HomeUncategorized'ಬ್ಯಾಂಕ್‌ ನೌಕರ'ನೇ ಮಾಸ್ಟರ್ ಮೈಂಡ್ ; ₹8.70 ಕೋಟಿ ಕಳ್ಳತನ ಮಾಡಿ ರಾಜಾರೋಷವಾಗಿ ಕೆಲಸಕ್ಕೆ ಹೋಗುತ್ತಿದ್ದ...

‘ಬ್ಯಾಂಕ್‌ ನೌಕರ’ನೇ ಮಾಸ್ಟರ್ ಮೈಂಡ್ ; ₹8.70 ಕೋಟಿ ಕಳ್ಳತನ ಮಾಡಿ ರಾಜಾರೋಷವಾಗಿ ಕೆಲಸಕ್ಕೆ ಹೋಗುತ್ತಿದ್ದ ಕಳ್ಳ.!

ಅಹಮದಾಬಾದ್: ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಯೇ ದರೋಡೆಕೋರನಾಗಿ ಪರಿವರ್ತನೆಯಾದ ವಿಲಕ್ಷಣ ಹಾಗೂ ರೋಚಕ ಘಟನೆಯೊಂದು ಅಹಮದಾಬಾದಿನ ಗಾಂಧಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ. ಆರ್‌ಬಿಐ ಕರೆನ್ಸಿ ಚೆಸ್ಟ್‌ನಿಂದ ಬರೋಬ್ಬರಿ ₹8.70 ಕೋಟಿ ಹಣವನ್ನು ಕದ್ದು, ತಾನು ಸಿಕ್ಕಿಬೀಳುವುದಿಲ್ಲ ಎಂದು ಬೀಗುತ್ತಿದ್ದ ಜಾಯಿಂಟ್ ಕಸ್ಟೋಡಿಯನ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

15 ವರ್ಷಗಳ ನೌಕರನೇ ಸೂತ್ರಧಾರಿ: ಪ್ರಕರಣದ ಮುಖ್ಯ ಆರೋಪಿಯನ್ನು ಕಳೆದ 15 ವರ್ಷಗಳಿಂದ ಇದೇ ಬ್ಯಾಂಕ್‌ನಲ್ಲಿ ಅತ್ಯಂತ ಜವಾಬ್ದಾರಿಯುತ ಜಾಯಿಂಟ್ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಸಿದ್ಧ್ ಕಡಿಯಾರ್ ಎಂದು ಗುರುತಿಸಲಾಗಿದೆ. ಐಷಾರಾಮಿ ಜೀವನ ನಡೆಸುವ ದುರಾಸೆಗೆ ಬಿದ್ದ ಈತ, ಬ್ಯಾಂಕ್‌ನ ಭದ್ರತಾ ವ್ಯವಸ್ಥೆಯನ್ನೇ ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದನು.

ದರೋಡೆ ನಡೆದಿದ್ದು ಹೇಗೆ? 2026ರ ಜನವರಿ 13ರ ರಾತ್ರಿ, ಕಡಿಯಾರ್ ಚಾಣಾಕ್ಷತನದಿಂದ ಕರೆನ್ಸಿ ಚೆಸ್ಟ್‌ನಲ್ಲಿದ್ದ ₹8.70 ಕೋಟಿ ನಗದನ್ನು ದೊಡ್ಡ ಬಾಕ್ಸ್‌ವೊಂದರಲ್ಲಿ ತುಂಬಿದನು. ಯಾರಿಗೂ ಸಂಶಯ ಬಾರದಂತೆ ಆ ಬಾಕ್ಸ್‌ ಅನ್ನು ಲಗೇಜ್ ವಾಹನವೊಂದರಲ್ಲಿ ಲೋಡ್ ಮಾಡಿಸಿ, ಬಿಗಿ ಭದ್ರತೆಯ ನಡುವೆಯೂ ಬ್ಯಾಂಕ್‌ನಿಂದ ರಾಜಾರೋಷವಾಗಿ ಹೊರಬಂದಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಕ್ಕಿಬಿದ್ದಿದ್ದು ಹೇಗೆ? ಸಾಮಾನ್ಯವಾಗಿ ಬ್ಯಾಂಕ್ ಸಿಸಿಟಿವಿ ದೃಶ್ಯಾವಳಿಗಳು 90 ದಿನಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸ ಆರೋಪಿಯದಾಗಿತ್ತು. ದರೋಡೆಯ ನಂತರವೂ ಆತ ಯಾವುದೇ ಭಯವಿಲ್ಲದೆ ಎಂದಿನಂತೆ ಬ್ಯಾಂಕ್ ಕೆಲಸಕ್ಕೆ ಹಾಜರಾಗುತ್ತಿದ್ದನು. ಆದರೆ, ಬ್ಯಾಂಕ್ ಆಡಿಟಿಂಗ್ ವೇಳೆ ನಗದು ವ್ಯತ್ಯಾಸ ಕಂಡುಬರುತ್ತಿದ್ದಂತೆ ಆಂತರಿಕ ತನಿಖೆ ಆರಂಭವಾಯಿತು. ತಾಂತ್ರಿಕ ತಜ್ಞರ ನೆರವಿನಿಂದ ಪೊಲೀಸರು ಡಿಲೀಟ್ ಆಗಿದ್ದ ಹಳೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಯಶಸ್ವಿಯಾಗಿ ರಿಕವರಿ ಮಾಡಿದರು. ಸಿಸಿಟಿವಿಯಲ್ಲಿ ಕಡಿಯಾರ್ ಹಣದ ಬಾಕ್ಸ್‌ನ್ನು ಹೊತ್ತೊಯ್ಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದ್ದು, ಇದೇ ಆತನಿಗೆ ಮುಳುವಾಯಿತು.

ತನಿಖೆ ಮುಂದುವರಿಕೆ: ಸದ್ಯ ಆರೋಪಿ ಹರಸಿದ್ಧ್ ಕಡಿಯಾರ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ದರೋಡೆಯಲ್ಲಿ ಬ್ಯಾಂಕ್‌ನ ಇತರ ಸಿಬ್ಬಂದಿ ಅಥವಾ ಹೊರಗಿನವರು ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಕದ್ದ ಹಣವನ್ನು ಎಲ್ಲಿ ಬಚ್ಚಿಡಲಾಗಿದೆ ಎಂಬ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬ್ಯಾಂಕಿನ ನಂಬಿಕಸ್ಥ ಉದ್ಯೋಗಿಯೇ ಇಂತಹ ದೊಡ್ಡ ದರೋಡೆ ನಡೆಸಿರುವುದು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular