ಶಿವಮೊಗ್ಗ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದಾರೆ. ಬುದ್ದ ನಗರದ ಮಹಮದ್ ಇಕ್ಬಾಲ್(62), ನುಸ್ರತ್ ಬಾನು(54), ಮೊಹಮ್ಮದ್ ಫಾಜಿಲ್(35), ಮೊಹಮ್ಮದ್ ಆದಿಲ್(32) ನಾಪತ್ತೆಯಾದವರು ಎಂದು ಹೇಳಲಾಗಿದೆ.
ಏಪ್ರಿಲ್ 15ರಿಂದಲೂ ಕುಟುಂಬದವರು ನಾಪತ್ತೆಯಾಗಿದ್ದಾರೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಗಳಾದ ಒಂದೇ ಕುಟುಂಬದ 4 ಮಂದಿ ಏ.15 ರಿಂದ ಕಾಣೆಯಾಗಿದ್ದಾರೆ.
ಮೊಹಮ್ಮದ್ ಇಕ್ಬಾಲ್: 62 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.
ನಸ್ರತ್ ಬಾನು: 54 ವರ್ಷ, 5.2 ಅಡಿ ಎತ್ತರ, ದಪ್ಪನೆ ಮೈಕಟ್ಟು, ಗೋಧಿ ಮೈಬಣ್ಣ, ಸೀಳು ತುಟಿ ಹೊಂದಿರುತ್ತಾರೆ.
ಮೋಹಮ್ಮದ್ ಫಾಜಿಲ್: 35 ವರ್ಷ, 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಎದೆಯಲ್ಲಿ ಚರ್ಮಗಂಟು ಇರುತ್ತದೆ.
ಮೊಹಮ್ಮದ್ ಆದಿಲ್; 32 ವರ್ಷ, 5.4 ಅಡಿ ಎತ್ತರ, ದಪ್ಪ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.
ಈ ನಾಲ್ಕು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು 08182-261414/ 9972426144 /9480803345/ 6264571710 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

