HomeLatest Newsಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್: ಡೆತ್ ನೋಟ್ ಬರೆದಿಟ್ಟು ಸಂತ್ರಸ್ತ ಯುವತಿ...

ಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್: ಡೆತ್ ನೋಟ್ ಬರೆದಿಟ್ಟು ಸಂತ್ರಸ್ತ ಯುವತಿ ಆತ್ಮಹತ್ಯೆ

ಭೋಪಾಲ್: ಪಿಎಚ್​ಡಿ ವಿದ್ಯಾರ್ಥಿನಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್ ಮಾಡಿದ್ದು, ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ದಾಟಿಯಾಳದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ವಿದ್ಯಾರ್ಥಿನಿಗೆ ಮತ್ತು ಬರುವ ಔಷಧ ಕುಡಿಸಿ, ಅತ್ಯಾಚಾರವೆಸಗಿ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ, ಇದಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೋಗೇಶ್ ರಾವತ್ ಎಂಬಾತ ವಿದ್ಯರಥಿನಿ ಮೇಲೆ ಅತ್ಯಚಹಾರವೆಸಗಿ ಈ ಕೃತ್ಯವೆಸಗಿದ್ದಾನೆ. ಗ್ವಾಲಿಯರ್‌ನಲ್ಲಿದ್ದಾಗ ವಿದ್ಯಾರ್ಥಿನಿ ಪಿಎಚ್‌ಡಿ ಓದುತ್ತಿದ್ದಳು. ಪೊಲೀಸರ ಪ್ರಕಾರ, ಆಕೆಯ ಸ್ನೇಹಿತರೊಬ್ಬರ ಸಹೋದರ ಯೋಗೇಶ್ ರಾವತ್ ಜೊತೆ ಆಕೆಗೆ ಸ್ನೇಹ ಬೆಳೆಯಿತು. ರಾವತ್ ಆಕೆಯನ್ನು ಗ್ವಾಲಿಯರ್‌ನ ಹೋಟೆಲ್‌ಗೆ ಕರೆಸಿ, ಮಾದಕ ವಸ್ತು ಸೇವಿಸುವಂತೆ ಒತ್ತಾಯಿಸಿ, ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ಹಲ್ಲೆಯ ಸಮಯದಲ್ಲಿ ರಾವತ್ ಆಕ್ರೆಯ ಅಶ್ಲೀಲ ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಮತ್ತೆ ಹೋಟೆಲ್‌ಗೆ ಕರೆಸಿ, ಎರಡನೇ ಬಾರಿಗೆ ಅತ್ಯಾಚಾರ ಎಸಗಿದ್ದಾನೆ. ಮಾರ್ಚ್ 13 ಮತ್ತು 15 ರಂದು ಈ ಘಟನೆ ನಡೆದಿವೆ.

ಕಿರುಕುಳದಿಂದ ಆಘಾತಕ್ಕೊಳಗಾದ ಯುವತಿ ಮಾರ್ಚ್ 15 ರಂದು ಗ್ವಾಲಿಯರ್‌ನ ಪದವ್ ಪೊಲೀಸ್ ಠಾಣೆಗೆ ತೆರಳಿ ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಶೀಘ್ರದಲ್ಲೇ, ಆಕೆ ದಾಟಿಯಾದ ತಮ್ಮ ಮನೆಗೆ ಮರಳಿದರು, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯೋಗೇಶ್ ರಾವತ್ ಮತ್ತು ಅವರ ಇಬ್ಬರು ಸಹೋದರಿಯರು ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಾದ ನಂತರ, ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಅಶೋಕ್ ನಗರದಿಂದ ರಾವತ್‌ನನ್ನು ಬಂಧಿಸಿದರು. ದೂರುದಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ನೇಹಿತೆಯೊಂದಿಗೆ ಫೂಲ್ ಬಾಗ್‌ಗೆ ಬಂದಿದ್ದರು, ನಂತರ ಅವರು ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular