ರಾಜ್ಯ ರಾಜಕಾರಣದಲ್ಲಿ ಇಂದು ( ಮೇ 28 ) ಮಹತ್ವದ ಬೆಳವಣಿಗೆಗಳು ನಡೆದಿದ್ದು, ಹಲವು ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಕೇಳಿಬರುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವದಂತಿ ಸತ್ಯ ಎನ್ನುವ ಹಂತಕ್ಕೆ ಬಂತು ತಲುಪಿದೆ.
ಹೈಕಮಾಂಡ್ ಸಿದ್ದರಾಮ್ಯಯನವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವಂತೆ ಸೂಚಿಸಿದ್ದು, ಇಂದು ಸಿಎಂ ಮನೆಯಲ್ಲಿ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಈ ವಿಷಯ ಚರ್ಚೆಯಾಗಿದೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಒಗ್ಗಟಿನಿಂದ ಕಾಣಿಸಿಕೊಂಡಿದ್ದು, ಡಿಕೆ ಸಿದ್ದು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಇನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಒಗ್ಗಟ್ಟೇ ನಮ್ಮ ಮಂತ್ರ ಎಂದಿದೆ. ಇನ್ನು ಸಿದ್ದರಾಮಯ್ಯ ಮುಂದಿನ ಸಿಎಂ ಡಿಕೆ ಎಂಬುದನ್ನು ಬ್ರೇಕ್ಫಾಸ್ಟ್ ಮೀಟಿಂಗ್ ವೇಳೆ ತಿಳಿಸಿದ್ದಾರೆ ಎನ್ನಲಾಗಿದ್ದು, ತಾನು ಮನಸ್ಪೂರ್ತಿಯಾಗಿ ಸಿಎಂ ಸ್ಥಾನ ಬಿಟ್ಟುಕೊಡುತ್ತಿದ್ದೇನೆ ಎಂದಿದ್ದಾರೆ ಎನ್ನಲಾಗಿದೆ.
ಈ ಮೂಲಕ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯ ಆಗಮನವಾಗುತ್ತಿದ್ದು, ಇದೇ ವೇಳೆ ಕಾಂಗ್ರೆಸ್ನಲ್ಲಿ ಆಕ್ರೋಶದ ಜತೆಗೆ ಒಗ್ಗಟ್ಟಿನ ಮಂತ್ರವೂ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ವಾಯ್ಸ್ ಆಫ್ ಮಾದಿಗ ( ಮಾದಿಗ ಧ್ವನಿ )’ ಸಿಎಂ ಬದಲಾವಣೆ ಸಿದ್ದರಾಮಯ್ಯನವರ ವಿರುದ್ಧ ನಡೆದ ಪಿತೂರಿ ಎಂಬಂತೆ ಪೋಸ್ಟ್ ಹಾಕಿದ್ದು, ಚರ್ಚೆಗಳಿಗೆ ಹಾದಿ ಮಾಡಿಕೊಟ್ಟಿದೆ.
ಈ ಪೋಸ್ಟ್ನಲ್ಲಿ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಒಟ್ಟಿಗೆ ಕುಳಿತಿರುವ ಫೋಟೊ ಹಂಚಿಕೊಳ್ಳಲಾಗಿದ್ದು, ‘ಸಿಎಂ ಆಪ್ತ ಸಚಿವ ಸಿಎಂ ಆಪ್ತ ಸಚಿವ ಅಂತಾನೆ ಸಿದ್ದರಾಮಯ್ಯಗೆ ಹಾಫ್ ಇಟ್ಟು ಬಿಟ್ರಲ್ಲಪ್ಪ’ ಎಂದು ಆಕ್ರೋಶ ಹೊರಹಾಕಲಾಗಿದೆ. ಅಲ್ಲದೇ ಸಿದ್ದರಾಮಯ್ಯಗೆ ದ್ರೋಹ ಬಗೆದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹಿಸಿ, ಆ ಪಟ್ಟಿಯನ್ನು ಡಿಕೆ ಕೈಗೆ ಕೊಟ್ಟಿದ್ದೇ ಇವರು’ ಎಂದು ಬರೆಯಲಾಗಿದೆ. ಈ ಮೂಲಕ ಜಾರಕಿಹೊಳಿ ಸಿದ್ದರಾಮಯ್ಯ ಆಪ್ತ ಎಂದುಕೊಂಡೇ ಬೆನ್ನಿಗೆ ಚೂರಿ ಹಾಕಿಬಿಟ್ರು ಎಂದು ಗಂಭೀ ಆರೋಪ ಮಾಡಲಾಗಿದ್ದು, ಕೆಲವರು ಇದನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಇದನ್ನು ಸುಳ್ಳು ಸುದ್ದಿ ಎಂದು ವಾದಿಸಿದ್ದಾರೆ.

