ವಿಚಾರಿಸಲು ಹೋಗುವಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಒಂದೇ ದಿನ ಅಕ್ಕ, ತಮ್ಮನ ನಿಧನದಿಂದ ಕುಟುಂಬ ಕಂಗಾಲಾಗಿದೆ. ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular