ಮೊನ್ನೆ ( ಮೇ 22 ) ನಡೆದ ಐಪಿಎಲ್ನ 67ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 55 ರನ್ಗಳಿಂದ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 200 ರನ್ಗಳನ್ನು ಮಾತ್ರ ಗಳಿಸಿತು. ಹೀಗೆ ಪಂದ್ಯವನ್ನೂ ಸೋತರೂ ಸಹ ಟಾಪ್ 2 ಸ್ಥಾನದಲ್ಲಿ ಉಳಿಸಿಕೊಳ್ಳಲು 166 ರನ್ ಬಾರಿಸಬೇಕಿದ್ದ ಆರ್ಸಿಬಿ 200 ರನ್ ಬಾರಿಸಿದ ಕಾರಣ ಉತ್ತಮ ನೆಟ್ ರನ್ರೇಟ್ನೊಂದಿಗೆ ಅಗ್ರಸ್ಥಾನವನ್ನು ಉಳಿಸಿಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದು ಕ್ವಾಲಿಫಯರ್ ಒಂದನ್ನು ಆಡಲು ಅರ್ಹತೆ ಪಡೆದುಕೊಂಡಿತು. ಜತೆಗೆ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಸಹ ಎರಡನೇ ಸ್ಥಾನ ಪಡೆದು ಆರ್ಸಿಬಿ ಜತೆ ಕ್ವಾಲಿಫಯರ್ ಒಂದು ಆಡುವ ಅವಕಾಶ ಪಡೆದರೆ, ಮೂರನೇ ಸ್ಥಾನ ಪಡೆದ ಸನ್ ರೈಸರ್ಸ್ ಹೈದರಾಬಾದ್ ಎಲಿಮಿನೇಟರ್ ಆಡಲು ಸಜ್ಜಾಗಿದೆ.
ಹೀಗೆ ಕ್ವಾಲಿಫಯರ್ ಪಂದ್ಯಗಳನ್ನು ನಿರ್ಧರಿಸಲಿದ್ದ ಈ ಪಂದ್ಯದ ಫಲಿತಾಂಶಕ್ಕಾಗಿ ಇಡೀ ಐಪಿಎಲ್ ಅಭಿಮಾನಿ ಬಳಗ ಕಾದು ಕುಳಿತಿತ್ತು. ಪಂದ್ಯದಲ್ಲಿ ಸನ್ ರೈಸರ್ಸ್ ಪ್ರದರ್ಶನ ಆರ್ಸಿಬಿಯನ್ನು ಮೀರಿಸಿದರೂ ರನ್ ರೇಟ್ ಚೆನ್ನಾಗಿ ಬಂದ ಕಾರಣ ಕ್ವಾಲಿಫಯರ್ ಪ್ರವೇಶಿಸಿತು.
ಇನ್ನು ಪಂದ್ಯದ ವೇಳೆ ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಅನಗತ್ಯವಾಗಿ ಸನ್ ರೈಸರ್ಸ್ನ ಟ್ರಾವಿಸ್ ಹೆಡ್ ಕೆಣಕಿದರು. ಪ್ಯಾಟ್ ಕಮಿನ್ಸ್ ಓವರ್ನಲ್ಲಿ ಕೊಹ್ಲಿ ಸತತ ಬೌಂಡರಿ ಬಾರಿಸಿದಾಗ ಸಲಹೆ ಕೊಟ್ಟ ಹೆಡ್ಗೆ ಕೊಹ್ಲಿ ‘ನೀನೇ ಬಂದು ಬೌಲಿಂಗ್ ಮಾಡು’ ಎಂದು ಕಾಲೆಳೆದರು. ಇದಕ್ಕೆ ಉತ್ತರಿಸಿದ ಹೆಡ್ ‘ನಾನು ಬರುವ ತನಕ ನೀನು ಔಟ್ ಆಗದೇ ಇರಬೇಕಲ್ಲ’ ಎಂದು ಕೌಂಟರ್ ಕೊಟ್ಟು ತೆರಳಿದರು. ಅಲ್ಲದೇ ಒಂದು ಓವರ್ ಬೌಲಿಂಗ್ ಮಾಡಿ ರಜತ್ ಪಟಿದಾರ್ ವಿಕೆಟ್ ಸಹ ಪಡೆದರು.
ಇಷ್ಟೆಲ್ಲ ನಡೆದ ಕಾರಣ ಸುಮ್ಮನಾಗದ ಕೊಹ್ಲಿ ಕೋಪವನ್ನು ಪಂದ್ಯ ಮುಗಿದ ಬಳಿಕವೂ ಮುಂದುವರಿಸಿದರು. ಪಂದ್ಯದ ಬಳಿಕ ಎಲ್ಲರಿಗೂ ಥ್ಯಾಂಕ್ಸ್ ಕೊಟ್ಟ ಕೊಹ್ಲಿ ಬೇಕಂತಲೇ ಟ್ರಾವಿಸ್ ಹೆಡ್ ಕೈ ಕುಲುಕಲು ಬಂದರೂ ಸಹ ಕೈಕುಲುಕದೇ ನಿರಾಕರಿಸಿ ಸಣ್ಣತನ ಮೆರೆದರು. ಕೊಹ್ಲಿಯ ಈ ನಡೆಗೆ ಸ್ವತಃ ಅವರ ಹಲವು ಅಭಿಮಾನಿಗಳೇ ಬೇಸರ ಹಾಗೂ ಕೋಪ ವ್ಯಕ್ತಪಡಿಸಿದರು. ಕ್ರಿಕೆಟಿಗನಿಗೆ ಕ್ರೀಡಾಸ್ಪೂರ್ತಿ ಮುಖ್ಯ ಎಂದರು.
ಹೀಗೆ ಹೆಡ್ ಕುರಿತಾಗಿ ಕೊಹ್ಲಿ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇತರೆ ಕ್ರಿಕೆಟಿಗರ ಜತೆ ಸಹ ಕೊಹ್ಲಿ ಹೀಗೆ ನಡೆದುಕೊಂಡ ಹಲವಾರು ಉದಾಹರಣೆಗಳನ್ನು ನೆಟ್ಟಿಗರು ನೀಡಿದರು. ತಾನು ಮಾತ್ರ ಯಾವ ಆಟಗಾರನನ್ನು ಬೇಕಾದರೂ ಟ್ರೋಲ್ ಮಾಡಬಹುದು, ಆದರೆ ತನ್ನನ್ನು ಮಾತ್ರ ಯಾರೂ ಏನೂ ಸಹ ಎನ್ನಬಾದರು ಎಂಬುದು ಆತನ ಉದ್ದೇಶ ಎಂದೂ ಸಹ ಕಾಲೆಳೆದರು.
ಇನ್ನು ಆಗಾಗ ವೃಂದಾವನ ದೇವಾಲಯಕ್ಕೆ ಭೇಟಿಯಾಗುವ ಕೊಹ್ಲಿಯ ನಡೆಯನ್ನು ಪ್ರಶ್ನಿಸಿದ ಭಕ್ತರು ಅಲ್ಲ ಗುರು ಇಷ್ಟೆಲ್ಲ ಕೀಳುಮಟ್ಟದ ಮನೋಭಾವ ಇರುವ ನೀನು ಕ್ರಿಕೆಟ್ನಲ್ಲಿ ಇಂಥಹ ಕಚಡ ಕೆಲಸಗಳನ್ನು ಮಾಡಿ ಇತರರಿಗೆ ಬೇಸರ ತಂದು ದೇವರ ಬಳಿ ಬಂದು ಕುಳಿತುಬಿಟ್ಟರೆ ಸಾಕಾ ಎಂದು ಪ್ರಶ್ನಿಸಿದ್ದಾರೆ. ಇಂತಹ ಕೆಲಸ ಮಾಡಿ ದೇವಾಲಯಕ್ಕೆ ಬಂದು ಭಕ್ತಿಯ ನಾಟಕ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದೂ ಸಹ ಕಿಡಿಕಾರಿದ್ದಾರೆ.

