HomeKarnatakaBIG NEWS : ಇಡೀ ಕಾಂಗ್ರೆಸ್ ಸರ್ಕಾರವೇ ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಶರಣಾಗಿದೆ ;...

BIG NEWS : ಇಡೀ ಕಾಂಗ್ರೆಸ್ ಸರ್ಕಾರವೇ ದೆಹಲಿ ಹೈಕಮಾಂಡ್ ಮುಂದೆ ಮಂಡಿಯೂರಿ ಶರಣಾಗಿದೆ ; ಬಿಜೆಪಿ ವಾಗ್ಧಾಳಿ

ಬೆಂಗಳೂರು :   ಇಡೀ ಕಾಂಗ್ರೆಸ್ ಸರ್ಕಾರವೇ ದೆಹಲಿ ಹೈಕಮಾಂಡ್‌ ಮುಂದೆ ಮಂಡಿಯೂರಿ ಶರಣಾಗಿದೆ ಎಂದು  ಬಿಜೆಪಿ ವಾಗ್ಧಾಳಿ ನಡೆಸಿದೆ.ಕರ್ನಾಟಕ ಕಾಂಗ್ರೆಸ್ ಸರ್ಕಾರ ದೆಹಲಿ ಹೈಕಮಾಂಡ್ ಮುಂದೆ ಶರಣಾಗಿದೆಯೇ? ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ತೀವ್ರ ವಾಗ್ಧಾಳಿ ನಡೆಸಿದೆ. ನಾಯಕರ ಕುರ್ಚಿ ಕಾಳಗದಿಂದಾಗಿ ರಾಜ್ಯದ ಅಭಿವೃದ್ಧಿ ಮರೆತ ಸರ್ಕಾರವನ್ನು ವಿಸರ್ಜಿಸಿ ಎಂದು ಬಿಜೆಪಿ ಆಗ್ರಹಿಸಿದೆ.

ರಾಜ್ಯದಲ್ಲಿ ‘ಕುರ್ಚಿ ಕಾಳಗ’ ತಾರಕಕ್ಕೇರಿದ್ದು, ಕಾಂಗ್ರೆಸ್ ಸರ್ಕಾರ ದೆಹಲಿ ಬಾಗಿಲಲ್ಲಿ ಮಂಡಿಯೂರಿ ಕುಳಿತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳುವ ಮತ್ತು ಅಧಿಕಾರ ಪಡೆಯುವ ಹಪಾಹಪಿಯಲ್ಲಿ ರಾಜ್ಯದ ಜನತೆ ಅನಾಥರಾಗಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಬಿಜೆಪಿ ಇಡೀ @INCKarnataka ಸರ್ಕಾರವೇ ದೆಹಲಿ ಹೈಕಮಾಂಡ್‌ ಮುಂದೆ ಮಂಡಿಯೂರಿ ಶರಣಾಗಿದೆ! ರಾಜ್ಯದ ಅಭಿವೃದ್ಧಿಯನ್ನು ಗಾಳಿಗೆ ತೂರಿ, ನಾಯಕರ ‘ಕುರ್ಚಿ ಕಾಳಗ ತಾರಕಕ್ಕೇರಿದೆ.: ಡಿ.ಕೆ. ಶಿವಕುಮಾರ್: “ನನ್ನ ಕೂಲಿ ಕೊಡಿ” ಎಂದು ಗೋಗರೆಯುತ್ತಿದ್ದಾರೆ.: ಸಿದ್ದರಾಮಯ್ಯ: “ನನ್ನ ಕುರ್ಚಿ ಉಳಿಸಿಕೊಡಿ” ಎಂದು ಅಂಗಲಾಚುತ್ತಿದ್ದಾರೆ.: ಸತೀಶ್ ಜಾರಕಿಹೊಳಿ: ಕೆಪಿಸಿಸಿ ಅಧ್ಯಕ್ಷಗಿರಿಗೆ ಪಟ್ಟು ಹಿಡಿದು ಕುಳಿತಿದ್ದಾರೆ.: “ಪರಮೇಶ್ವರ್  &ಮಹದೇವಪ್ಪ ನಮಗೂ ಒಂದು ಚಾನ್ಸ್ ಕೊಡಿ” ಎಂದು ದೆಹಲಿ ಬಾಗಿಲು ತಟ್ಟುತ್ತಿದ್ದಾರೆ. ನಾಯಕರ ಈ ಅಧಿಕಾರದ ಹಪಾಹಪಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸರ್ಕಾರ ಅಸ್ಥಿರಗೊಂಡು, ಕರುನಾಡಿನ ಜನತೆ ಅನಾಥರಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ ಎಂದು ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದು ಟ್ವೀಟ್ ಮಾಡಿದ ಬಿಜೆಪಿ  ‘ಮಾನ್ಯ ಜಾರಕಿಹೊಳಿಯವರೇ, ಸರ್ಕಾರವು ಪತನವಾಗುವ ಹಂತ ತಲುಪಿದೆಯೇ? ರಾಜ್ಯದ ಜನತೆ ನಿಮ್ಮ ಸರ್ಕಾರದ ವಿಸರ್ಜನೆಗೆ ಕಾಯುತ್ತಿದ್ದಾರೆ. ಸಿಎಂ ಮತ್ತು ಸಚಿವ ಸಂಪುಟದ ಮಂತ್ರಿಗಳಿಗಾಗಿ ರಾಜ್ಯದ ಜನತೆ ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್‌ ಗೇಟು ಕಾಯುವ ಬದಲು ರಾಜ್ಯದಲ್ಲಿ ಸರಿಯಾಗಿ ಆಡಳಿತ ನಡೆಸಲಿ. ಇಲ್ಲದಿದ್ದರೆ ಸರ್ಕಾರವನ್ನೇ ವಿಸರ್ಜಿಸಲಿ’ ಎಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular