ಇದು ಸೋಶಿಯಲ್ ಮೀಡಿಯಾ ಯುಗ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತವಾಗಿ ವೈರಲ್ ಆಗುತ್ತಿರುವುದನ್ನು ನೀವು ನೋಡಿರಬಹುದು. ಈ ಸಾಲಿಗೆ ಈಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು, ಇದು ನಿಮ್ಮನ್ನು ಆಲೋಚನೆಗೆ ದೂಡುವುದಲ್ಲದೆ ಮುಜುಗರಕ್ಕೀಡು ಮಾಡುತ್ತದೆ.
ಮುಂಬೈನ ಚರ್ಚ್ಗೇಟ್ ರೈಲ್ವೆ ನಿಲ್ದಾಣದ ಹೊರಗಿನಿಂದ ಇತ್ತೀಚೆಗೆ ಒಂದು ವಿಲಕ್ಷಣ ವಿಡಿಯೋ ಹೊರಬಿದ್ದಿದೆ. ಅಲ್ಲಿ ಜೋಡಿಯೊಂದು ರಾತ್ರಿಯ ಕತ್ತಲಲ್ಲಿ ಫುಟ್ಪಾತ್ ಮೇಲೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಅಲ್ಲಿಗೆ ಬಂದ ದಾರಿಹೋಕರೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಕನಸುಗಳ ನಗರಿ ಮುಂಬೈನಲ್ಲಿ ರಾತ್ರಿಯ ವೇಳೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಚರ್ಚ್ಗೇಟ್ ರೈಲ್ವೆ ನಿಲ್ದಾಣದ ಹೊರಗೆ ಬಹಿರಂಗವಾಗಿಯೇ ಜೋಡಿಯೊಂದು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿತ್ತು. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ, ಫುಟ್ಪಾತ್ ಮೇಲೆ ನಡೆಯುತ್ತಿದ್ದ ಆ ತಪ್ಪಾದ ಕೆಲಸವನ್ನು ತಡೆದಿದ್ದಾನೆ. “ಓಯ್ ಭಾಯ್, ಬಹಿರಂಗವಾಗಿ ಏನು ಮಾಡುತ್ತಿದ್ದೀರಿ?” ಎಂದು ಜೋರಾಗಿ ಕೂಗುತ್ತಾ ಅವರನ್ನು ಪ್ರಶ್ನಿಸಿದ್ದಾನೆ.
ಸಾರ್ವಜನಿಕರ ಆಕ್ರೋಶ
ಈ ವಿಡಿಯೋದಲ್ಲಿ ಆಶ್ಚರ್ಯಕರ ವಿಷಯವೆಂದರೆ, ಅದೇ ಫುಟ್ಪಾತ್ ಮೇಲೆ ಕೆಲವೇ ಮೀಟರ್ಗಳ ದೂರದಲ್ಲಿ ಇತರ ಜನರು ಮಲಗಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.ಕೆಲವರು ಹೋಟೆಲ್ ರೂಮ್ಗಳ ಬಾಡಿಗೆ ಹೆಚ್ಚಾಗಿರುವುದರಿಂದಲೇ ಹೀಗಾಗುತ್ತಿದೆ ಎಂದು ಹಾಸ್ಯವಾಗಿ ಕಾಮೆಂಟ್ ಮಾಡಿದ್ದಾರೆ.ಮತ್ತೆ ಕೆಲವರು ಮದ್ಯದ ಅಮಲಿನಲ್ಲಿ ಇಂತಹ ಕೆಲಸಗಳನ್ನು ಮಾಡುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಚರ್ಚ್ಗೇಟ್ ಮುಂಬೈ ವೆಸ್ಟರ್ನ್ ಲೈನ್ನ ಕೊನೆಯ ನಿಲ್ದಾಣವಾಗಿದ್ದು, ಇಲ್ಲಿ ಹಗಲು-ರಾತ್ರಿ ಜನರ ಓಡಾಟವಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಅನುಪಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನೆ ಎತ್ತಿದ್ದಾರೆ.

