HomeKarnatakaLokayukta Karnataka : ಕರ್ನಾಟಕ ಲೋಕಾಯುಕ್ತ ಪೊಲೀಸರು ನಿರ್ವಹಿಸಬೇಕಾದ ಕರ್ತವ್ಯಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

Lokayukta Karnataka : ಕರ್ನಾಟಕ ಲೋಕಾಯುಕ್ತ ಪೊಲೀಸರು ನಿರ್ವಹಿಸಬೇಕಾದ ಕರ್ತವ್ಯಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನಿಖಾ ಅಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆಗಳಿಗೆ ಸಮಗ್ರ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ತನಿಖೆಯಲ್ಲಿನ ವಿಳಂಬವನ್ನು ತಪ್ಪಿಸಲು ಮತ್ತು ಪಾರದರ್ಶಕತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮತ್ತು ಭ್ರಷ್ಟಾಚಾರಕ್ಕೆ ಲಗಾಮು ಹಾಕಲು ಕರ್ನಾಟಕ ಲೋಕಾಯುಕ್ತ ಈಗ ಫೀಲ್ಡ್‌ಗೆ ಇಳಿಯಲು ಸಜ್ಜಾಗಿದೆ. ಕೇವಲ ಕಚೇರಿಗೆ ಸೀಮಿತವಾಗದೆ, ಇನ್ಮುಂದೆ ಲೋಕಾಯುಕ್ತ ಅಧಿಕಾರಿಗಳೇ ಸಾರ್ವಜನಿಕರ ಮನೆ ಬಾಗಿಲಿಗೆ ಬರಲಿದ್ದಾರೆ. ಬಾಕಿ ಇರುವ ಸಾವಿರಾರು ತನಿಖೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮತ್ತು ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಕರ್ತವ್ಯಲೋಪ ಎಸಗುವ ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಲಾಗಿದೆ.

1. ಕ್ರಿಮಿನಲ್ ಪ್ರಕರಣಗಳ ತ್ವರಿತ ತನಿಖೆ

  • ದಿನಾಂಕ 14-03-2016 ಕ್ಕಿಂತ ಮೊದಲು ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
  • 6 ವರ್ಷಗಳಿಗಿಂತ ಹಳೆಯ ಪ್ರಕರಣಗಳ ಪ್ರಗತಿ ವರದಿಯನ್ನು ಪ್ರತಿ ತಿಂಗಳು ಸಲ್ಲಿಸುವುದು ಕಡ್ಡಾಯ.
  • ಅಭಿಯೋಜನಾ ಮಂಜೂರಾತಿ (Sanction for Prosecution) ಬಾಕಿ ಇರುವ ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಂಬಂಧಪಟ್ಟ ಪ್ರಾಧಿಕಾರವನ್ನು ಖುದ್ದಾಗಿ ಭೇಟಿ ಮಾಡಿ ಅನುಮತಿ ಪಡೆಯಲು ಕ್ರಮ ವಹಿಸಬೇಕು.

2. ದೂರು ಪ್ರಕರಣಗಳ ವಿಲೇವಾರಿಗೆ ಕಾಲಮಿತಿ

  • ಲೋಕಾಯುಕ್ತ ಕಾಯ್ದೆ 1984ರ ಕಲಂ 9 ಮತ್ತು 12ರ ಅಡಿಯಲ್ಲಿನ ತನಿಖೆಗಳನ್ನು ನಿಗದಿತ ಕಾಲಮಿತಿಯೊಳಗೆ ಮುಗಿಸಬೇಕು.
  • ತನಿಖಾ ವರದಿ ಸಲ್ಲಿಸಲು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಯಿಂದ ವಿವರಣೆ ಪಡೆಯಲಾಗುವುದು. ತೃಪ್ತಿಕರ ಕಾರಣವಿಲ್ಲದಿದ್ದರೆ ಅದನ್ನು ‘ಕರ್ತವ್ಯಲೋಪ’ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುವುದು.

3. ನ್ಯಾಯಾಲಯದ ವಿಚಾರಣೆ ಮತ್ತು ಸಾಕ್ಷಿಗಳ ರಕ್ಷಣೆ

  • ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಸಾಕ್ಷಿಗಳು ಗೈರುಹಾಜರಾಗದಂತೆ ನೋಡಿಕೊಳ್ಳಲು ಸಮ್ಮನ್ಸ್ ಜಾರಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು.
  • ಅಗತ್ಯವಿದ್ದಲ್ಲಿ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಹಿರಿಯ ಅಧಿಕಾರಿಗಳು ನ್ಯಾಯಾಲಯದ ವಾರಂಟ್‌ಗಳನ್ನು ಜಾರಿಗೊಳಿಸಲು ಸ್ವತಃ ಆಸಕ್ತಿ ವಹಿಸಬೇಕು.

4. ಸಾರ್ವಜನಿಕರ ದೂರು ಸ್ವೀಕಾರಕ್ಕೆ ತಾಲೂಕು ಭೇಟಿ

  • ಸಾರ್ವಜನಿಕರಿಗೆ ಅನುಕೂಲವಾಗುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಅಥವಾ ಮೇಲ್ಪಟ್ಟ ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ ಒಂದು ಬಾರಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ದೂರುಗಳನ್ನು ಸ್ವೀಕರಿಸಬೇಕು.
  • ಈ ಭೇಟಿಯ ಬಗ್ಗೆ 5 ದಿನಗಳ ಮುಂಚಿತವಾಗಿ ಸ್ಥಳೀಯ ಪತ್ರಿಕೆ/ಮಾಧ್ಯಮಗಳ ಮೂಲಕ ಪ್ರಚಾರ ನೀಡಬೇಕು.

5. ವಿವಿಧ ಇಲಾಖೆಗಳ ಮೇಲೆ ನಿಗಾ ಮತ್ತು ಭೇಟಿ

ಲೋಕಾಯುಕ್ತ ಅಧಿಕಾರಿಗಳು ಈ ಕೆಳಗಿನ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸಾರ್ವಜನಿಕ ಕೆಲಸಗಳಲ್ಲಿನ ವಿಳಂಬವನ್ನು ಪರಿಶೀಲಿಸಬೇಕು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಕಂದಾಯ ಇಲಾಖೆ: ತಹಶೀಲ್ದಾರ್ ಕಚೇರಿ, ಭೂ ದಾಖಲೆಗಳ ಕಚೇರಿಗಳಲ್ಲಿ ಪಹಣಿ, ಖಾತಾ ಬದಲಾವಣೆ ಮತ್ತು ವೃದ್ಧಾಪ್ಯ ವೇತನ ವಿತರಣೆಯಲ್ಲಿನ ವಿಳಂಬ ತಪಾಸಣೆ.
  • ಸ್ಥಳೀಯ ಸಂಸ್ಥೆಗಳು: ನಗರಸಭೆ, ಪುರಸಭೆ ಹಾಗೂ ಪಂಚಾಯತ್‌ಗಳಲ್ಲಿ ಕಟ್ಟಡ ಪರವಾನಗಿ ಮತ್ತು ವ್ಯಾಪಾರ ಪರವಾನಗಿ ನೀಡಿಕೆಯಲ್ಲಿನ ಭ್ರಷ್ಟಾಚಾರ ತಡೆ.
  • ಆರೋಗ್ಯ ಮತ್ತು ಶಿಕ್ಷಣ: ಜಿಲ್ಲಾ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು ಮತ್ತು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಗುಣಮಟ್ಟ ಪರಿಶೀಲನೆ.
  • ಕೃಷಿ ಮತ್ತು ತೋಟಗಾರಿಕೆ: ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮತ್ತು ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಕುರಿತ ಸಮಸ್ಯೆಗಳ ವಿಚಾರಣೆ.

6. ತಂತ್ರಜ್ಞಾನದ ಬಳಕೆ

  • ದೂರುಗಳ ಸ್ಥಿತಿಗತಿಯನ್ನು ದಾಖಲಿಸಲು ‘ಸಿಸ್ಲಾಕ್’ (SISLOK) ತಂತ್ರಾಂಶವನ್ನು ಬಳಸಬೇಕು.
  • ದೂರುಗಳನ್ನು ಇ-ಮೇಲ್ ಮೂಲಕವೂ ಸಲ್ಲಿಸಲು ಅವಕಾಶವಿದ್ದು, [email protected] ವಿಳಾಸಕ್ಕೆ ಕಳುಹಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular