HomeRecipiesಚಿಕನ್ ಪ್ರಿಯರಿಗಾಗಿ ಸ್ಪೆಷಲ್ ಸ್ನಾಕ್ಸ್: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ತಂದೂರಿ ಚಿಕನ್ ಸ್ಟ್ರಿಪ್ಸ್

ಚಿಕನ್ ಪ್ರಿಯರಿಗಾಗಿ ಸ್ಪೆಷಲ್ ಸ್ನಾಕ್ಸ್: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ತಂದೂರಿ ಚಿಕನ್ ಸ್ಟ್ರಿಪ್ಸ್

ಚಿಕನ್ ಪ್ರಿಯರಿಗೆ ಹೊಸ ಹೊಸ ಬಗೆಯ ಸ್ಟಾರ್ಟರ್ ಹಾಗೂ ಸ್ನ್ಯಾಕ್ಸ್ ತಿನ್ನುವುದೆಂದರೆ ಸದಾ ಇಷ್ಟ. ಅದರಲ್ಲೂ ರೆಸ್ಟೋರೆಂಟ್ ಶೈಲಿಯ ತಂದೂರಿ ಖಾದ್ಯಗಳಿಗೆ ಮಾರುಹೋಗದವರೇ ಇಲ್ಲ. ಸಂಜೆ ವೇಳೆ ಚಹಾದ ಜೊತೆ ಸವಿಯಲು ಅಥವಾ ಮನೆಗೆ ನೆಂಟರು ಬಂದಾಗ ತಕ್ಷಣಕ್ಕೆ ತಯಾರಿಸಲು ‘ತಂದೂರಿ ಚಿಕನ್ ಸ್ಟ್ರಿಪ್ಸ್’ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇವಲ ಕೆಲವೇ ನಿಮಿಷಗಳಲ್ಲಿ ತಯಾರಾಗುವ ಸಖತ್ ರುಚಿಕರವಾದ ತಿಂಡಿಯಾಗಿದೆ. ಹಬ್ಬ ಹರಿದಿನಗಳು ಅಥವಾ ಪಾರ್ಟಿಗಳಿಗೂ ಇದು ಹೇಳಿಮಾಡಿಸಿದ ರೆಸಿಪಿ. ಇದನ್ನು ಮಾಡುವುದು ಹೇಗೆ ಮತ್ತು ಇದಕ್ಕೆ ಬೇಕಾಗುವ ಸಾಮಗ್ರಿಗಳು ಇಲ್ಲಿವೆ.

ಬೇಕಾಗುವ ಸಾಮಗ್ರಿಗಳು: ೩೫೦ ಗ್ರಾಂ ಮೂಳೆ ಇಲ್ಲದ ಚಿಕನ್ (ಉದ್ದವಾಗಿ ಕತ್ತರಿಸಿದ್ದು), ಅರ್ಧ ಕಪ್ ಗಟ್ಟಿ ಮೊಸರು, ೧ ಚಮಚ ತಂದೂರಿ ಮಸಾಲಾ, ೧ ಚಮಚ ಎಣ್ಣೆ, ೧ ಚಮಚ ನಿಂಬೆ ರಸ, ೨ ಎಸಳು ಜಜ್ಜಿದ ಬೆಳ್ಳುಳ್ಳಿ, ಅರ್ಧ ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಲಂಕರಿಸಲು ಸ್ವಲ್ಪ ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು, ಜಜ್ಜಿದ ಬೆಳ್ಳುಳ್ಳಿ, ಶುಂಠಿ, ನಿಂಬೆ ರಸ, ತಂದೂರಿ ಮಸಾಲಾ, ಎಣ್ಣೆ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಕತ್ತರಿಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಈ ಮಸಾಲೆಗೆ ಸೇರಿಸಿ, ಮಸಾಲೆ ಎಲ್ಲಾ ಕಡೆ ಚೆನ್ನಾಗಿ ಹತ್ತುವಂತೆ ಕಲಸಿ. ಈ ಪಾತ್ರೆಯನ್ನು ಮುಚ್ಚಿ ಸುಮಾರು ಒಂದು ಗಂಟೆಯ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಆ ಬಳಿಕ ಓವನ್ ಅನ್ನು ೨೦೦ ಡಿಗ್ರಿ ಸೆಲ್ಸಿಯಸ್‌ಗೆ ಪ್ರೀಹೀಟ್ ಮಾಡಿಕೊಳ್ಳಿ. ಬೇಕಿಂಗ್ ಶೀಟ್ ಮೇಲೆ ಪಾರ್ಚ್‌ಮೆಂಟ್ ಪೇಪರ್ ಹಾಸಿ, ಮಸಾಲೆಯಲ್ಲಿ ನೆನೆಸಿಟ್ಟ ಚಿಕನ್ ತುಂಡುಗಳನ್ನು ಒಂದಕ್ಕೊಂದು ಅಂಟದಂತೆ ಜೋಡಿಸಿ ಬೇಕ್ ಮಾಡಿ. ಚಿಕನ್ ಚೆನ್ನಾಗಿ ಬೆಂದ ನಂತರ ಓವನ್‌ನಿಂದ ಹೊರತೆಗೆದು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ಕೊನೆಯದಾಗಿ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ತಂದೂರಿ ಚಿಕನ್ ಸ್ಟ್ರಿಪ್ಸ್ ಸವಿಯಲು ಸಿದ್ಧ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular