HomeIPL 2026IPL 2026: ಆರ್‌ಸಿಬಿ ಬೌಲಿಂಗ್ ಆರ್ಭಟಕ್ಕೆ ಗುಜರಾತ್ ತತ್ತರ; ಆರ್‌ಸಿಬಿ 2ನೇ ಟ್ರೋಫಿ ಗೆಲ್ಲಲು ಕೇವಲ...

IPL 2026: ಆರ್‌ಸಿಬಿ ಬೌಲಿಂಗ್ ಆರ್ಭಟಕ್ಕೆ ಗುಜರಾತ್ ತತ್ತರ; ಆರ್‌ಸಿಬಿ 2ನೇ ಟ್ರೋಫಿ ಗೆಲ್ಲಲು ಕೇವಲ ಇಷ್ಟೇ ರನ್ ಟಾರ್ಗೆಟ್

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ( ಮೇ 31 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಗುಜರಾತ್ ಟೈಟನ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ 156 ರನ್‌ಗಳ ಸುಲಭ ಗುರಿ ನೀಡಿದೆ. ಈ ಮೂಲಕ ಆರ್‌ಸಿಬಿ 156 ರನ್ ಗಳಿಸಿದರೆ ಎರಡನೇ ಟ್ರೋಫಿಯನ್ನು ಗೆಲ್ಲಲಿದೆ.

ಗುಜರಾತ್ ಟೈಟನ್ಸ್ 26 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡಿತು. ನಾಯಕ ಶುಬ್‌ಮನ್ ಗಿಲ್ 8 ಎಸೆತಗಳಿಗೆ 10 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್ ಎಸೆತದಲ್ಲಿ ರಜತ್ ಪಟಿದಾರ್‌ಗೆ ಕ್ಯಾಚ್ ನೀಡಿ ಔಟ್ ಆದರು. ಬೆನ್ನಲ್ಲೇ ಸಾಯಿ ಸುದರ್ಶನ್ 12 ಎಸೆತಗಳಲ್ಲಿ 12 ರನ್ ಗಳಿಸಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಬೆನ್ನಲ್ಲೇ ನಿಶಾಂತ್ ಸಿಂಧು 20, ಜೋಸ್ ಬಟ್ಲರ್ 19, ಅರ್ಷದ್ ಖಾನ್ 15, ರಾಹುಲ್ ತೆವಾಟಿಯಾ 7, ಜೇಸನ್ ಹೋಲ್ಡರ್ 7, ರಶೀದ್ ಖಾನ್ 7 ಹಾಗೂ ಕಗಿಸೊ ರಬಾಡಾ ಅಜೇಯ 3 ರನ್ ಗಳಿಸಿದರು. ಹೀಗೆ ಒಂದೆಡೆ ಸಾಲು ಸಾಲು ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಜರಾತ್ ಟೈಟನ್ಸ್ ತಂಡವನ್ನು ಕಾಡಿದ ಆರ್‌ಸಿಬಿ ಬೌಲಿಂಗ್ ಪಡೆಯ ಪರ ರಸಿಖ್ ಸಲಾಮ್ ಧರ್ ಮೂರು ವಿಕೆಟ್, ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular