HomeLatest News10 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪುರೋಹಿತನ ಬಂಧನ: ಠಾಣೆ ಮುಂದೆ ಹನುಮಾನ್ ಚಾಲೀಸಾ...

10 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪುರೋಹಿತನ ಬಂಧನ: ಠಾಣೆ ಮುಂದೆ ಹನುಮಾನ್ ಚಾಲೀಸಾ ಪಠಿಸಿ ಕಾನೂನೇ ತಪ್ಪೆಂದ ಸವರ್ಣೀಯರು; ವಿಡಿಯೊ

ಹತ್ತು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪುರೋಹಿತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದು, ಇದನ್ನು ಖಂಡಿಸಿ ಮೇಲ್ಜಾತಿಯ ಗುಂಪು ಪುರೋಹಿತನ ಪರ ಪೊಲೀಸ್ ಠಾಣೆ ಮುಂದೆ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ ನಡೆಸಿ ಕಾನೂನನ್ನೇ ತಪ್ಪು ಎಂದಿರುವ ವಿಚಿತ್ರ ಹಾಗೂ ಮಾನವ ಕುಲ ತಲೆ ತಗ್ಗಿಸುವ ಘಟನೆ ಉತ್ತರ ಪ್ರದೇಶದ ಸಹರಣಪುರದಲ್ಲಿ ನಡೆದಿದೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಕಳಕಳಿಯುಳ್ಳ ಹಲವು ಪೇಜ್‌ಗಳು ಘಟನೆ ಕುರಿತ ಸುದ್ದಿಯನ್ನು ಹಂಚಿಕೊಂಡಿವೆ. ಈ ಪೋಸ್ಟ್‌ಗಳ ಪ್ರಕಾರ 45 ವರ್ಷದ ಪುರೋಹಿತ ವಿಜಯ್ ಪಂಡಿತ್ ಎಂಬಾತ ಹತ್ತು ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಸಿಕ್ಕಬಿದ್ದಿದ್ದು, ಆತನನ್ನು ಪೊಲೀಸರ ಪೋಕ್ಸೊ ಪ್ರಕರಣದಡಿ ಬಂಧಿಸಿದ್ದಾರೆ.

ಹೀಗೆ ಪುರೋಹಿತನ ಬಂಧನವಾಗುತ್ತಿದ್ದಂತೆ ಕೋಪಗೊಂಡ ಸವರ್ಣೀಯರ ಗುಂಪು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪುರೋಹಿತರನ್ನು ಬಂಧಿಸುವುದು ಧರ್ಮ ಹಾಗೂ ಸಂಸ್ಕೃತಿಯ ವಿರುದ್ಧದ ನಡೆ, ಇದು ಹಿಂದುತ್ವಕ್ಕೆ ಮಾಡುವ ಅವಮಾನ, ಪುರೋಹಿತರನ್ನು ಬಂಧಿಸುವ ಯಾವುದೇ ಕಾನೂನನ್ನು ಸಹ ಬಹಿಷ್ಕರಿಸಬೇಕು’ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಇದ್ದರೂ ಇಷ್ಟೆಲ್ಲ ದೊಂಬರಾಟ ನಡೆಸುತ್ತಿರುವ ಈ ನೀಚ ಮನಸ್ಥಿತಿಯ ಜನರು ಒಂದುವೇಳೆ ಸಂವಿಧಾನ ಇಲ್ಲದಿದ್ದರೆ ಸಾಮಾನ್ಯ ಜನರ ಬದುಕನ್ನು ಹರಿದು ಮುಕ್ಕಿಬಿಡುತ್ತಿದ್ದರು ಎಂದು ಆಕ್ರೋಶ ಹೊರಾಹಾಕಿದ್ದಾರೆ.

ಇನ್ನು ಬಾಲಕಿ ದೇವಾಲಯದ ಹೊರಗೆ ಆಟವಾಡುತ್ತಿದ್ದ ವೇಳೆ ಆಕೆಯನ್ನು ಕರೆದು ಪುರೋಹಿತ ಅತ್ಯಾಚಾರ ಯತ್ನ ನಡೆಸಿದ್ದು, 45 ವರ್ಷದ ಪುರುಷ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಹೇಗೆ ಸಾಧ್ಯ ಎಂದೂ ಸಹ ಪ್ರತಿಭಟನಾಕಾರರು ಪ್ರಶ್ನೆ ಹಾಕಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular