HomeIndiaಕೇರಳದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ 78 ಗ್ರಾಂ ಚಿನ್ನದ ಆಭರಣಗಳು ವಜ್ರಖಚಿತ ‘ವೈರಮ್ ನಾಮ’...

ಕೇರಳದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ 78 ಗ್ರಾಂ ಚಿನ್ನದ ಆಭರಣಗಳು ವಜ್ರಖಚಿತ ‘ವೈರಮ್ ನಾಮ’ ನಾಪತ್ತೆ

ತಿರುವನಂತಪುರಂ: ದೇಶದ ಅತ್ಯಂತ ಪುರಾತನ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಕೇರಳಂನ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಭಾರಿ ಭದ್ರತಾ ಲೋಪವಾಗಿದೆ. ದೇವಸ್ಥಾನದ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಅನಂತ ಪದ್ಮನಾಭಸ್ವಾಮಿ ದೇಸ್ವಸ್ಥಾನದ ಚಿನ್ನಾಭರಣ ಹಾಗೂ ವಜ್ರ ಕಾಣೆಯಾಗಿರುವುದು ಶತಮಾನಗಳಷ್ಟು ಹಳೆಯದಾದ ದೇವಾಲಯದ ಅಪಾರ ಸಂಪತ್ತಿನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇರಳಂ ಪೊಲೀಸ್ ಮಹಾನಿರ್ದೇಶಕರು ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ರಹಸ್ಯ ವರದಿಯ ಪ್ರಕಾರ, ದೇವಾಲಯದ ಒಟ್ಟು ದಾಸ್ತಾನು ಪರಿಶೀಲಿಸಿದಾಗ ಸುಮಾರು 78 ಗ್ರಾಂ ಚಿನ್ನದ ಆಭರಣಗಳು ಮತ್ತು ಅತ್ಯಂತ ಬೆಲೆಬಾಳುವ ‘ವೈರಮ್ ನಾಮ’ ಎಂದು ಕರೆಯಲ್ಪಡುವ ವಜ್ರಖಚಿತ ತುಂಡು ನಾಪತ್ತೆಯಾಗಿರುವುದು ತಿಳಿದುಬಂದಿದೆ.

ದೇವಾಲಯದ ಆಡಳಿತ ಮಂಡಳಿಯ ದಾಖಲೆಗಳ ಪ್ರಕಾರ, ಈ ‘ವೈರಮ್ ನಾಮ’ವನ್ನು ದುರಸ್ತಿ ಕಾರ್ಯಕ್ಕಾಗಿ ಹಲವು ತಿಂಗಳ ಹಿಂದೆಯೇ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಅದನ್ನು ಮರಳಿ ತರಲಾಗಿಲ್ಲ. ಅದೇ ರೀತಿ, ಸುಮಾರು 6 ತಿಂಗಳ ಹಿಂದೆ ನಿರ್ವಹಣೆಗಾಗಿ ಕಳುಹಿಸಲಾಗಿದ್ದ ಚಿನ್ನದ ದೀಪವೂ ಸಹ ನಿಗೂಢವಾಗಿ ಕಣ್ಮರೆಯಾಗಿದೆ.

ದೇವಾಲಯದ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಡಿಜಿಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದ್ದಾರೆ. ದೇವಾಲಯದ ಎಲ್ಲಾ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಅತ್ಯಂತ ಸುರಕ್ಷಿತ ಕಪಾಟುಗಳಿಗೆ ಸ್ಥಳಾಂತರಿಸಬೇಕು. ಭಕ್ತರು ನೀಡುವ ಕಾಣಿಕೆಗಳನ್ನು ಕಡ್ಡಾಯವಾಗಿ ಮೀಸಲಾದ ಲಾಕರ್‌ಗಳಲ್ಲಿಯೇ ಸಂಗ್ರಹಿಸಬೇಕು. ದೇವಾಲಯದ ಪ್ರತಿಯೊಂದು ಪ್ರವೇಶ ದ್ವಾರದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಮತ್ತು ಸರಿಯಾದ ತಪಾಸಣೆ ಇಲ್ಲದೆ ಯಾರನ್ನೂ ಒಳಗಡೆ ಬಿಡಬಾರದು ಎಂದು ಸೂಚಿಸಿದ್ದಾರೆ.

ಶ್ರೀ ಪದ್ಮನಾಭಸ್ವಾಮಿ ದೇವಾಲಯ ಕೇರಳಂನ ತಿರುವನಂತಪುರಂನಲ್ಲಿದ್ದು, ಈ ದೇವಾಲಯವು ಮಹಾವಿಷ್ಣುವಿಗೆ ಅರ್ಪಿತವಾಗಿದೆ. ಸಂಗಮ ಕಾಲದ ಇತಿಹಾಸ ಮತ್ತು ಸಾಹಿತ್ಯದಲ್ಲೂ ಈ ದೇವಾಲಯದ ಅಪಾರ ಸಂಪತ್ತನ್ನು ಉಲ್ಲೇಖಿಸಿ, ಇದನ್ನು ಗೋಲ್ಡನ್ ಟೆಂಪಲ್ ಎಂದು ಕರೆಯಲಾಗಿದೆ. ದೇವಸ್ಥಾನದಲ್ಲಿ ನಡೆದಿರುವ ಈ ಭದ್ರತಾ ಲೋಪದ ಬಗ್ಗೆ ಈಗ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular