HomeLatest NewsBREAKING: ವಿಜಯ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಕೈ ಕೊಯ್ದುಕೊಂಡ ವಿಸಿಕೆ ಕಾರ್ಯಕರ್ತ: ಚೆನ್ನೈ ಕಚೇರಿ...

BREAKING: ವಿಜಯ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಕೈ ಕೊಯ್ದುಕೊಂಡ ವಿಸಿಕೆ ಕಾರ್ಯಕರ್ತ: ಚೆನ್ನೈ ಕಚೇರಿ ಮುಂದೆ ಹೈಡ್ರಾಮಾ

ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ವಿಳಂಬವಾಗುತ್ತಿದ್ದಂತೆ ನಟ ವಿಜಯ್ ಅಭಿಮಾನಿಗಳು ಆತ್ಮಹತ್ಯೆಯತ್ನಹ ಯತ್ನ ನಡೆಸಿ ಹುಚ್ಚಾಟ ಮೆರೆಯುತ್ತಿದ್ದಾರೆ. ಮತ್ತೊಂದೆ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷಕ್ಕೆ ಬೆಂಬಲ ಘೋಷಿಸುವಂತೆ ಒತ್ತಾಯಿಸಿ ವಿಸಿಕೆ ಪಕ್ಷದ ಕಾರ್ಯಕರ್ತರೊಬ್ಬರು ಕೈ ಕೊಯ್ದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 108 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆಗೆ ನಿರ್ಧಿಷ್ಟ ಸಂಖ್ಯಾ ಬಲ ಕೊರತೆ ಹಿನ್ನೆಲೆಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸರ್ಕಾರ ರಚನೆಗೆ ಸಮ್ಮತಿ ಸೂಚಿಸಿಲ್ಲ. ಸರ್ಕಾರ ರಚನೆಗೆ ಅಗತ್ಯವಾಗಿರುವ 118 ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆ ಮಾಡುವಂತೆ ವಿಜಯ್ ಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗಾಗಿ ವಿಜಯ್ ಇತರ ಪಕ್ಷಗಳ ಬೆಂಬಲ ಕೋರುತ್ತಿದ್ದು, ಕಸರತ್ತು ನಡೆಸುತ್ತಿದ್ದಾರೆ. ಟ್ವಿಕೆ ಪಕ್ಷದ ಸರ್ಕಾರ ರಚನೆಗೆ ವಿಳಂಬವಾಗುತ್ತಿರುವುದಕ್ಕೆ ತಾಳ್ಮೆ ಕಳೆದುಕೊಳ್ಳುತ್ತಿರುವ ಕಾರ್ಯಕರ್ತರು ಅತಿರೇಕದ ವರ್ತನೆ ತೋರುತ್ತಿದ್ದಾರೆ.

ಒಂದೆಡೆ ರಾಜ್ಯಪಾಲರ ವಿಳಂಬ ಧೋರಣೆ ಖಂಡಿಸಿ ಟಿವಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿ ವಿಸಿಕೆ ಪಕ್ಷದ ಕೆಲ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನೈನ ವಿಸಿಕೆ ಪಕ್ಷದ ಕಚೇರಿ ಎದುರು ಪಕ್ಷದ ವೃದ್ಧ ಕಾರ್ಯಕರ್ತರೊಬ್ಬರು, ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸುವಂತೆ ಒತ್ತಾಯಿಸಿ ಕೈಕೊಯ್ದುಕೊಂಡು ಪ್ರತಿಭಟನೆ ಕುಳಿತಿದ್ದಾರೆ.

ಮತ್ತೊಂದೆಡೆ ತಿರುವನ್ವೇಲಿಯಲ್ಲಿ ವಿಜಯ್ ಅವರ ಅಭಿಮಾನಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಸರ್ಕಾರ ರಚನೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನೊಂದ ವಿಜಯ್ ಅಭಿಮಾನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಸಕ್ಕಿರಾಜ (47) ಎಂಬ ವಿಜಯ್ ಅಭಿಮಾನಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ದೇಹದ ಶೇ.50ರಷ್ಟು ಭಾಗ ಸುಟ್ಟು ಹೋಗಿದ್ದು, ಇಸಕ್ಕಿರಾಜ್ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯ್ ಸರ್ಕಾರ ರಚನೆಗೆ ಆಹ್ವಾನಿಸಲು ರಾಜ್ಯಪಾಲರು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಎರಡು ದಿನಗಳ ಹಿಂದೆ ಚೆನ್ನೈನ ಲೋಕಭವನದ ಎದುರು ಟಿವಿಕೆ ಕಾರ್ಯಕರ್ತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಗಮನಿಸಿದ ಪೊಲೀಸರು ಆತನನ್ನು ತಡೆದು ರಕ್ಷಿಸಿದ್ದರು. ಇದೀಗ ತಿರುವನ್ವೇಲಿಯಲ್ಲಿ ವಿಜಯ್ ಅಭಿಮಾನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular