HomeIPL 2026IPL 2026: ಇಂದು ಅವರು ಗೆದ್ದರೆ ಸಾಕು ನಾವು ಸೇಫ್; ತನ್ನ ಪಂಜಾಬ್ ತಂಡ ಪ್ಲೇಆಫ್...

IPL 2026: ಇಂದು ಅವರು ಗೆದ್ದರೆ ಸಾಕು ನಾವು ಸೇಫ್; ತನ್ನ ಪಂಜಾಬ್ ತಂಡ ಪ್ಲೇಆಫ್ ತಲುಪಲು ಆ ತಂಡದ ಬೆಂಬಲಕ್ಕೆ ನಿಂತ ಶ್ರೇಯಸ್ ಐಯ್ಯರ್!

ನಿನ್ನೆ ( ಮೇ 23 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಸತತ ಆರು ಸೋಲುಗಳ ಬಳಿಕ ಜಯ ಕಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ ಜೋಶ್ ಇಂಗ್ಲಿಸ್ ಅರ್ಧಶತಕ ಹಾಗೂ ಆಯುಷ್ ಬದೋನಿ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರಾನ್ ಅರ್ಧಶತಕ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು.

ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿನ ಎನ್ನ ಎಲ್ಲ ಲೀಗ್ ಹಂತದ ಪಂದ್ಯಗಳನ್ನೂ ಆಡಿ ಮುಗಿಸಿದ್ದು, 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ 15 ಅಂಕ ಹೊಂದಿರುವ ಪಂಜಾಬ್, 14 ಅಂಕ ಹೊಂದಿ ಇನ್ನೂ ಒಂದು ಪಂದ್ಯ ಆಡಬೇಕಿರುವ ರಾಜಸ್ಥಾನ್ ಹಾಗೂ 13 ಅಂಕಗಳೊಂದಿಗೆ ಇನ್ನೂ ಒಂದು ಪಂದ್ಯ ಆಡಬೇಕಿರುವ ಕೊಲ್ಕತ್ತಾ ಪ್ಲೇಆಫ್ ಹಂತಕ್ಕೇರುವ ಯೋಜನೆಯಲ್ಲಿವೆ.

ಬೆಂಗಳೂರು, ಗುಜರಾತ್ ಹಾಗೂ ಹೈದರಾಬಾದ್ ಈಗಾಗಲೇ ಪ್ಲೇಆಫ್ ತಲುಪಿರುವ ಕಾರಣ ಇನ್ನೊಂದು ಸ್ಥಾನ ಮಾತ್ರ ಬಾಕಿ ಇದ್ದು, ಪಂಜಾಬ್ ಕಿಂಗ್ಸ್ ಎಲ್ಲ ಭಾರವನ್ನೂ ಸದ್ಯ ಮುಂಬೈ ಇಂಡಿಯನ್ಸ್ ಮೇಲೆ ಹಾಕಿದೆ.

ಹೌದು, ಇಂದು ( ಮೇ 24 ) ಮಧ್ಯಾಹ್ನ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ರಾಜಸ್ಥಾನ್ ರಾಯಲ್ಸ್ 14 ಅಂಕಗಳೊಂದಿಗೆ ಎಲಿಮಿನೇಟ್ ಆಗಲಿದೆ. ಹಾಗೂ ಸಂಜೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಕೆಆರ್ ಸೋತರೆ ಪಂಜಾಬ್ ನೇರವಾಗಿ ಪ್ಲೇಆಫ್ ತಲುಪಲಿದೆ.

ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಕ್ವಾಲಿಫೈ ಆಗಲು ಪ್ರಮುಖವಾಗಿ ರಾಜಸ್ಥಾನ್ ರಾಯಲ್ಸ್ ಸೋಲಬೇಕಿದ್ದು, ಮುಂಬೈ ಇಂಡಿಯನ್ಸ್ ಬೆಂಬಲಕ್ಕೆ ನಿಂತಿದೆ. ನಿನ್ನೆಯ ಪಂದ್ಯ ಮುಗಿದ ಬಳಿಕ ಈ ಕುರಿತು ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ‘ಸದ್ಯ ನಾನು ಭಾವಪರವಶನಾಗಿದ್ದೇನೆ. ಇದು ಈ ಬಾರಿಯ ಟೂರ್ನಿಯಲ್ಲಿ ನನ್ನ ಮೊದಲ ಶತಕವಾಗಿದ್ದು, ಅದು ಸರಿಯಾದ ಸಮಯದಲ್ಲಿ ಬಂದಿದೆ. ನಾವು ಸತತ ಆರು ಸೋಲುಗಳ ಬಳಿಕ ಗೆಲುವನ್ನು ಕಂಡಿದ್ದು, ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲ್ಲಲಿ ಎಂದು ಬೆಂಬಲ ನೀಡುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular