HomeIPL 2026IPL 2026: ಇಂದು ಗುಜರಾತ್‌ನ ಆಟಗಾರ ನಾಟ್‌ಔಟ್, ಅಂದು ಅದೇ ಕ್ಯಾಚ್ ಆದ್ರೆ ಪಟಿದಾರ್ ಔಟ್;...

IPL 2026: ಇಂದು ಗುಜರಾತ್‌ನ ಆಟಗಾರ ನಾಟ್‌ಔಟ್, ಅಂದು ಅದೇ ಕ್ಯಾಚ್ ಆದ್ರೆ ಪಟಿದಾರ್ ಔಟ್; ಆರ್‌ಸಿಬಿಗೆ ಎಷ್ಟು ಮೋಸ ಮಾಡ್ತೀರ ಗುರು?

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ( ಮೇ 31 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿರವ ಗುಜರಾತ್ ಟೈಟನ್ಸ್ 26 ರನ್‌ಗೆ ತನ್ನ ಆರಂಭಿರ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಆರಂಭಿಕ ಆಘಾತ ಅನುಭವಿಸಿದ ಗುಜರಾತ್ ಮತ್ತೆ 55 ರನ್‌ಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ಸಮಯದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು.

ಇನ್ನು ಕೇವಲ 4 ರನ್ ಗಳಿಸಿದ್ದಾಗಲೇ ವಾಷಿಂಗ್ಟನ್ ಸುಂದರ್ ಕ್ಯಾಚ್ ಔಟ್ ಎಂದು ನೀಡಲಾಗಿತ್ತು. ಹತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಡಫಿ ಎಸೆದ ಎಸೆತಕ್ಕೆ ಸುಂದರ್ ದೊಡ್ಡ ಹೊಡೆತ ಬಾರಿಸಲು ಮುಂದಾದಾಗ ಕ್ಯಾಚ್ ನೀಡಿದ್ದರು.

ಜಾರ್ಡನ್ ಕಾಕ್ಸ್ ಕ್ಯಾಚ್ ಪಡೆದು ಸಂಭ್ರಮಿಸಿದ್ದರು. ಆದರೆ ಚೆಂಡು ನೆಲಕ್ಕೆ ತಾಗಿದೆ ಎಂದು ರಿವ್ಯೂ ನೀಡಿ ಇದನ್ನು ನಾಟ್‌ಔಟ್ ಎಂದು ತೀರ್ಮಾನಿಲಾಯಿತು.

ಹೀಗೆ ನಾಟ್‌ಔಟ್ ಎಂದು ನಿರ್ಣಯ ಪ್ರಕಟವಾದ ಬೆನ್ನಲ್ಲೇ ಇದೇ ಗುಜರಾತ್ ವಿರುದ್ಧ ಏಪ್ರಿಲ್ 30ರಂದು ನಡೆದ ಲೀಗ್ ಹಂತದ ಪಂದ್ಯದಲ್ಲಿ ರಜತ್ ಪಟಿದಾರ್ ಇದೇ ರೀತಿ ಕ್ಯಾಚ್ ನೀಡಿದ್ದಾಗ ಅದನ್ನು ಜೇಸನ್ ಹೋಲ್ಡರ್ ಪಡೆದಿದ್ದರು. ಆಗಲೂ ಸಹ ಚೆಂಡು ಇದೇ ಮಟ್ಟದಲ್ಲಿ ನೆಲಕ್ಕೆ ತಾಗಿತ್ತು. ಆದರೆ ಅಂದು ಔಟ್ ನೀಡಿ ಇಂದು ಮಾತ್ರ ನಾಟ್‌ಔಟ್ ನೀಡಲಾಗಿದೆ. ಆರ್‌ಬಿಸಿ ಎಷ್ಟು ಮೋಸ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular