ಬೆಂಗಳೂರು: “ಐಟಿ ಉದ್ಯೋಗ, ಕೈತುಂಬಾ ದೊಡ್ಡ ಸಂಬಳ” ಅಂದರೆ ಯಾರಿಗಾದರೂ ಅಸೂಯೆ ಆಗುವುದು ಸಹಜ. ಆದರೆ, ಇದೇ ಐಟಿ ಕ್ಷೇತ್ರದ ವಿಪರೀತ ಒತ್ತಡ ಹಾಗೂ ಹಗಲು-ರಾತ್ರಿ ಎನ್ನದ ‘ಡೆಡ್‌ಲೈನ್‌ಗಳು ಸದ್ಯ ಹಲವರ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ಐಷಾರಾಮಿ ಕಾರ್ಪೊರೇಟ್ ಜೀವನ ಹಾಗೂ ಎಸಿ ರೂಮಿನ ಕೆಲಸವನ್ನು ಸಂಪೂರ್ಣವಾಗಿ ತ್ಯಜಿಸಿದ ಬೆಂಗಳೂರಿನ ಮಹಿಳೆಯೊಬ್ಬರು, ಸದ್ಯ ಆಟೋ ರಿಕ್ಷಾ ಚಾಲಕಿಯಾಗಿ ಬದಲಾಗುವ ಮೂಲಕ ಇಡೀ ಸಮಾಜದ ಗಮನ ಸೆಳೆಯುತ್ತಿದ್ದಾರೆ ಇವರ ಈ ದಿಟ್ಟ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಣಕ್ಕಿಂತ ಮನಶ್ಶಾಂತಿ ಮುಖ್ಯ ಎಂಬ ಸಂದೇಶ ಸಾರುತ್ತಿದೆ.
https://www.instagram.com/reel/DX9VyA-PVmu/?utm_source=ig_web_copy_link&igsh=NTc4MTIwNjQ2YQ==
ಡೆಡ್‌ಲೈನ್‌ಗಳಿಂದ ಮುಕ್ತಿ, ಬದಲಾದ ಬದುಕಿನಲ್ಲಿ ಸಿಕ್ಕಿತು ಜಬರ್ದಸ್ತ್ ನೆಮ್ಮದಿ
ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ಸತತ ಕೆಲಸದ ಒತ್ತಡ ಮತ್ತು ದೀರ್ಘಾವಧಿಯ ಕೆಲಸದ ಸಮಯದಿಂದ ತೀವ್ರವಾಗಿ ಬಳಲಿದ್ದರು. ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ (Work-Life Balance) ಕಾಯ್ದುಕೊಳ್ಳುವುದು ಅವರಿಗೆ ಅಸಾಧ್ಯವಾಗಿತ್ತು.
ಖಡಕ್ ನಿರ್ಧಾರ: ಈ ಮಾನಸಿಕ ಒತ್ತಡದಿಂದ ಹೊರಬರಲು ನಿರ್ಧರಿಸಿದ ಅವರು, ಯಾರೂ ಊಹಿಸದ ರೀತಿಯಲ್ಲಿ ಆಟೋ ರಿಕ್ಷಾ ಚಾಲನೆಯನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿದರು
ಸ್ವಾತಂತ್ರ್ಯದ ಲೈಫ್: “ನಾನು ಈಗ ಮೊದಲಿನಿಗಿಂತ ಹೆಚ್ಚು ಸಂತೋಷವಾಗಿದ್ದೇನೆ. ನನ್ನದೇ ಆದ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತೇನೆ, ಇದು ನನಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಶಾಂತಿ ನೀಡಿದೆ” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಆಟೋ ಓಡಿಸಿ ತಿಂಗಳಿಗೆ ಬರೋಬ್ಬರಿ 60 ಸಾವಿರ ರೂ. ಆದಾಯ
ಅಚ್ಚರಿಯ ವಿಷಯವೆಂದರೆ, ಈ ಹೊಸ ಕೆಲಸದಲ್ಲಿ ಅವರಿಗೆ ಈಗ ತಿಂಗಳಿಗೆ ಸುಮಾರು 60,000 ರೂಪಾಯಿ ಆದಾಯ ಬರುತ್ತಿದೆ ಕಾರ್ಪೊರೇಟ್ ಬಾಸ್‌ಗಳ ಕಿರಿಕಿರಿ ಇಲ್ಲದೆ, ತಮಗಿಷ್ಟ ಬಂದ ಸಮಯದಲ್ಲಿ ಆಟೋ ಚಲಾಯಿಸಿಕೊಂಡು ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಜಬರ್ದಸ್ತ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ: ನೆಟ್ಟಿಗರ ಕಮೆಂಟ್ ಭಾರಿ ವೈರಲ್
ಈ ಧೀಮಂತ ಮಹಿಳೆಯ ನಿರ್ಧಾರದ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಐಟಿ ಉದ್ಯೋಗಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ:
ಐಟಿ ಉದ್ಯೋಗಿಯ ಅಳಲು: ಬರೋಬ್ಬರಿ 18 ವರ್ಷಗಳಿಂದ ಐಟಿ ಕ್ಷೇತ್ರದಲ್ಲಿರುವ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ಒಂದು ಸಣ್ಣ ಇಮೇಲ್‌ನಲ್ಲಿ ಮುಗಿಯುವ ವಿಷಯಕ್ಕೆ ಗಂಟೆಗಟ್ಟಲೆ ಮೀಟಿಂಗ್ ಮಾಡುವುದು, ಕ್ವಿಕ್ ಕಾಲ್’ ಹೆಸರಲ್ಲಿ ಸಮಯ ವ್ಯರ್ಥ ಮಾಡುವುದು ಮತ್ತು ಮಧ್ಯರಾತ್ರಿಯ ತಾಂತ್ರಿಕ ಸಮಸ್ಯೆಗಳಿಂದ ನಾನು ಕೂಡ ಸುಸ್ತಾಗಿದ್ದೇನೆ. ನಿಮ್ಮ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ತಮಗಾಗುತ್ತಿರುವ ಮಾನಸಿಕ ಹಿಂಸೆಯನ್ನು ತೋಡಿಕೊಂಡಿದ್ದಾರೆ
ಬ್ಯಾಂಕ್ ಬ್ಯಾಲೆನ್ಸ್ ಲೆಕ್ಕಾಚಾರ: ಮತ್ತೊಬ್ಬ ನೆಟ್ಟಿಗ ಕಮೆಂಟ್ ಮಾಡಿ, “ಈಕೆ ಈಗಾಗಲೇ ಒಂಬತ್ತು ವರ್ಷಗಳ ಐಟಿ ಕೆಲಸದ ಮೂಲಕ 50 ಲಕ್ಷದಿಂದ 2 ಕೋಟಿ ರೂಪಾಯಿವರೆಗೆ ಭರ್ಜರಿ ಉಳಿತಾಯ ಮಾಡಿರಬಹುದು, ಅದಕ್ಕಾಗಿಯೇ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಬಂದಿದೆ” ಎಂದು ಊಹಿಸಿದ್ದಾರೆ.
ನೆಮ್ಮದಿಯೇ ಅಂತಿಮ: “ಅಂತಿಮವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಬೇಕಾಗಿರುವುದು ಜೀವನದ ನೆಮ್ಮದಿ. ಅದನ್ನು ಅವರು ಈ ಮೂಲಕ ಕಂಡುಕೊಂಡಿದ್ದಾರೆ” ಎಂದು ಮತ್ತೊಬ್ಬರು ಆಕೆಗೆ ಶುಭ ಹಾರೈಸಿದ್ದಾರೆ.

