HomeKarnatakaBREAKING: ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಹಕ್ಕುಪತ್ರ, ಪ್ರಮಾಣಪತ್ರಗಳ ಮೂಲಕವೂ ಇ-ಸ್ವತ್ತು ನಮೂನೆ ಪಡೆಯಲು...

BREAKING: ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಹಕ್ಕುಪತ್ರ, ಪ್ರಮಾಣಪತ್ರಗಳ ಮೂಲಕವೂ ಇ-ಸ್ವತ್ತು ನಮೂನೆ ಪಡೆಯಲು ಅವಕಾಶ

ಬೆಂಗಳೂರು: ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ತಮ್ಮ ಆಸ್ತಿ ಹಕ್ಕುಗಳ ದಾಖಲೆ ಇ-ಸ್ವತ್ತು ಪಡೆಯಲು ಇದ್ದ ಗೊಂದಲಗಳನ್ನು ಸರಿಪಡಿಸಲಾಗಿದೆ ಹಾಗೂ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಅಧಿಕಾರಿಗಳೊಂದಿಗೆ ಇ-ಸ್ವತ್ತು 2.0 ತಂತ್ರಾಂಶದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

ಗ್ರಾಮೀಣ ಭಾಗದ ನಾಗರಿಕರಿಗೆ ಆಸ್ತಿ ದಾಖಲೆಗಳನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಚಾಲನೆ ನೀಡಲಾಗಿದ್ದ ‘ಇ-ಸ್ವತ್ತು 2.0’ ತಂತ್ರಾಂಶ ಮತ್ತು ನಿಯಮಾವಳಿಗಳಲ್ಲಿ ಕಂಡುಬಂದಿದ್ದ ಪ್ರಮುಖ ನ್ಯೂನತೆಗಳನ್ನು ಈಗಾಗಲೇ ಸರ್ಕಾರ ಸರಿಪಡಿಸಿದೆ. ಸಾರ್ವಜನಿಕರು ಹಾಗೂ ವಿವಿಧ ವಲಯಗಳಿಂದ ಬಂದ ಬೇಡಿಕೆಗಳಿಗೆ ಅನುಗುಣವಾಗಿ ನಿಯಮಗಳಲ್ಲಿ ಮಹತ್ವದ ಮಾರ್ಪಾಡುಗಳನ್ನು ತಂದು, ಈ ಹಿಂದೆ ಇದ್ದ ತಾಂತ್ರಿಕ ಹಾಗೂ ಕಾನೂನಾತ್ಮಕ ಅಡಚಣೆಗಳನ್ನು ನಿವಾರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಕಂದಾಯ ಇಲಾಖೆಯ ದಾಖಲೆಗಳಿದ್ದರೂ ಇ-ಸ್ವತ್ತಿನಲ್ಲಿ ನಮೂನೆ ಪಡೆಯಲು ಎದುರಾಗುತ್ತಿದ್ದ ತೊಂದರೆಯನ್ನು ನಿವಾರಿಸಲಾಗಿದೆ. ಇನ್ನು ಮುಂದೆ ಕರ್ನಾಟಕ ಭೂ-ಕಂದಾಯ ಅಧಿನಿಯಮದಡಿ ವಿತರಿಸಲಾದ ಹಕ್ಕುಪತ್ರಗಳು, ಮನೆದಳ ಮತ್ತು ಕಣಮನೆ ಪ್ರಮಾಣ ಪತ್ರಗಳ ಮೂಲಕವೂ ನಮೂನೆಗಳನ್ನು ಪಡೆಯಲು ನೇರ ಅವಕಾಶ ಕಲ್ಪಿಸಲಾಗಿದೆ.

ನೋಂದಾಯಿತ ದಾಖಲೆಗಳಿಲ್ಲದ ಕಾರಣ ಇ-ಸ್ವತ್ತು ವ್ಯಾಪ್ತಿಯಿಂದ ಹೊರಗುಳಿದಿದ್ದ ಆಸ್ತಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ:

ಕೃಷಿ ಭೂಮಿಯಲ್ಲಿ ವಾಸಿಸುವ/ಕೃಷಿ ಉದ್ದೇಶದ ಮೂಲ ಮಾಲೀಕರ ಕಟ್ಟಡಗಳು 

ಸರ್ಕಾರಿ ವಸತಿ ಯೋಜನೆಗಳಡಿ ಕೃಷಿ ಭೂಮಿಯಲ್ಲಿ ಸೃಜನೆಯಾಗಿರುವ ಕಟ್ಟಡಗಳು 

ಗ್ರಾಮ ಠಾಣಾಯಲ್ಲಿ ಸೂಕ್ತ ನೋಂದಾಯಿತ ದಾಖಲೆಗಳಿಲ್ಲದ ಕಟ್ಟಡಗಳು

ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾಗಿರುವ ಆಸ್ತಿಗಳನ್ನು ಇ-ಸ್ವತ್ತು 2.0 ತಂತ್ರಾಂಶದ ಮೂಲಕ ನಮೂನೆ ವಿತರಿಸಿ, ಗ್ರಾಮ ಪಂಚಾಯಿತಿಯ ತೆರಿಗೆ ವ್ಯಾಪ್ತಿಗೆ ತರಲು ಕ್ರಮ.

ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಪಂಚಾಯಿತಿ ಮಟ್ಟದಲ್ಲಿ ಅನಗತ್ಯವಾಗಿ ವಿಳಂಬವಾಗುತ್ತಿದ್ದ ಸಮಸ್ಯೆಗೆ ಕಡಿವಾಣ ಹಾಕಲಾಗಿದೆ. ಅರ್ಜಿಗಳ ಇತ್ಯರ್ಥಕ್ಕಾಗಿ ಎಲ್ಲ ಹಂತಗಳಲ್ಲೂ ಕಟ್ಟುನಿಟ್ಟಾದ ಕಾಲಮಿತಿ ನಿಗದಿಪಡಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ‘ಸ್ವಯಂಚಾಲಿತ ಅನುಮೋದನೆ’ ಪ್ರಕ್ರಿಯೆ ಜಾರಿಗೆ ಬರಲಿದೆ.

ಸಾರ್ವಜನಿಕರು ತಮ್ಮ ಆಸ್ತಿಗೆ ಹೊಸದಾಗಿ ‘ನಮೂನೆ-11ಬಿ’ ಪಡೆಯಲು ಎದುರಿಸುತ್ತಿದ್ದ ಕಾಲಮಿತಿಯ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಮೇಲ್ಮನವಿ ಸಲ್ಲಿಸುವ ಅವಧಿಯನ್ನು 30 ಸೆಪ್ಟೆಂಬರ್, 2026 ರವರೆಗೆ ವಿಸ್ತರಿಸಲಾಗಿದೆ.

ಈ ಮಹತ್ವದ ಬದಲಾವಣೆಗಳಿಂದಾಗಿ ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ತಮ್ಮ ಆಸ್ತಿ ಹಕ್ಕುಗಳ ದಾಖಲೆ ಇ-ಸ್ವತ್ತು ಪಡೆಯಲು ಇದ್ದ ಗೊಂದಲಗಳನ್ನು ಸರಿಪಡಿಸಲಾಗಿದೆ ಹಾಗೂ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular