HomeIndia2 ಕೋಟಿಗೂ ಹೆಚ್ಚು ಫಾಲೋವರ್ಸ್ ಇರೋ ಕಾಕ್ರೋಚ್ ಜನತಾ ಪಾರ್ಟಿಗೆ ಬಿಗ್ ಶಾಕ್: ಅಭಿಜೀತ್ ದಿಪ್ಕೆ...

2 ಕೋಟಿಗೂ ಹೆಚ್ಚು ಫಾಲೋವರ್ಸ್ ಇರೋ ಕಾಕ್ರೋಚ್ ಜನತಾ ಪಾರ್ಟಿಗೆ ಬಿಗ್ ಶಾಕ್: ಅಭಿಜೀತ್ ದಿಪ್ಕೆ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್

ಬೆಂಗಳೂರು: ದೇಶಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ವ್ಯಂಗ್ಯಾತ್ಮಕ ಕಾಕ್ರೋಚ್ ಜನತಾ ಪಾರ್ಟಿ (CJP) ಯ ಅಕೌಂಟ್‌ಗಳು ಒಂದಾದ ಮೇಲೊಂದರಂತೆ ಡಿಲೀಟ್ ಹಾಗೂ ಹ್ಯಾಕ್ ಆಗುತ್ತಿರುವುದು ಇಂಟರ್ನೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ವೈಯಕ್ತಿಕ ಇನ್‌ಸ್ಟಾಗ್ರಾಮ್ ಹ್ಯಾಕ್ ಆಗಿದ್ದರೆ, ಇತ್ತ ಭಾರತ ಸರ್ಕಾರದ ಕಾನೂನು ಬೇಡಿಕೆಗೆ ಸ್ಪಂದಿಸಿ ಪಕ್ಷದ ಅಧಿಕೃತ ಎಕ್ಸ್ (X) ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ .

ಡಿಜಿಟಲ್ ಕ್ರಾಂತಿ ಸೃಷ್ಟಿಸಿದ್ದ ಕಾಕ್ರೋಚ್ ಪಾರ್ಟಿ

1 ವಾರದಲ್ಲಿ 1 ಕೋಟಿ ಫಾಲೋವರ್ಸ್: ಸಾಮಾಜಿಕ ಜಾಲತಾಣಗಳಲ್ಲಿ @cockroachjantaparty ಹ್ಯಾಂಡಲ್ ಮೂಲಕ ಕೇವಲ “ಯುವಕರಿಂದ, ಯುವಕರಿಗಾಗಿ, ಯುವಕರ ಪ್ರಗತಿಗಾಗಿ” ಆರಂಭವಾದ ಈ ಪೇಜ್, ಆರಂಭವಾದ ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 1 ಕೋಟಿಗೂ (10 Million) ಹೆಚ್ಚು ಫಾಲೋವರ್ಸ್ ಪಡೆದು ಇತಿಹಾಸ ಬರೆದಿತ್ತು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾತೆ ಹ್ಯಾಕ್ ಆದ್ರೂ ಪ್ರೊಫೈಲ್ ಲೈವ್?:

“ನನ್ನ ಇನ್‌ಸ್ಟಾಗ್ರಾಮ್ ಲಾಗಿನ್ ಪ್ರವೇಶವನ್ನು ನಾನು ಕಳೆದುಕೊಂಡಿದ್ದೇನೆ. ಮೆಟಾ (Meta) ಸಂಸ್ಥೆ ಬ್ಯಾಕಪ್ ಅಕೌಂಟ್ ಅನ್ನು ಡಿಲೀಟ್ ಮಾಡಿದೆ” ಎಂದು ದಿಪ್ಕೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಾಕಿದ್ದಾರೆ. ಆದರೆ ವಿಶೇಷವೆಂದರೆ ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದಾಗ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಇನ್ನೂ ಸಾರ್ವಜನಿಕರಿಗೆ ಕಾಣಿಸುತ್ತಿದೆ ಎನ್ನಲಾಗಿದೆ

CJI ಹೇಳಿಕೆಯಿಂದ ಶುರುವಾದ ಕಿಡಿ:

ಮೇ 15 ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ನಿರುದ್ಯೋಗಿ ಯುವಕರನ್ನು ‘ಜಿರಳೆಗಳು’ ಮತ್ತು ‘ಪರಾವಲಂಬಿಗಳು’ ಎಂದು ಕರೆದಿದ್ದಾರೆ ಎಂಬ ಸುದ್ದಿ ಹರಿದಾಡಿದ್ದೇ ಈ ಆಂದೋಲನಕ್ಕೆ ಕಾರಣ. ಇದರಿಂದ ಆಕ್ರೋಶಗೊಂಡ ಮಹಾರಾಷ್ಟ್ರ ಮೂಲದ ಮಾಜಿ ಆಪ್ (AAP) ಕಾರ್ಯಕರ್ತ ಅಭಿಜೀತ್ ದಿಪ್ಕೆ ಈ ವ್ಯಂಗ್ಯಾತ್ಮಕ ಪಕ್ಷ ಕಟ್ಟಿದ್ದರು.

ಸಿಜೆಐ ನೀಡಿದ್ದ ಕಡಕ್ ಸ್ಪಷ್ಟನೆ:

ಈ ವಿವಾದ ತೀವ್ರ ಸ್ವರೂಪ ಪಡೆದಾಗ ಸ್ಪಷ್ಟನೆ ನೀಡಿದ್ದ ಮುಖ್ಯ ನ್ಯಾಯಮೂರ್ತಿಗಳು, “ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ನಕಲಿ ಮತ್ತು ಬೋಗಸ್ ಪದವಿಗಳನ್ನು ಪಡೆದು ಸಮಾಜವನ್ನು ವಂಚಿಸುವ ವಕೀಲರನ್ನು ಮಾತ್ರ ನಾನು ಹಾಗೆ ಕರೆದಿದ್ದೆನೇ ಹೊರತು ದೇಶದ ಪ್ರಾಮಾಣಿಕ ಯುವಕರನ್ನಲ್ಲ” ಎಂದು ಸ್ಪಷ್ಟಪಡಿಸಿದ್ದರು.

CJP ಯ ವಿಚಿತ್ರ ರೂಲ್ಸ್ ಏನಾಗಿತ್ತು?

ಇನ್‌ಸ್ಟಾಗ್ರಾಮ್‌ನಲ್ಲಿ ಯುವಕರು ಮುಗಿಬಿದ್ದು ಈ ಪೇಜ್ ಫಾಲೋ ಮಾಡಲು ಕಾರಣ ಅದರ ಬಯೋ (Bio) ನಲ್ಲಿದ್ದ ಈ ವಿಚಿತ್ರ ರೂಲ್ಸ್:

ನಿರುದ್ಯೋಗಿಯಾಗಿರಬೇಕು (Unemployed).

ಸಖತ್ ಸೋಮಾರಿಯಾಗಿರಬೇಕು (Lazy).

ದಿನದ 24 ಗಂಟೆಯೂ ಆನ್‌ಲೈನ್‌ನಲ್ಲಿರಬೇಕು (Chronically Online).

ಪ್ರೊಫೆಷನಲ್ ಆಗಿ ಕಿರುಚಾಡುವ ಸಾಮರ್ಥ್ಯ ಹೊಂದಿರಬೇಕು

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular